Dinesh Karthika Cricket Career: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ 20 ಸರಣಿಗೆ ಟೀಂ ಇಂಡಿಯಾದ ಅನುಭವಿ ಆಟಗಾರರೊಬ್ಬರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ 2022 ರ ನಂತರ ಈ ಆಟಗಾರ ಟೀಮ್ ಇಂಡಿಯಾಕ್ಕೆ ಮರಳಿದ್ದರು. ಆದರೆ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್ 2022ರಲ್ಲಿ ಆಡಿದ್ದರು. ಈ ಟೂರ್ನಿಯ ಬಳಿಕ ಅವರು ಒಮ್ಮೆಯೂ ತಂಡದ ಭಾಗವಾಗಲು ಸಾಧ್ಯವಾಗಿಲ್ಲ. ಈ ಆಟಗಾರನ ವೃತ್ತಿಜೀವನವು ಈಗ ಬಹುತೇಕ ಮುಗಿದಿದೆ ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kuldeep Yadav : ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಕುಲದೀಪ್ ಯಾದವ್ : ವಿಡಿಯೋ ವೈರಲ್


ಐಪಿಎಲ್ 2022 ರ ನಂತರ, 37 ವರ್ಷದ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಕ್ಕೆ ಮರಳಿದ್ದರು. ಜೊತೆಗೆ 2022 ರ ಟಿ 20 ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು. ಆದರೆ, ಈ ಟೂರ್ನಿಯಲ್ಲಿ ಸಂಪೂರ್ಣ ಪ್ಲಾಪ್ ಆಗಿದ್ದ ಅವರು ಇದೀಗ ಮತ್ತೊಮ್ಮೆ ತಂಡದಿಂದ ನಾಪತ್ತೆಯಾಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ದಿನೇಶ್ ಕಾರ್ತಿಕ್ ಭಾರತ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ.


ಟಿ20 ವಿಶ್ವಕಪ್‌ನಲ್ಲಿ ಫ್ಲಾಪ್ ಆಟ ಪ್ರದರ್ಶನ:


2022ರ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ದಿನೇಶ್ ಕಾರ್ತಿಕ್ 2022 ರ ಟಿ 20 ವಿಶ್ವಕಪ್‌ನ 3 ಇನ್ನಿಂಗ್ಸ್‌ಗಳಲ್ಲಿ 4.66 ಸರಾಸರಿಯಲ್ಲಿ ಕೇವಲ 14 ರನ್ ಗಳಿಸಿದ್ದರು. ದಿನೇಶ್ ಕಾರ್ತಿಕ್ ಅವರ ಈ ಕೆಟ್ಟ ಆಟದ ನಂತರ ಟೀಮ್ ಇಂಡಿಯಾದ ಪ್ಲೇಯಿಂಗ್ 11 ರಿಂದ ಅವರನ್ನು ಕೈಬಿಡಲಾಯಿತು. ಸೆಮಿಫೈನಲ್ ಪಂದ್ಯದಲ್ಲೂ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.


ದಿನೇಶ್ ಕಾರ್ತಿಕ್ ಏಷ್ಯಾ ಕಪ್ 2022 ರಲ್ಲಿ ಟೀಮ್ ಇಂಡಿಯಾದ ಭಾಗವಾಗಲು ಯಶಸ್ವಿಯಾಗಿದ್ದರು. ಈ ಪಂದ್ಯಾವಳಿಯಲ್ಲಿ, ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾದ ಮೊದಲ ಆಯ್ಕೆಯಾಗಿದ್ದರು, ಆದರೆ ಈ ಪಂದ್ಯಾವಳಿಯಲ್ಲಿಯೂ ಅವರು ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಭಾರತಕ್ಕಾಗಿ ಇದುವರೆಗೆ 60 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 26.38 ಸರಾಸರಿಯಲ್ಲಿ 686 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ 26 ಟೆಸ್ಟ್ ಹಾಗೂ 94 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.


ಇದನ್ನೂ ಓದಿ: IND vs SL: ಸರಣಿ ಗೆದ್ದ ಖುಷಿಗೆ ಮೈದಾನದಲ್ಲೇ ಕೊಹ್ಲಿ- ಕಿಶನ್ ಭರ್ಜರಿ ಡ್ಯಾನ್ಸ್! ವಿಡಿಯೋ ನೋಡಿ


ಐಪಿಎಲ್ 2022 ರಿಂದ ಬದಲಾದ ಅದೃಷ್ಟ :


ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭಾಗವಾಗಿದ್ದರು. ಆಗ ದಿನೇಶ್ ಕಾರ್ತಿಕ್ ಅವರಿಗೆ 37 ವರ್ಷ. ಈ ವಯಸ್ಸಿನಲ್ಲೂ ಅವರು ತಮ್ಮ ಚುರುಕುತನದಿಂದ ಯುವ ಆಟಗಾರರನ್ನು ವಿಫಲಗೊಳಿಸಿದ್ದರು. IPL 2022 ರಲ್ಲಿ, ದಿನೇಶ್ ಕಾರ್ತಿಕ್ 16 ಪಂದ್ಯಗಳಲ್ಲಿ 55.00 ಸರಾಸರಿಯಲ್ಲಿ 330 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಕಾರ್ತಿಕ್ ಅವರ ಅದ್ಭುತ ಪ್ರದರ್ಶನವೇ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ತಂದುಕೊಟ್ಟಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.