ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 17 ರನ್‌ಗಳ ಸೋಲನ್ನು ಎದುರಿಸಿದೆ. ಈ ಪಂದ್ಯದಲ್ಲಿ ಒಂದು ಬಾರಿ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲು ಹಾಕಿತ್ತು. ಆದರೆ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರ ಕಳಪೆ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ಈ ಮೂಲಕ ಮೂವರು ಆಟಗಾರರು ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯ ಎನಿಸಿಕೊಂಡರು. ಇದರಿಂದಾಗಿ ಭಾರತದ ಕ್ಲೀನ್ ಸ್ವೀಪ್ ಕನಸು ಕನಸಾಗಿಯೇ ಉಳಿಯಿತು. ಇದರ ಜೊತೆಗೆ ರೋಹಿತ್ ಶರ್ಮಾ ನಾಯಕರಾದ ಬಳಿಕ ಭಾರತ ಮೊದಲ ಸೋಲಿನ ರುಚಿ ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ರಾಜ್ಯದಲ್ಲಿ ತಲೆಕೆಳಗಾಗಿ ಹರಿಯುತ್ತೆ ಜಲಪಾತ: ಮಳೆಗಾಲದಲ್ಲಿ ಸಿಗೋ ಸೌಂದರ್ಯದ ವಿಡಿಯೋ ಇಲ್ಲಿದೆ


ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರು ಉಮ್ರಾನ್ ಮಲಿಕ್ ಅವರಿಗೆ ಅವಕಾಶ ನೀಡಿದ್ದರು. ಆದರೆ ಅವರು ತಮ್ಮ ಬೌಲಿಂಗ್‌ ಮೂಲಕ ಉತ್ತಮ ಪ್ರದರ್ಶನ ತೋರಲಿ ಸಾಧ್ಯವಾಗಲಿಲ್ಲ. ಮಲಿಕ್‌ ಬೌಲಿಂಗ್‌ಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಬಿರುಸಿನ ಸ್ಕೋರ್ ಮಾಡಿದರು. ಉಮ್ರಾನ್ ಮಲಿಕ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 56 ರನ್ ನೀಡಿದ್ದು, ಕೇವಲ 1 ವಿಕೆಟ್ ಪಡೆದಿದ್ದಾರೆ. 


ಭಾರತ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿಯೂ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ ಜೊತೆಗೆ ಬ್ಯಾಟಿಂಗ್‌ನಲ್ಲೂ ರನ್‌ ಮಳೆ ಸುರಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಡೇಜಾರಿಗೆ  ನೀಡಿದ 4 ಓವರ್‌ಗಳಲ್ಲಿ 45 ರನ್ ನೀಡಿದ್ದು, ಬಿಟ್ಟರೆ ವಿಕೆಟ್‌ ಕಬಳಿಸುವಲ್ಲಿ ವಿಫಲರಾಗಿದ್ದಾರೆ. 


ಇದನ್ನೂ ಓದಿ: ಗೋವಾದಲ್ಲಿ ʼಕೈʼ ಬಂಡಾಯ: ನಾಪತ್ತೆಯಾದ 5 ಶಾಸಕರು-ಆತಂಕದಲ್ಲಿ ಸೋನಿಯಾ-ರಾಹುಲ್!


ಇನ್ನು ವಿರಾಟ್ ಕೊಹ್ಲಿ ಬಹಳ ಸಮಯದಿಂದ ಕಳಪೆ ಫಾರ್ಮ್‌ನಲ್ಲಿಯೇ ಮುಂದುವರೆಯುತ್ತಿದ್ದಾರೆ. ಇನ್ನು ಐರ್ಲೆಂಡ್ ವಿರುದ್ಧ ಶತಕ ಬಾರಿಸಿದ ನಂತರ ಸ್ಟಾರ್ ಬ್ಯಾಟ್ಸ್‌ಮನ್ ದೀಪಕ್ ಹೂಡಾನನ್ನು ಪಂದ್ಯದಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅವರು ಕೇವಲ 6 ಎಸೆತಗಳಲ್ಲಿ 11 ರನ್ ಗಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿಗೆ ಶತಕ ಬಾರಿಸಲು ಸಾಧ್ಯವಾಗಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ