2 ಬೌಲರ್ಸ್, 20 ವಿಕೆಟ್... 72 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪುಟ ಸೇರಿತು ಪಾಕ್ ದಿಗ್ಗಜರ ಅದೊಂದು ʼಮಹಾಸಾಧನೆʼ!
Pak-England Test: ಇದುವರೆಗೆ ಕೇವಲ 8 ಟೆಸ್ಟ್‌ಗಳನ್ನು ಆಡಿದ ಸಾಜಿದ್ ಖಾನ್ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿದ್ದರು, ರೂಟ್, ಬ್ರೂಕ್, ಒಲಿ ಪೋಪ್ ಮತ್ತು ಬೆನ್ ಡಕೆಟ್ ಅವರಂತಹ ಪ್ರಮುಖ ಆಟಗಾರರಿಗೆ ಸಾಜಿದ್ ಪೆವಿಲಿಯನ್ ಹಾದಿ ತೋರಿಸಿದ್ದರು.
PAK vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಮೊದಲ ಸೋಲು ಪಾಕಿಸ್ತಾನಕ್ಕೆ ಆಳವಾದ ಗಾಯವನ್ನು ಉಂಟುಮಾಡಿದೆ. ಮುಂದಿನ ಟೆಸ್ಟ್‌ನಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಸ್ಟಾರ್‌ಗಳನ್ನು ಹೊರಗಿಟ್ಟ ಬಳಿಕ, ಪಿಸಿಬಿ 3 ಹೊಸ ಆಟಗಾರರಿಗೆ ಅವಕಾಶ ನೀಡಿತ್ತು. ಈ ಪೈಕಿ ಸ್ಪಿನ್ನರ್‌ಗಳ ಜೋಡಿ ಸಾಧನೆಯೊಂದನ್ನು ಮಾಡಿದ್ದು ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಹ ಸಾಧನೆ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ ಮೇಲೆ ಹಳೆಯ ಕೇಸ್ ರಿ-ಓಪನ್... ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿʼಬಾಸ್ !
ಇದುವರೆಗೆ ಕೇವಲ 8 ಟೆಸ್ಟ್‌ಗಳನ್ನು ಆಡಿದ ಸಾಜಿದ್ ಖಾನ್ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿದ್ದರು, ರೂಟ್, ಬ್ರೂಕ್, ಒಲಿ ಪೋಪ್ ಮತ್ತು ಬೆನ್ ಡಕೆಟ್ ಅವರಂತಹ ಪ್ರಮುಖ ಆಟಗಾರರಿಗೆ ಸಾಜಿದ್ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ನಂತರವೂ ನಿಲ್ಲದೆ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿಸಿದರು. ಉಳಿದ 3 ವಿಕೆಟ್ ಕಬಳಿಸಿದ ನೌಮನ್ ಅಲಿ ಕಿತ್ತುಕೊಂಡರು.
ಮೊದಲ ಇನಿಂಗ್ಸ್ ಬಳಿಕ ಇಂಗ್ಲೆಂಡ್ ತಂಡ ಸಾಜಿದ್ ಖಾನ್ ಗಾಗಿ ತಯಾರಿಯಲ್ಲಿ ನಿರತವಾಗಿತ್ತು. ಆದರೆ ಆ ಗಾಯ ವಾಸಿಯಾಗುವ ಮುನ್ನವೇ ನೌಮನ್ ಅಲಿ 297 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು. ಈ ಇಬ್ಬರೂ ಸ್ಪಿನ್ನರ್‌ಗಳು ಮತ್ತೆ ಇನ್ನಿಂಗ್ಸ್ ಕಿಂಗ್ ಆಗಿ ಮೆರೆದರು. ಮುಲ್ತಾನ್‌ನಲ್ಲಿ ಸಾಜಿದ್ ಖಾನ್ 2 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದರೆ, ನೌಮನ್ ಅಲಿ 8 ವಿಕೆಟ್ ಪಡೆದರು. ಎಲ್ಲಾ 20 ವಿಕೆಟ್‌ಗಳು ಈ ಇಬ್ಬರು ಸ್ಪಿನ್ನರ್‌ಗಳ ಪಾಲಾದವು.
ಇದನ್ನೂ ಓದಿ: ಜಿಮ್‌ನಲ್ಲಿ ಬೆವರಿಳಿಸಿದ ಸುಹಾನಾ..! ಕಿಂಗ್ ಖಾನ್ ಮಗಳ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ..
72 ವರ್ಷಗಳಲ್ಲಿ ಮೊದಲ ಬಾರಿಗೆ...
ಪಾಕಿಸ್ತಾನದ 72 ವರ್ಷಗಳ ಇತಿಹಾಸದಲ್ಲಿ ಇಬ್ಬರು ಬೌಲರ್‌ಗಳು ಒಟ್ಟಾಗಿ ಎಲ್ಲಾ 20 ವಿಕೆಟ್‌ಗಳನ್ನು ಉರುಳಿಸಿದ್ದು ಇದೇ ಮೊದಲು. ಸಾಜಿದ್ ಖಾನ್ ಅವರ ಹೆಸರಿನಲ್ಲಿ 9 ವಿಕೆಟ್ ಪಡೆದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ನೌಮನ್ ಅಲಿ ಕಡಿಮೆಯೇನಲ್ಲ, ಅವರು 11 ವಿಕೆಟ್‌ಗಳನ್ನು ಗಳಿಸಿದ್ದು ಮಾತ್ರವಲ್ಲದೆ ಬ್ಯಾಟ್‌ನಿಂದಲೂ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಬೌಲರ್‌ಗಳ ಅಮೋಘ ಪ್ರದರ್ಶನದಿಂದಾಗಿ ಪಾಕಿಸ್ತಾನ ಈ ಪಂದ್ಯವನ್ನು 152 ರನ್‌ಗಳಿಂದ ಗೆದ್ದು 44 ತಿಂಗಳ ಬರವನ್ನು ಕೊನೆಗೊಳಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ