ನವದೆಹಲಿ: ಅಚ್ಚರಿಯಾದರೂ ಇದು ನಿಜ, ನೀವು ನಂಬಲೇಬೇಕು. 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್(ICC World Cup 2015) ಗೆದ್ದ ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರನೊಬ್ಬ ಈಗ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೌದು, ಆಸೀಸ್ ಮಾಜಿ ಕ್ರಿಕೆಟಿಗ ಕ್ಸೇವಿಯರ್ ಡೊಹೆರ್ಟಿ 2017ರಲ್ಲಿ ಕ್ರಿಕೆಟ್ ನಿಂದ ನಿವೃತ್ತರಾದರು. ಬಳಿಕ ಅವರು ಜೀವನ ನಡೆಸಲು ಬಡಗಿಯಾಗಿ ಕೆಲಸ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಎಡಗೈ ಸ್ಪಿನ್ನರ್ ಆಗಿರುವ ಡೊಹೆರ್ಟಿ(Xavier Doherty) ಆಸ್ಟ್ರೇಲಿಯಾವನ್ನು 4 ಟೆಸ್ಟ್, 60 ಏಕದಿನ ಮತ್ತು 11 ಟಿ.20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟರ್ಸ್ ಅಸೋಸಿಯೇಷನ್ ಇತ್ತೀಚೆಗೆ ತನ್ನ ಟ್ವಿಟರ್ ಖಾತೆಯಲ್ಲಿ ಕ್ಸೇವಿಯರ್ ಡೊಹೆರ್ಟಿ ಮರಗೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಡೊಹೆರ್ಟಿ ಮರಗೆಲಸ ಕಲೆಯನ್ನು ಕಲಿಯುವುದರಲ್ಲಿ ಮಗ್ನರಾಗಿರುವುದನ್ನು ಕಾಣಬಹುದಾಗಿತ್ತು.


ಇದನ್ನೂ ಓದಿ: Tokyo Olympics 2020: ಪದಕ ಗೆದ್ದ ಕ್ರೀಡಾಪಟುಗಳಿಗೆ ಕೋಟಿ ಕೋಟಿ, ಯಾರಿಗೆ ಎಷ್ಟು ಬಹುಮಾನ ಗೊತ್ತಾ..?


ಅಂದಹಾಗೆ ಕ್ಸೇವಿಯರ್ ಡೊಹೆರ್ಟಿ(Xavier Doherty) 2010 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 2015 ರಲ್ಲಿ ಅವರು ಐಸಿಸಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ(Australia) ತಂಡದ ಭಾಗವಾಗಿದ್ದರು, ಆದರೂ ಫೈನಲ್‌ನಲ್ಲಿ ಆಡುವ 11 ಆಟಗಾರರಲ್ಲಿ ಇವರಿಗೆ ಅವಕಾಶ ಸಿಗಲಿಲ್ಲ. ಡೊಹೆರ್ಟಿ ಅವರು ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಭವಿಷ್ಯದಲ್ಲಿ ಏನು ಮಾಡಬೇಕೆಂದು ಯೋಚಿಸಿರಲಿಲ್ಲವೆಂದು ಹೇಳಿದ್ದಾರೆ. ಲ್ಯಾಂಡ್ ಸ್ಕೇಪಿಂಗ್, ಕಚೇರಿ ಕಾರ್ಯ ಮತ್ತು ಕೆಲವು ಕ್ರಿಕೆಟ್ ಸಂಬಂಧಿತ ಕೆಲಸಗಳು ಸೇರಿದಂತೆ ವಿವಿಧ ರೀತಿಯ ಕಾರ್ಯಗಳನ್ನು ಅವರು ಮಾಡಿದ್ದಾರೆ. 


ಯಾವ ಕೆಲಸವೂ ಅವರಿಗೆ ತೃಪ್ತಿ ನೀಡದ ಬಳಿಕ ಡೊಹೆರ್ಟಿ ಬಡಗಿ(Doherty Carpenter) ಆಗಲು ನಿರ್ಧರಿಸಿದರು. ಸದ್ಯ ಅವರು ಈಗ ತರಬೇತಿ ಪಡೆದಿರುವ ಬಡಗಿಯಾಗಿದ್ದಾರೆ. ಡೊಹೆರ್ಟಿಯವರ ಪ್ರಕಾರ, ಅವರು ಆಸ್ಟ್ರೇಲಿಯಾದ ಕ್ರಿಕೆಟರ್ಸ್ ಅಸೋಸಿಯೇಶನ್ ಟ್ರಾನ್ಸಿಶನ್ ಮ್ಯಾನೇಜರ್ ಕಾರ್ಲಾ ಅವರಿಂದ ಸಹಾಯವನ್ನು ಪಡೆದಿದ್ದಾರಂತೆ. ಡೊಹೆರ್ಟಿಯವರಿಗೆ ಕಾರ್ಲಾ ಸ್ವಲ್ಪ ಹಣದ ಸಹಾಯವನ್ನು ಮಾಡಿದ್ದಾರಂತೆ.


ಇದನ್ನೂ ಓದಿ: Viral Video: ‘ಚಿನ್ನ’ದ ಹುಡುಗ ನೀರಜ್ ಜೋಪ್ರಾನ ಮಸ್ತ್ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್..!


2015ರ ಕ್ರಿಕೆಟ್ ವಿಶ್ವಕಪ್(Cricket World Cup 2015) ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಡೊಹೆರ್ಟಿ ಇದೀಗ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೀವನ ಹೇಗೆ ಬರುತ್ತದೋ ಅದೇ ರೀತಿ ಸ್ವೀಕರಿಸಿ ಮುನ್ನಡೆಯಬೇಕು ಅಂತಾ ಅವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ