India vs Sri Lanka 3rd ODI:  ಗುವಾಹಟಿ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲ 2 ಏಕದಿನ ಪಂದ್ಯಗಳನ್ನು ಗೆದ್ದ ನಂತರ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಇಂದು ಇಲ್ಲಿನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಆದರೆ ಇದಕ್ಕೂ ಮುನ್ನವೇ ತಂಡದ ಆಯ್ಕೆಗೆ ಸಂಬಂಧಿಸಿದಂತೆ ನಾಯಕ ರೋಹಿತ್ ಶರ್ಮಾ ಮುಂದೆ ದೊಡ್ಡ ಸಮಸ್ಯೆಯೇ ಉದ್ಭವಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ಹಲವು ಸ್ಟಾರ್ ಆಟಗಾರರು ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದರು ಎಂಬುದು ನಮಗೆಲ್ಲಾ ತಿಳಿದ ಸಂಗತಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: AUS ಸರಣಿಗೂ ಮುನ್ನ ಜಡೇಜಾಗೆ ಬಿಸಿಸಿಐ ಷರತ್ತು- ಈ ಕೆಲಸ ಮಾಡು ಇಲ್ಲವೇ...


ಈ ಆಟಗಾರರ ತಲೆಮೇಲೆ ನೇತಾಡುತ್ತಿದೆ ತೂಗುಗತ್ತಿ:


ಮೊದಲ ಏಕದಿನ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದರು. ಅವರಿಗೆ ತಂಡದ ಪರ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಅವರು 28-28 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಬಹುದು. ಈ ಆಟಗಾರ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವುದರಲ್ಲಿ ನಿಪುಣ.


ಚೈನಾಮನ್ ಬೌಲರ್ ಕುಲದೀಪ್, ಎರಡನೇ ಏಕದಿನ ಪಂದ್ಯದಲ್ಲಿ ಆಡಲು ಸಾಧ್ಯವಾಯಿತು. ಅವರು 51 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಬಳಿಸಿದರು. ಮಧ್ಯಮ ಓವರ್ಗಳಲ್ಲಿ ಶ್ರೀಲಂಕಾದ ಬ್ಯಾಟಿಂಗ್ ಅನ್ನು ನಾಶಪಡಿಸಿದರು.


ಆದರೆ ಮೂರನೇ ಏಕದಿನ ಪಂದ್ಯಕ್ಕೆ ಯುಜುವೇಂದ್ರ ಚಹಲ್ ಫಿಟ್‌ ಆಗಿ ಮರಳಿದರೆ, ವಿಶ್ವಕಪ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುತ್ತಿರುವ ಕುಲದೀಪ್‌ಗೆ ಚಹಾಲ್‌ ಅಡ್ಡಿಯಾಗಬಹುದು. ಅಷ್ಟೇ ಅಲ್ಲ, ಈ ಇಬ್ಬರಲ್ಲಿ ಯಾರು ಬೆಸ್ಟ್ ಎಂದು ತಕ್ಕಡಿ ಹಾಕಿ ತೂಕ ಮಾಡುವ ಪ್ರಮೇಯ ರೋಹಿತ್ ಶರ್ಮಾಗೆ ಬರಲಿದೆ.  


ರೋಹಿತ್-ವಿರಾಟ್ ಸ್ಥಿತಿ!


ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023 ODI ವಿಶ್ವಕಪ್‌ಗೆ ಪೂರ್ವಸಿದ್ಧತೆಯ ದೃಷ್ಟಿಯಿಂದ ಮೊದಲ ಎರಡು ODIಗಳು ಉತ್ತಮವಾಗಿವೆ. ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್, ಶುಬ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ವೇಳೆ ಐದನೇ ಕ್ರಮಾಂಕಕ್ಕೆ ಇಳಿದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.


ಇದನ್ನೂ ಓದಿ: IND vs SL: ಸರಣಿ ಗೆದ್ದ ಖುಷಿಗೆ ಮೈದಾನದಲ್ಲೇ ಕೊಹ್ಲಿ- ಕಿಶನ್ ಭರ್ಜರಿ ಡ್ಯಾನ್ಸ್! ವಿಡಿಯೋ ನೋಡಿ


ಬೌಲಿಂಗ್ ನಲ್ಲಿ ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ಬ್ಯಾಟ್ಸ್ ಮನ್ ಗಳನ್ನು ಹಿಂಡಿ ಹಿಪ್ಪೆ ಮಾಡಿದ್ದರು. ಸಿರಾಜ್ ಆರಂಭದಲ್ಲಿ ವಿಕೆಟ್‌ಗಳನ್ನು ಪಡೆಯುವಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಆದರೆ ಮಲಿಕ್ ಮಧ್ಯಮ ಓವರ್‌ಗಳಲ್ಲಿ ಸಖತ್ ಬೌಲಿಂಗ್ ಮಾಡುವ ಪರಿಣತಿ ಹೊಂದಿದ್ದಾರೆ. ಹೀಗಿರುವಾಗ ಭಾರತವು ಮಲಿಕ್ ಗೆ ಸ್ಥಾನ ನೀಡುತ್ತದೆಯೋ, ಅಥವಾ ಸಿರಾಜ್ ಗೆ ಅವಕಾಶ ನೀಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.