ದುಬೈ: 2019ನೆ ಸಾಲಿನಲ್ಲಿ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಮೃತಿ ಮಂಧಾನಾ ICC ಏಕದಿನ ಹಾಗೂ ಟಿ20 'ವರ್ಷದ ತಂಡ'ಗಳಲ್ಲಿ ಸ್ಥಾನ ಪಡೆದಿದ್ದಾರೆ.  ಮಂಧಾನಾ ಅವರನ್ನು ಹೊರತುಪಡಿಸಿ ಇತರೆ ಐವರು ಭಾರತೀಯ ಆಟಗಾರ್ತಿಯರೂ ಕೂಡ 'ICC ವರ್ಷದ ತಂಡ'ದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಈ ಆಟಗಾರರು ಕೇವಲ ಒಂದು ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಸ್ಮೃತಿ ಮಂಧಾನಾ ಒರ್ವರೆ ICCನ ಎರಡೂ ತಂಡಗಳಲ್ಲಿ ಸ್ಥಾನ ಪಡೆದ ಆಟಗಾರ್ತಿಯಾಗಿದ್ದಾರೆ.

COMMERCIAL BREAK
SCROLL TO CONTINUE READING

ICC ಮಂಗಳವಾರ ತನ್ನ ವರ್ಷದ ತಂಡ ಹಾಗೂ ವರ್ಷದ ಆಟಗಾರ್ತಿಯನ್ನು ಆಯ್ಕೆ ಮಾಡಿರುವ ಕುರಿತು ಘೋಷಿಸಿದೆ. ಆಸ್ಟ್ರೇಲಿಯಾ ತಂಡದ ಎಲಿನ್ ಪೆರಿ ಅವರನ್ನು 2019 ನೇ ಸಾಲಿನ ವರ್ಷದ ಮಹಿಳಾ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ ರಾಚೆಲ್ ಹೆವೂ ಫ್ಲಿಂಟ್ ಪ್ರಶಸ್ತಿ ನೀಡಲಾಗಿದೆ. ಕಳೆದ ವರ್ಷ ಸ್ಮೃತಿ ಮಂಧಾನಾ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಇದಲ್ಲದೆ ಎಲಿಸ್ ಪೆರಿ ಅವರಿಗೆ 2019ನೇ ಸಾಲಿನ ವರ್ಷದ ಮಹಿಳಾ ಏಕದಿನ ಪಂದ್ಯದ ಆಟಗಾರ್ತಿ ಪ್ರಶಸ್ತಿಯೂ ಕೂಡ ಲಭಿಸಿದೆ.


ಟಿ20 ತಂಡದಲ್ಲಿ ಸ್ಥಾನ ಪಡೆದ ದಿಪ್ತಿ ಹಾಗೂ ರಾಧಾ 
ಭಾರತ ತಂಡದ ಆಟಗಾರ್ತಿಯರ ಬಗ್ಗೆ ಹೇಳುವುದಾದರೆ ಸ್ಮೃತಿ ಮಂಧಾನಾ ವರ್ಷದ ತಂಡ ಹಾಗೂ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿಖಾ ಪಾಂಡೆ, ಝೂಲನ್ ಗೋಸ್ವಾಮಿ ಹಾಗೂ ಪೂನಂ ಪಾಂಡೆ ICC ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್ ICC ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 


ಎರಡೂ ತಂಡಗಳಿಗೆ ಮೆಗ್ ಲೈನಿಂಗ್ ಅವರೇ ನಾಯಕ
ಆಸ್ಟ್ರೇಲಿಯಾದ ಆಟಗಾರ್ತಿ ಮೆಗ್ ಲೈನಿಂಗ್ ಅವರನ್ನು ಒನ್ ಡೇ ಹಾಗೂ ಟಿ20 ವರ್ಷದ ತಂಡಗಳ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಏಕದಿನ ತಂಡದಲ್ಲಿ ಆಸ್ಟ್ರೇಲಿಯಾದ ಅತಿ ಹೆಚ್ಚು ಅಂದರೆ ಒಟ್ಟು 5 ಆಟಗಾರರಿದ್ದಾರೆ. ಮೆಗ್ ಲೈನಿಂಗ್, ಎಲಿಸಾ ಹೀಲಿ, ಜೆಸ್ ಜೋನಾಸೇನ್, ಮೆಗನ್ ಶಾಟ್, ಎಲಿಸ್ ಪೆರಿ ಇವರು ತಂಡದಲ್ಲಿ ಶಾಮೀಲಾಗಿದ್ದಾರೆ. ಈ ತಂಡಗಳಲ್ಲಿ ಭಾರತ ಒಟ್ಟು ನಾಲ್ವರು ಹಾಗೂ ಇಂಗ್ಲೆಂಡ್ ಮತ್ತು  ವೆಸ್ಟ್ ಇಂಡೀಸ್ ನ ತಲಾ ಒಂದೊಂದು ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಇಂಗ್ಲೆಂಡ್ ನ ತಮಸಿನ್ ಬ್ಲೂಮೊಂಟ್, ವೆಸ್ಟ್ ಇಂಡೀಸ್ ನ ಸ್ಟೇಫ್ನಿ ಟೇಲರ್ ಶಾಮೀಲಾಗಿದ್ದಾರೆ.


ICC ವರ್ಷದ ಮಹಿಳಾ  ಏಕದಿನ ತಂಡ (ಬ್ಯಾಟಿಂಗ್ ಆರ್ಡರ್ ಪ್ರಕಾರ): ಎಲಿಸಾ ಹೀಲಿ, ಸ್ಮೃತಿ ಮಂಧಾನಾ, ತಮಸೀನ್ ಬ್ಲೂಮೆಂಟ್, ಮೆಗ್ ಲೈನಿಂಗ್(ನಾಯಕಿ),  ಸ್ಟೇಫ್ನಿ ಟೇಲರ್, ಎಲಿಸ್ ಪೆರಿ, ಜೆಸ್ ಜೋನಾಸನ್, ಶಿಖಾ ಪಾಂಡೆ, ಝೂಲನ್ ಗೋಸ್ವಾಮಿ, ಮೆಗನ್ ಶಾಟ್, ಪೂನಂ ಯಾದವ್.


ICC ವರ್ಷದ ಮಹಿಳಾ ಟಿ20 ತಂಡ (ಬ್ಯಾಟಿಂಗ್ ಆರ್ಡರ್ ಪ್ರಕಾರ): ಎಲಿಸಾ ಹೀಲಿ, ಡೆನಿಯಲ್ ವ್ಯಾಟ್, ಮೆಗ್ ಲೈನಿಂಗ್(ನಾಯಕಿ), ಸ್ಮೃತಿ ಮಂಧಾನಾ, ಲಿಜೆಲ್ ಲೀ, ಎಲಿಸ್ ಪೆರಿ, ದೀಪ್ತಿ ಶರ್ಮಾ, ನಿದಾ ಡಾರ್, ಮೆಗನ್ ಶಾಟ್, ಶಬನಂ ಇಸ್ಮಾಯಿಲ್, ರಾಧಾ ಯಾದವ್.