ನವದೆಹಲಿ: ಪ್ರತಿ ಬಾರಿಯೂ ಮೊಹಮ್ಮದ್ ಕೈಫ್ ಬಗ್ಗೆ ಯಾರಾದರೂ ಪ್ರಸ್ತಾಪಿಸಿದಾಗ, ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2002 ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯದ ಗೆಲುವಿನ ಮೂಲಕ ಸ್ಮರಿಸಲಾಗುತ್ತದೆ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಪಂದ್ಯದಲ್ಲಿ 326 ರನ್ ಗಳ ಗುರಿಯನ್ನು ತಲುಪುವ ಮೂಲಕ  ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.


COMMERCIAL BREAK
SCROLL TO CONTINUE READING

ಆದಾಗ್ಯೂ ಅವರು ಭಾರತ ಟೆಸ್ಟ್ ತಂಡದಲ್ಲಿ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ನಿಯಮಿತವಾಗಿ ಕಾಣಿಸಿಕೊಳ್ಳಲಿಲ್ಲ. ಈಗ ಈ ವಿಚಾರವಾಗಿ ಮಾತನಾಡಿರುವ ಮೊಹಮ್ಮದ್ ಕೈಫ್ ,ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿ.ವಿ.ಎಸ್. ಲಕ್ಷ್ಮಣ್, ರಂತಹ ಹಿರಿಯ ಆಟಗಾರರು ಉತ್ತಮ ಫಾರ್ಮ್ ನಲ್ಲಿ ಇದ್ದ ಕಾರಣ ತಮಗೆ ಅವಕಾಶ ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಟಿ 20 ಕ್ರಿಕೆಟ್‌ ನಲ್ಲಿ ಈ ಆಟಗಾರನಿಂದ ಮಾತ್ರ ಡಬಲ್ ಸೆಂಚುರಿ ಸಾಧ್ಯ ಎಂದ ಮೊಹಮ್ಮದ್ ಕೈಫ್...!


“ಆ ಸಮಯದಲ್ಲಿ ಭಾರತೀಯ ತಂಡವು ಸಚಿನ್, ದ್ರಾವಿಡ್, ಸೆಹ್ವಾಗ್ ಅವರಂತಹ ದೊಡ್ಡ ಆಟಗಾರರಿಂದ ತುಂಬಿತ್ತು. ಹಾಗಾಗಿ ನನಗಿಂತ ಯುವರಾಜ್‌ಗೆ ಹೆಚ್ಚಿನ ಅವಕಾಶಗಳು ದೊರೆತರೂ ನಾನು ಮತ್ತು ಯುವರಾಜ್‌ಗೆ ಅನೇಕ ಟೆಸ್ಟ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ ”ಎಂದು ಭಾರತದ ಪರವಾಗಿ 13 ಟೆಸ್ಟ್‌ಗಳನ್ನು ಆಡಿದ ಕೈಫ್  ತಿಳಿಸಿದರು.


ಇದನ್ನೂ ಓದಿ: 2002 ರಲ್ಲಿ ನಾಸಿರ್ ಹುಸೇನ್ ನನ್ನನ್ನು ಬಸ್ ಡ್ರೈವರ್ ಎಂದು ಹಿಯಾಳಿಸಿದ್ದರು- ಕೈಫ್


"ನಾಗ್ಪುರದಲ್ಲಿ (2006 ರಲ್ಲಿ)  ತಂಡದಲ್ಲಿ ಆಟಗಾರರೊಬ್ಬರು ಗಾಯಗೊಂಡಾಗ ಇಂಗ್ಲೆಂಡ್ ವಿರುದ್ಧ ಆಡಲು ನನಗೆ ಅವಕಾಶ ಸಿಕ್ಕಿತು. ಆಗ ನಾನು 91 ರನ್ ಗಳಿಸಿದೆ ಆದರೆ ನಂತರ ಆ ವ್ಯಕ್ತಿಗೆ ಗುಣಮುಖರಾದ ನಂತರ  ನನ್ನನ್ನು ಮತ್ತೆ ಕೈಬಿಡಲಾಯಿತು. ಆದ್ದರಿಂದ ಆ ತಂಡವು ತುಂಬಾ ಪ್ರಬಲವಾಗಿತ್ತು, ನನಗೆ ಆಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರು ಆಟದ ಶ್ರೇಷ್ಠರು, ದಂತಕಥೆಗಳು, ಸಚಿನ್, ದ್ರಾವಿಡ್ ಅವರಂತಹ ಆಟಗಾರರು ನಮಗೆ ಸ್ಫೂರ್ತಿ ನೀಡಿದರು 'ಎಂದು ಕೈಫ್ ಹೇಳಿದರು.


ಕೈಫ್ ನಾಯಕತ್ವದಲ್ಲಿ, ಭಾರತ U-19 ತಂಡವು 2000 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾವನ್ನು ಸೋಲಿಸಿದ ನಂತರ U-19 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಅದರ ನಂತರ ಅವರು  2000 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದರು.