ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇವರೇ: ಇಂದಿಗೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾರೆ ಈ ಶ್ರೇಷ್ಠ ಆಟಗಾರರು!
Team India: 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು.
Team India: ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ಐಸಿಸಿ ಟಿ20 ವಿಶ್ವಕಪ್ (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ʼನಲ್ಲಿ ನಂಬರ್ ಒನ್ ಆಗಿತ್ತು.
2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು.
ಇನ್ನು ಇವರ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇಂದಿಗೂ ಟೀಂ ಇಂಡಿಯಾ ಪರ ಆಡುತ್ತಾ ಮಿಂಚುತ್ತಿದ್ದಾರೆ. ಆ ಆಟಗಾರರು ಯಾರೆಂದು ತಿಳಿಯೋಣ.
ರೋಹಿತ್ ಶರ್ಮಾ:
ನಿರಂತರ ಕಳಪೆ ಫಾರ್ಮ್ ನಡುವೆಯೂ ರೋಹಿತ್ ಶರ್ಮಾಗೆ ಧೋನಿ ಅವಕಾಶ ನೀಡಿದ್ದರು. ಅದೊಂದು ಅವಕಾಶ ರೋಹಿತ್ ಅವರ ಸಂಪೂರ್ಣ ವೃತ್ತಿಜೀವನವನ್ನು ಬದಲಾಯಿಸಿತು. ರೋಹಿತ್ʼರನ್ನು ಏಕದಿನದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಾಡುವಲ್ಲಿ ಧೋನಿ ಕೊಡುಗೆ ನೀಡಿದ್ದಾರೆ. ಅದಾದ ಬಳಿಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಆಗಿ ಮಿಂಚಿದ್ದರು. ಈ ಯಶಸ್ಸಿನ ಹಿಂದೆ ಧೋನಿ ಕೊಡುಗೆ ಪ್ರಮುಖವಾಗಿದೆ ಎಂದೇ ಹೇಳಬಹುದು.
ವಿರಾಟ್ ಕೊಹ್ಲಿ:
ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೊಹ್ಲಿಗೆ ಏಕದಿನದಲ್ಲಿ 3ನೇ ಸ್ಥಾನಕ್ಕೇರುವ ಅವಕಾಶವನ್ನು ನೀಡಿದ್ದು ಕೂಡ ಧೋನಿಯೇ. ಅವರ ಉತ್ತಮ ಪ್ರದರ್ಶನ ಕಂಡ ಧೋನಿ, ಟೆಸ್ಟ್ʼನಲ್ಲೂ ಅವಕಾಶ ನೀಡಿದರು. ಆದರೆ 2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಲಿಲ್ಲ. ಆದರೂ ಸಹ ಧೋನಿ ಕೊಹ್ಲಿಗೆ ನಿರಂತರ ಅವಕಾಶಗಳನ್ನು ನೀಡುತ್ತಾ ಬಂದರು. ಕೊನೆಗೆ ಅಡಿಲೇಡ್ʼನಲ್ಲಿ ಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಕೊಹ್ಲಿ, ಧೋನಿ ನಂಬಿಕೆಯನ್ನು ಉಳಿಸಿಕೊಂಡರು. 2012 ರಲ್ಲಿ ಪರ್ತ್ʼನಲ್ಲಿ ಕೊಹ್ಲಿ ಬದಲಿಗೆ ರೋಹಿತ್ʼಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದರು. ಆದರೆ ಧೋನಿ ತಮ್ಮ ಅಂತಿಮ 11 ರಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಂಡರು. ಈ ಬಗ್ಗೆ ಸ್ವತಃ ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಆ ಸಮಯದಲ್ಲಿ ನಾನು ಉಪನಾಯಕನಾಗಿದ್ದೆ. ಧೋನಿ ಸಲಹೆ ಮೇರೆಗೆ ರೋಹಿತ್ ಬದಲಿಗೆ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆವು ಎಂದಿದ್ದಾರೆ.
ರವಿಚಂದ್ರನ್ ಅಶ್ವಿನ್:
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್ʼಗಳಲ್ಲಿ ಒಬ್ಬರು. ಐಪಿಎಲ್ 2010ರಲ್ಲಿ ಮೊದಲ ಬಾರಿಗೆ ಅಶ್ವಿನ್ʼಗೆ ಆಡುವ ಅವಕಾಶವನ್ನು ಧೋನಿ ನೀಡಿದರು. ಅಂದು ನಂಬಿಕೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ್ದರು. ಧೋನಿ ನಾಯಕತ್ವದಲ್ಲಿ ಅಶ್ವಿನ್ ಐಪಿಎಲ್ʼನಲ್ಲಿ ಸಿಎಸ್‌ಕೆ ಪರ ಆಡಿದ್ದು, ಇವರ ಪ್ರತಿಭೆಯನ್ನು ನೋಡಿ ಆ ಬಳಿಕ ಭಾರತ ತಂಡಕ್ಕೆ ಸೇರ್ಪಡೆಗೊಂಡರು. 2010 ರಲ್ಲಿ ತಂಡ ಸೇರಿದ ಅಶ್ವಿನ್ ಮರು ವರ್ಷ ಅಂದರೆ 2011ರಲ್ಲಿಯೇ 2011 ರ ವಿಶ್ವಕಪ್‌ಗೆ ಆಯ್ಕೆಯಾದರು.
ಇದನ್ನೂ ಓದಿ: ಕೆಮಿಕಲ್ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು!
ರವೀಂದ್ರ ಜಡೇಜಾ:
ರವೀಂದ್ರ ಜಡೇಜಾ ಇಂದು ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ʼಗಳಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರು ವಿಷಯಗಳಲ್ಲೂ ಜಡೇಜಾ ಫುಲ್ ಶೈನ್ ಆಗಿದ್ದಾರೆ. ಇನ್ನು ಜಡೇಜಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಧೋನಿ ಶ್ರಮವಿದೆ. ರವೀಂದ್ರ ಜಡೇಜಾ ಅವರು ಧೋನಿ ನಾಯಕತ್ವದಲ್ಲಿ ಸಿಎಸ್ʼಕೆ ಪರ ಆಡಿದ್ದರು. ಇನ್ನು ಇವರ ಆಟದ ಶೈಲಿಗೆ ಮೆಚ್ಚುಗೆ ಸೂಚಿಸಿದ್ದ ಧೋನಿ ಜಡೇಜಾಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ