IND vs PAK: ಭಾರತ - ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಈ 3 ದಾಖಲೆಗಳು ಮುರುಯಲಿವೆ!
India Women vs Pakistan Women : ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ T20 ವಿಶ್ವಕಪ್‌ನ ನಾಲ್ಕನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ.
India Women vs Pakistan Women : ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ T20 ವಿಶ್ವಕಪ್‌ನ ನಾಲ್ಕನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಫೆಬ್ರವರಿ 12 ರ ಭಾನುವಾರದಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ಫೆಬ್ರವರಿ 11 ರ ಶನಿವಾರದಂದು ಇಂಗ್ಲೆಂಡ್, ವೆಸ್ಟ್ ಇಂಡೀಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನಂತರ ಬಿ ಗುಂಪಿನಲ್ಲಿ ಇದು ಎರಡನೇ ಸ್ಪರ್ಧೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳೆಯರು ಪಾಕಿಸ್ತಾನದ ವಿರುದ್ಧ ಆಡಲಿದ್ದಾರೆ. ಈ ಆಟದಲ್ಲಿ ಗಾಯದ ಕಾರಣ ಸ್ಮೃತಿ ಮಂದಾನ ಆಡುತ್ತಿಲ್ಲ. ಮತ್ತೊಂದೆಡೆ ಪಾಕಿಸ್ತಾನ ಮಹಿಳಾ ತಂಡವನ್ನು ಬಿಸ್ಮಾ ಮರೂಫ್ ಮುನ್ನಡೆಸಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಭಾರತಕ್ಕೆ ಇದು ಚೊಚ್ಚಲ ಪಂದ್ಯ. ಇದಕ್ಕೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯದಲ್ಲಿ ಸೋಲು - ಗೆಲುವನ್ನು ಭಾರತ ತಂಡ ಸಮಾನವಾಗಿ ಕಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ T20 ವಿಶ್ವಕಪ್ ಟೈನಲ್ಲಿ ಮುರಿಯಬಹುದಾದ ಪ್ರಮುಖ ಮೂರು ದಾಖಲೆಗಳನ್ನು ನೋಡೋಣ.
ಇದನ್ನೂ ಓದಿ : IND vs AUS: ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನೇ ಬ್ರೇಕ್ ಮಾಡಿದ್ರು ಶಮಿ.!
ಮಹಿಳಾ T20I ಇತಿಹಾಸದಲ್ಲಿ ಬಿಸ್ಮಾ ಮರೂಫ್ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಬಹುದು. 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಾಕಿಸ್ತಾನದ ನಾಯಕ ಬಿಸ್ಮಾ ಮರೂಫ್ ಎಡಗೈ ಆಟಗಾರ್ತಿ. ಮಹಿಳಾ T20I ಇತಿಹಾಸದಲ್ಲಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ.
ಪ್ರಸ್ತುತ 123 ಇನ್ನಿಂಗ್ಸ್‌ಗಳಲ್ಲಿ 26.6 ಸರಾಸರಿಯಲ್ಲಿ 2560 ರನ್‌ಗಳೊಂದಿಗೆ, ಮರೂಫ್ ಮಹಿಳಾ T20I ಗಳಲ್ಲಿ ಪಾಕಿಸ್ತಾನದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಆದಾಗ್ಯೂ, ಇಂದಿನ ಪಂದ್ಯದಲ್ಲಿ ಅವರು ಕನಿಷ್ಠ 46 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಇಂಗ್ಲೆಂಡ್‌ನ ಮಾಜಿ ದಂತಕಥೆ ಚಾರ್ಲೊಟ್ ಎಡ್ವರ್ಡ್ಸ್ ಅವರನ್ನು ಮೀರಿಸಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಲಿದ್ದಾರೆ. ಎಡ್ವರ್ಡ್ಸ್ 93 T20I ಇನ್ನಿಂಗ್ಸ್‌ಗಳಲ್ಲಿ 32.9 ಸರಾಸರಿಯಲ್ಲಿ 2605 ರನ್ ಗಳಿಸಿದರು.
ಇದನ್ನೂ ಓದಿ : ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು?
ದೀಪ್ತಿ ಶರ್ಮಾ ಮಹಿಳಾ ಟಿ20ಐ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಬಹುದು. ಸ್ಟಾರ್ ಇಂಡಿಯನ್ ಆಲ್‌ರೌಂಡರ್ ದೀಪ್ತಿ ಶರ್ಮಾ ಭಾರತಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಮಹಿಳಾ T20I ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಶರ್ಮಾ 87 ಇನ್ನಿಂಗ್ಸ್‌ಗಳಲ್ಲಿ 6.08 ಸರಾಸರಿಯಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಇಂದು ಪಾಕಿಸ್ತಾನದ ವಿರುದ್ಧ ಮೂರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರೆ, ಮಹಿಳಾ T20I ಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
T20I ನಲ್ಲಿ ಹರ್ಮನ್‌ಪ್ರೀತ್ ಕೌರ್ 3000 ರನ್‌ಗಳನ್ನು ಪೂರೈಸಿದ ಭಾರತದ ಮೊದಲ ಮಹಿಳಾ ಕ್ರಿಕೆಟಿಗರಾಗಬಹುದು. ಸ್ಮೃತಿ ಮಂದಾನ ಅನುಪಸ್ಥಿತಿ ಹಿನ್ನೆಲೆ ಇಂದು ಬ್ಯಾಟಿಂಗ್ ಜವಾಬ್ದಾರಿ ಹರ್ಮನ್‌ಪ್ರೀತ್ ಕೌರ್ ಮೇಲಿದೆ. ಭಾರತೀಯ ನಾಯಕಿ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂದು ಕೀರ್ತಿ ಪಡೆದಿದ್ದಾರೆ. 28.46 ಸರಾಸರಿಯಲ್ಲಿ ಮತ್ತು 106.4 ಸ್ಟ್ರೈಕ್ ರೇಟ್‌ನಲ್ಲಿ 2940 ರನ್ ಗಳಿಸಿರುವ ಕೌರ್, ಭಾರತದ ಮಹಿಳಾ T20I ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಇನ್ನೂ 60 ರನ್ ಗಳಿಸಿದರೆ, 3000 T20I ರನ್‌ಗಳನ್ನು ತಲುಪಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗರಾಗುತ್ತಾರೆ. ಅಲ್ಲದೇ, ಅವರು ಕೇಪ್ ಟೌನ್‌ನಲ್ಲಿ ಕನಿಷ್ಠ 11 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಸೋಫಿ ಡಿವೈನ್ ಅವರ 2950 ರನ್‌ಗಳ ದಾಖಲೆಯನ್ನು ಮೀರಿಸುವ ಮೂಲಕ ಮಹಿಳಾ T20I ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.