R Ashwin Statement on WTC Final 2023: 11 ಜೂನ್ 2023. ಈ ದಿನ ಯಾರಿಗೆ ಮರೆಯಲು ಸಾಧ್ಯ ಹೇಳಿ… ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಫೈನಲ್‌ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲುಂಡ ದಿನ. ಭಾರತದ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾದ ಅನೇಕ ವರ್ಷಗಳ ಕನಸು ನನಸಾಗದೆ ಉಳಿದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರನ ವಿವಾದಾತ್ಮಕ ಹೇಳಿಕೆ


ಅಂದು ರೋಹಿತ್ ಶರ್ಮಾ ಟಾಸ್ ಗೆದ್ದು ನಂತರ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ಬಗ್ಗೆ ಹೇಳಿದರು. ಈ ಪ್ಲೇಯಿಂಗ್ ಇಲೆವೆನ್ ಬಹಿರಂಗವಾಗಿದ್ದೇ ತಡ, ಕ್ರಿಕೆಟ್ ದಿಗ್ಗಜರು ಸೇರಿ ಫ್ಯಾನ್ಸ್ ಕ್ರಿಕೆಟ್ ಆಯ್ಕೆ ಸಮಿತಿ ವಿರುದ್ಧ ಟೀಕೆಗಳ ಬಾಣವನ್ನೇ ಬಿಟ್ಟಿದ್ದರು. ಇದಕ್ಕೆ ಕಾರಣ ಟೀಂ ಇಂಡಿಯಾ ವಿಶ್ವದ ನಂಬರ್ 1 ಬೌಲರ್ ಆರ್ ಅಶ್ವಿನ್ ಅವರನ್ನ ಪ್ಲೇಯಿಂಗ್ 11 ರಿಂದ ಕೈಬಿಟ್ಟತ್ತು. ಬಹುಶಃ ಅಶ್ವಿನ್ ಟೀಂ ಇಂಡಿಯಾದ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆದಿದ್ದರೆ, ಭಾರತ ಈ ಬಾರಿ ಟ್ರೋಫಿ ಗೆಲ್ಲುವ ಸಾಧ್ಯತೆ ಇತ್ತೇನೋ…!


ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿತ್ತು. ಒಂದೆಡೆ ನೆಚ್ಚಿನ ಬೌಲರ್’ಗೆ ಅವಕಾಶ ನೀಡದ ಅಸಮಾಧಾನ ಒಂದೆಡೆ ಆದ್ರೆ ಮತ್ತೊಂದೆಡೆ ಪಂದ್ಯದ ಫಲಿತಾಂಶವು ತೀರ ಕಳಪೆಯಾಗಿತ್ತು. ಅಷ್ಟೇ ಅಲ್ಲದೆ, ಭಾರತವು ಸತತ ಎರಡನೇ ಬಾರಿಗೆ ಫೈನಲ್‌’ನಲ್ಲಿ ಸೋಲು ಕಂಡಿತ್ತು.


ಈ ಸೋಲಿನ ನಂತರ ಆರ್ ಅಶ್ವಿನ್ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರಶ್ನೆಗಳು ಎದ್ದವು. ಫೈನಲ್‌ ಗಾಗಿ ಸಾಕಷ್ಟು ತಯಾರಿ ನಡೆಸಿದ್ದ ಅಶ್ವಿನ್ ಅವರೇ ಈ ಬಗ್ಗೆ ಮಾತನಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.


ಸದ್ಯ ಭಾರತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಡೊಮಿನಿಕಾ ಟೆಸ್ಟ್‌ ನಲ್ಲಿ ಅಶ್ವಿನ್ 12 ವಿಕೆಟ್ ಕಬಳಿಸಿದ್ದಾರೆ. ಇದು ವಿದೇಶಿ ನೆಲದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಜೊತೆಗೆ ತಂದೆ-ಮಗನ ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಂತರ ವಿದೇಶಿ ನೆಲದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಎಲ್ಲರನ್ನು ನಿಬ್ಬೆರಗಾಗಿಸಿದೆ.


ಇನ್ನು ಮತ್ತೆ WTC ವಿಚಾರಕ್ಕೆ ಬಂದರೆ, ಫೈನಲ್ ಪಂದ್ಯದ ವೇಳೆಗೆ ಅಶ್ವಿನ್ ಅದ್ಭುತ ಫಾರ್ಮ್‌ ನಲ್ಲಿದ್ದರು. ಆದರೆ ಫೈನಲ್‌ನಲ್ಲಿ ಆಡಲು ಅವಕಾಶ ನೀಡದೆ ಟೀಂ ಇಂಡಿಯಾ ದೊಡ್ಡ ತಪ್ಪು ಮಾಡಿತ್ತು. ಫೈನಲ್‌ ನ ಪ್ಲೇಯಿಂಗ್ ಹನ್ನೊಂದರಲ್ಲಿ ಅಶ್ವಿನ್ ಆಯ್ಕೆಯಾಗಿರಲಿಲ್ಲ. ಇನ್ನೊಂದೆಡೆ ಆಸ್ಟ್ರೇಲಿಯ ತನ್ನ ಪ್ಲೇಯಿಂಗ್ XI ನಲ್ಲಿ 4 ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಿತು. ಎಡಗೈ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಫೈನಲ್‌ ನಲ್ಲಿ ಶತಕ ಬಾರಿಸಿದರು. ಅವರ ಶತಕ ಟೀಂ ಇಂಡಿಯಾ ಸೋಲಿಗೆ ದೊಡ್ಡ ಕಾರಣವಾಯಿತು ಎನ್ನಬಹುದು.


ಫೈನಲ್‌ ನಲ್ಲಿ ಅಲೆಕ್ಸ್ ಕ್ಯಾರಿ ಎರಡನೇ ಇನ್ನಿಂಗ್ಸ್‌ ನಲ್ಲಿ 66 ರನ್ ಗಳಿಸಿದ್ದರು. ಆಸ್ಟ್ರೇಲಿಯಾವನ್ನು ಕಡಿಮೆ ಸ್ಕೋರ್‌ ಗೆ ಕಟ್ಟಿಹಾಕಬೇಕು ಎಂದಾಗ, ಆ ಸಮಯದಲ್ಲಿ ಮತ್ತೊಬ್ಬ ಎಡಗೈ ಬ್ಯಾಟ್ಸ್‌ಮನ್ ಮಿಚೆಲ್ ಸ್ಟಾರ್ಕ್, ಕ್ಯಾರಿ ಜೊತೆಗೆ ಸೇರಿ 93 ರನ್ ಜೊತೆಯಾಟವನ್ನು ಹಂಚಿಕೊಂಡರು. ಒಂದು ವೇಳೆ ಫೈನಲ್‌ನಲ್ಲಿ ಅಶ್ವಿನ್ ಮೈದಾನಕ್ಕಿಳಿದಿದ್ದರೆ ಫಲಿತಾಂಶದಲ್ಲಿ ವ್ಯತ್ಯಾಸವಾಗಬಹುದಿತ್ತೇನೋ..! ಇದೀಗ ಡೊಮಿನಿಕಾ ಟೆಸ್ಟ್‌ ನಲ್ಲಿ ಅಶ್ವಿನ್ ಅವರ ಪ್ರದರ್ಶನವನ್ನು ನೋಡಿ, ಮ್ಯಾನೇಜ್‌ಮೆಂಟ್ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡಲೇಬೇಕು.


ಇನ್ನು ಆಸ್ಟ್ರೇಲಿಯಾ ಗೆಲುವು ಕಂಡಂತೆ, ಟ್ವೀಟ್ ಮಾಡಿದ್ದ ಅಶ್ವಿನ್ ಹೀಗೆ ಹೇಳಿದ್ದರು; “WTC Final ಗೆದ್ದಿದ್ದಕ್ಕಾಗಿ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ಕಳೆದ 2 ವರ್ಷಗಳಿಂದ ಇಲ್ಲಿಗೆ ಬರಲು ಇದು ಉತ್ತಮ ಪ್ರಯತ್ನಪಟ್ಟಿದ್ದೆವು. ಎಲ್ಲಾ ಗೊಂದಲಗಳು ಮತ್ತು ಕಟುವಾದ ಮೌಲ್ಯಮಾಪನಗಳ ನಡುವೆ, ಈ ಸೀಸನ್ ನಲ್ಲಿ ಆಡಿದ ನನ್ನ ಎಲ್ಲಾ ಸಹ ಆಟಗಾರರನ್ನು ಮತ್ತು ಮುಖ್ಯವಾಗಿ ಬೆಂಬಲದ ನೀಡಿದ ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು” ಎಂದು ಹೇಳಿದ್ದರು.


ಭಾರತದ ಸೋಲಿನ ನಂತರ ತಕ್ಷಣವೇ ಪೋಸ್ಟ್ ಮಾಡಿದ ಕಾರಣ ಬಿಚ್ಚಿಟ್ಟ ಆಫ್ ಸ್ಪಿನ್ನರ್‌, “ಗೊಂದಲಗಳನ್ನು ಮುಚ್ಚುವ ಅಗತ್ಯವಿದ್ದ ಕಾರಣ ಪೋಸ್ಟ್ ಮಾಡಲಾಗಿದೆ” ಎಂದು ಬಹಿರಂಗಪಡಿಸಿದ್ದಾರೆ.


WTC ಫೈನಲ್‌’ನಲ್ಲಿ ಭಾರತದ ಪ್ಲೇಯಿಂಗ್ 11ನಿಂದ ಹೊರಗುಳಿದ ನಂತರ ಅಶ್ವಿನ್ ಅವರು ಸ್ವೀಕರಿಸಿದ ಸಂದೇಶಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನನ್ನ ಪ್ರಯಾಣದ ಬಗ್ಗೆ ನನಗೆ ಯಾವುದೇ ಸಹಾನುಭೂತಿ ಇಲ್ಲ. ನಾನು ಹಿಂತಿರುಗಿ ಹೇಳುವುದು ತುಂಬಾ ಸುಲಭ, ನನಗೆ ಅದು ಇಷ್ಟವಿಲ್ಲ. ಅದಕ್ಕಾಗಿಯೇ ನಾನು ಟ್ವೀಟ್ ಮಾಡಿದೆ. ಇನ್ನು ಕೆಲವರು ಆಟವನ್ನಾಡದೇಯೇ ಆ ವಿಷಯದಲ್ಲಿ ದೊಡ್ಡವರಂತೆ ವರ್ತಿಸುತ್ತಾರೆ. ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತಿದ್ದೆ ಜೊತೆಗೆ ಅತ್ಯುತ್ತಮ ಅವಕಾಶವನ್ನು ನೀಡಿದ್ದೇನೆ” ಎಂದರು.


ಇದನ್ನೂ ಓದಿ: ಟೆಸ್ಟ್’ನಲ್ಲಿ ವಿರಾಟ್ ವಿಕೆಟ್ ಕಿತ್ತ ಈ ಆಟಗಾರನ ತೂಕ 143 ಕೆಜಿ! ದೈತ್ಯ ಕ್ರಿಕೆಟಿಗ ವಿಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?


ಒಟ್ಟಾರೆಯಾಗಿ ಟೀಂ ಇಂಡಿಯಾ ಸದ್ಯ ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದ್ದು, ಮೊದಲ ಪಂದ್ಯ ಮತ್ತು ಇನ್ನಿಂಗ್ಸ್’ನ್ನು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಅಶ್ವಿನ್ ಅದ್ಭುತ ದಾಖಲೆಗಳನ್ನು ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ