ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ ಟೀಂ ಇಂಡಿಯಾ ಫ್ಯಾನ್ಸ್
Cricket Controversy: ಹೀಗಿರುವಾಗ ಭಾರತೀಯ ಅಭಿಮಾನಿಗಳು ತುಂಬಾ ದ್ವೇಷಿಸುತ್ತಿದ್ದ 5 ಲೆಜೆಂಡರಿ ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Cricket Controversy: ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಧರ್ಮವೆಂದು ಪರಿಗಣಿಸಲಾಗುತ್ತದೆ. ಕ್ರಿಕೆಟ್ ಆಟಗಾರರನ್ನು ತಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿಶೇಷವಾಗಿ ಗೌರವಿಸಲಾಗುತ್ತದೆ. ಆದರೆ ಕೆಲ ಕ್ರಿಕೆಟಿಗರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಕೂಡ ನಮಗೆ ತಿಳಿದ ಸಂಗತಿ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು ಕರ್ನಾಟಕದ ಈ ವಿದ್ಯಾಸಂಸ್ಥೆಯಲ್ಲಿ! ಆ ಕಾಲೇಜು ಬೇರಾವುದು ಅಲ್ಲ...
ಹೀಗಿರುವಾಗ ಭಾರತೀಯ ಅಭಿಮಾನಿಗಳು ತುಂಬಾ ದ್ವೇಷಿಸುತ್ತಿದ್ದ 5 ಲೆಜೆಂಡರಿ ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ರಿಕಿ ಪಾಂಟಿಂಗ್:
ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಸೇರಿದ್ದಾರೆ. ರಿಕಿ ಪಾಂಟಿಂಗ್ ವಿಶ್ವ ಕ್ರಿಕೆಟ್ʼನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಇವರು ಹಲವು ದಾಖಲೆಗಳನ್ನು ಹೊಂದಿದ್ದಾರೆ. ODI ನಲ್ಲಿ ಇಲ್ಲಿಯವರೆಗಿನ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರ ಆನ್ ಫೀಲ್ಡ್ ನಡವಳಿಕೆಯಿಂದ ಅನೇಕ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೈದಾನದಲ್ಲಿ ರಿಕಿ ಪಾಂಟಿಂಗ್ ನೀಡುತ್ತಿದ್ದ ವಿಚಿತ್ರ ರೀತಿಯ ಪ್ರತಿಕ್ರಿಯೆಯನ್ನು ನೋಡಿ ಭಾರತೀಯ ಅಭಿಮಾನಿಗಳಲ್ಲಿ ದ್ವೇಷ ಕಾಣಿಸಿಕೊಂಡಿದೆ.
ಆಂಡ್ರ್ಯೂ ಸೈಮಂಡ್ಸ್:
ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ಆದರೆ ಅನೇಕ ಬಾರಿ ಅವರ ಆನ್ ಫೀಲ್ಡ್ ಸ್ಲೆಡ್ಜಿಂಗ್ ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ದ್ವೇಷವನ್ನು ಸೃಷ್ಟಿಸಿದೆ. 2007ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಂಡ್ರ್ಯೂ ಸೈಮಂಡ್ಸ್ ಮತ್ತು ಹರ್ಭಜನ್ ಸಿಂಗ್ ನಡುವೆ ಭಾರೀ ವಿವಾದ ಉಂಟಾಗಿತ್ತು.
ಆಂಡ್ರ್ಯೂ ಫ್ಲಿಂಟಾಫ್
ಆಂಡ್ರ್ಯೂ ಫ್ಲಿಂಟಾಫ್ ಕೂಡ ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರ. 2002ರಲ್ಲಿ ಭಾರತ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಅವರ ಕೆಟ್ಟ ನಡವಳಿಕೆಗೆ ಸಾಕ್ಷಿಯಾಗಿತ್ತು. ಈ ಪಂದ್ಯದ ಗೆಲುವಿನ ನಂತರ ಆಂಡ್ರ್ಯೂ ಫ್ಲಿಂಟಾಫ್ ಮೈದಾನದಲ್ಲಿ ಟಿ-ಶರ್ಟ್ ಕಳಚಿ ಸಂಭ್ರಮಿಸಿದ್ದರು. ಆದರೆ ಅವರ ಈ ವರ್ತನೆಗೆ ಸೌರವ್ ಗಂಗೂಲಿ ತಿರುಗೇಟು ನೀಡಿರುವುದು ತಿಳಿದ ಸಂಗತಿ.
ಜಾವೇದ್ ಮಿಯಾಂದಾದ್:
ಭಾರತೀಯ ಅಭಿಮಾನಿಗಳು ಇಷ್ಟಪಡದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಕೂಡ ಸೇರಿದ್ದಾರೆ. ಜಾವೇದ್ ಮಿಯಾಂದಾದ್ ಭಾರತ ವಿರುದ್ಧ ಹಲವು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಒಂದೊಮ್ಮೆ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ನಂತರ ಜನರು ಅವರನ್ನು ಮರೆತುಬಿಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ: ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಮಾಜಿ ಕೋಚ್ ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ
ಮುಶ್ಫಿಕರ್ ರಹೀಮ್:
ಈ ಪಟ್ಟಿಯಲ್ಲಿ ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಶ್ಫಿಕರ್ ರಹೀಮ್ ಕೂಡ ಸೇರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.