5 Indian Cricketers Failed In Yo-Yo Test: ಏಷ್ಯಾ ಕಪ್ 2023 ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ಇದಕ್ಕೂ ಮುನ್ನ ಆಟಗಾರರ ಫಿಟ್‌’ನೆಸ್ ಮಟ್ಟಗಳು ಉತ್ತಮವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಯೋ-ಯೋ ಟೆಸ್ಟ್‌ ನಡೆಸಿತ್ತು.


COMMERCIAL BREAK
SCROLL TO CONTINUE READING

ಈ ಟೆಸ್ಟ್’ನಲ್ಲಿ ಕೊಹ್ಲಿ 17.2 ಸ್ಕೋರ್ ಮಾಡಿದ್ದು, ಇದರ ಬಗ್ಗೆ ಇನ್’ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಇನ್ನು ಶುಭ್ಮನ್ ಗಿಲ್ 18.7 ಅಂಕ ಗಳಿಸಿ ಕೊಹ್ಲಿಯನ್ನೂ ಹಿಂದಿಕ್ಕಿದ್ದಲ್ಲದೆ, ಅಗ್ರಸ್ಥಾನಿಯಾಗಿದ್ದರು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಕೂಡ ತಮ್ಮ ಯೋ-ಯೋ ಟೆಸ್ಟ್‌’ನಲ್ಲಿ ತೇರ್ಗಡೆಯಾಗಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌’ನಲ್ಲಿ ಯೋ-ಯೋ ಟೆಸ್ಟ್‌’ನಲ್ಲಿ ಫೇಲ್ ಆಗಿ 5 ಆಟಗಾರರು ಆಟದಿಂದ ಹೊರಬಿದ್ದಿದ್ದರು. ಆ ಆಟಗಾರರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.


ಇದನ್ನೂ ಓದಿ: ಬೀಚ್’ನಲ್ಲಿ ಯುಜ್ವೇಂದ್ರ ಚಾಹಲ್ ಪತ್ನಿಯ ಬಿಕಿನಿ ಹಾಟ್ ಫೋಟೋಶೂಟ್!


ಯೋ-ಯೋ ಟೆಸ್ಟ್‌ ಪ್ರಾರಂಭವಾದದ್ದು ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಸಮಯದಲ್ಲಿ. ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂದರೆ ಗಿ ಯೋ-ಯೋ ಟೆಸ್ಟ್‌’ನಲ್ಲಿ ಪಾಸ್ ಆಗಲೇಬೇಕೆಂಬ ಕಡ್ಡಾಯ ನಿಯಮ ತರಲಾಯಿತು. ಹೀಗಿದ್ದಾಗ ಯೋ ಯೋ ಟೆಸ್ಟ್’ನಲ್ಲಿ ವಿಫಲರಾದ ಐವರು ಭಾರತೀಯ ಕ್ರಿಕೆಟಿಗರು ಯಾರೆಂದು ತಿಳಿಯೋಣ.


ಆಫ್-ಸ್ಪಿನ್ನಿಂಗ್ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ T20Is ಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದರು. ಈ ಕಾರಣದಿಂದ ಅವಕಾಶವನ್ನು ಕಳೆದುಕೊಂಡರು. ಆ ಬಳಿಕ ಫಿಟ್ನೆಸ್ ಕಾಪಾಡಿಕೊಂಡ ಸುಂದರ್  ಶ್ರೀಲಂಕಾ ಸರಣಿಯಲ್ಲಿ ಕಂಬ್ಯಾಕ್ ಮಾಡಿದರು.


ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಈ ಟೆಸ್ಟ್’ನಲ್ಲಿ ವಿಫಲರಾಗಿದ್ದರು. ಆದರೆ ಒಂದು ತಿಂಗಳ ನಂತರ ಎಲ್ಲವನ್ನೂ ಸುಧಾರಿಸಿಕೊಂಡು ಬಂದ ಶಮಿ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ಪಡೆದರು.


2017 ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲು, ಯುವರಾಜ್ ಸಿಂಗ್ ಅವರನ್ನು ತಂಡದಿಂದ ಆಶ್ಚರ್ಯಕರವಾಗಿ ಕೈಬಿಡಲಾಯಿತು. ಆ ಬಳಿಕ ಯುವರಾಜ್ ಯೋ-ಯೋ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂತು.


ಇನ್ನು 2018 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಎ ತಂಡವನ್ನು ಪ್ರಕಟಿಸಿದಾಗ, ಸಂಜು ಸ್ಯಾಮ್ಸನ್ ಅದರ ಭಾಗವಾಗಿದ್ದರು. ಆದರೆ, ಯೋ-ಯೋ ಟೆಸ್ಟ್‌’ನಲ್ಲಿ ಸ್ಯಾಮ್ಸನ್ ವಿಫಲರಾದ ಕಾರಣ ಅವರನ್ನು ಕೈಬಿಟ್ಟು ಇಶಾನ್ ಕಿಶನ್ ಅವರನ್ನು ಸೇರಿಸಿಕೊಳ್ಳಲಾಯಿತು.


ಇದನ್ನೂ ಓದಿ: ಸೆಹ್ವಾಗ್ ದಾಖಲೆ ಸರಿಗಟ್ಟಿ ತ್ರಿಶತಕ ಸಿಡಿಸಿದ್ದ ಟೀಂ ಇಂಡಿಯಾದ ಆಟಗಾರನಿಗೆ ಅನ್ಯಾಯ!


ಅಂಬಟಿ ರಾಯುಡು ಕೂಡ ಯೋ-ಯೋ ಟೆಸ್ಟ್‌’ನಲ್ಲಿ ವಿಫಲರಾದರು. ಈ ಕಾರಣದಿಂದ ಸುರೇಶ್ ರೈನಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ರಾಯುಡು ಫಿಟ್ನೆಸ್ ಕಾಪಾಡಿಕೊಂಡು 2018 ರ ಏಷ್ಯಾ ಕಪ್ ಆಡಲು ಹಿಂತಿರುಗಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.