ಖುಲಾಯಿಸಲಿದೆ ಈ ಇಬ್ಬರು ಆಟಗಾರರ ಅದೃಷ್ಟ, ಸಿಗಲಿದೆ IPLನಲ್ಲಿ ಆಡುವ ಅವಕಾಶ
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಬೆನ್ ಮೆಕ್‌ಡರ್ಮಾಟ್ ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ತಮ್ಮ ಇತ್ತೀಚಿನ ಅತ್ಯುತ್ತಮ ಪ್ರದರ್ಶನದ ಮೂಲಕ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಡೀಲ್ ಗಳನ್ನು ಪಡೆಯುವ ನಿರೀಕ್ಷೆಯಿದೆ.
ಮೆಲ್ಬೋರ್ನ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಬೆನ್ ಮೆಕ್‌ಡರ್ಮಾಟ್ ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ತಮ್ಮ ಇತ್ತೀಚಿನ ಅತ್ಯುತ್ತಮ ಪ್ರದರ್ಶನದ ಮೂಲಕ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಡೀಲ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ಕಳೆದ ಋತುವಿನಲ್ಲಿ ಈ ಇಬ್ಬರು ಆಟಗಾರರನ್ನು ಯಾವುದೇ ಫ್ರಾಂಚೈಸಿ ಬಿಡ್ ಮಾಡಿರಲಿಲ್ಲ.
ಆಯ್ಕೆಯಾಗಬಹುದು ಈ ಇಬ್ಬರು ಆಟಗಾರರು :
ಬೆನ್ ಮೆಕ್‌ಡರ್ಮಾಟ್ (Ben McDermott)ಬಿಗ್ ಬ್ಯಾಷ್ ಲೀಗ್ (big bash league) ಸೀಸನ್ ನಲ್ಲಿ ಉತ್ತಮ ರನ್ ಗಳಿಸಿದ್ದಾರೆ. ತನ್ನ ಅದ್ಬುತ ಪ್ರದರ್ಶನ ಕಾರಣದಿಂದಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಮತ್ತು ಮುಂದಿನ ತಿಂಗಳು ಶ್ರೀಲಂಕಾ(Srilanka) ವಿರುದ್ಧದ ನಡೆಯಲಿರುವ ಸರಣಿಗಾಗಿ ಆಸ್ಟ್ರೇಲಿಯಾದ T20 ತಂಡಕ್ಕೆ ಕೂಡಾ ಮರಳಿದ್ದಾರೆ. 27 ವರ್ಷದ ಈ ಆಟಗಾರ ಬಿಬಿಎಲ್ (BBL) ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಪರ 17 T20 ಅಂತರಾಷ್ಟ್ರೀಯ ಪಂದ್ಯಗಳು ಮತ್ತು ಎರಡು ODI ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ : South Africa vs India: ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್
ಶೆಫರ್ಡ್ ಅದ್ಬುತ ಆಟ :
ಭಾನುವಾರ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ (Romario Shepherd) ಇಂಗ್ಲೆಂಡ್ ವಿರುದ್ಧ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದ್ದಾರೆ. 28 ಎಸೆತಗಳಲ್ಲಿ 44 ರನ್‌ಗಳ ಅವರ ಅಜೇಯ ಇನ್ನಿಂಗ್ಸ್ ಹೊರತಾಗಿಯೂ, ತಂಡ ಒಂದು ರನ್‌ನಿಂದ ಸೋಲನುಭವಿಸಬೇಕಾಯಿತು. ಐದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಅದ್ಬುತ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಒಂದು ವಿಕೆಟ್ ಕೂಡಾ ಕಬಳಿಸಿದ್ದಾರೆ.
ಹರಾಜಿಗೆ ನೊಂದಾಯಿಸಿದ ಶೆಫರ್ಡ್ :
ಐಪಿಎಲ್ (IPL) ಡೀಲ್ ಸಿಕ್ಕಿದರೆ ಒಳ್ಳೆಯದು. ಆದರೆ ಸದ್ಯಕ್ಕೆ ಈಗ ಅದರ ಬಗ್ಗೆ ಯೋಚಿಸುವುದಿಲ್ಲ ಎನ್ನುತ್ತಾರೆ ರೊಮಾರಿಯೊ ಶೆಫರ್ಡ್. ಈಗ ಕೇವಲ ಆಟದ ಬಗ್ಗೆ ಮಾತ್ರ ಯೋಚಿಸುವುದಾಗಿ ಹೇಳಿದ್ದಾರೆ. ಮೆಗಾ ಹರಾಜಿಗೆ ನೋಂದಾಯಿಸಿದ ವೆಸ್ಟ್ ಇಂಡೀಸ್‌ನ 41 ಆಟಗಾರರಲ್ಲಿ ಶೆಫರ್ಡ್ ಕೂಡಾ ಒಬ್ಬರು. ಈ ಬಾರಿ ಐಪಿಎಲ್‌ನಲ್ಲಿ 10 ತಂಡಗಳಿದ್ದು, ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಯಲಿದೆ.
ಇದನ್ನೂ ಓದಿ : 3rd IND vs SA ODI: ತಂದೆ ವಿರಾಟ್ ಅರ್ಧಶತಕದ ವೇಳೆ ಕಾಣಿಸಿಕೊಂಡ ಪುತ್ರಿ ವಾಮಿಕಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.