ನವದೆಹಲಿ: ಔಟ್ ಫಾರ್ಮ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಪದೇ ಪದೇ ಅವಕಾಶ ನೀಡುತ್ತಿದೆ ಎಂದು ಭಾರತದ ಮಾಜಿ ವೇಗದ ಬೌಲರ್ & ಕನ್ನಡಿಗ ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ. ನವೆಂಬರ್ 2019ರಿಂದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ. ಸದ್ಯ ಅವರು ಎಲ್ಲಾ ಮಾದರಿಯ ಪಂದ್ಯಗಳಲ್ಲಿಯೂ ಕಳಪೆ ಫಾರ್ಮ್ ತೋರುತ್ತಿದ್ದಾರೆ. ಹೀಗಾಗಿ ಕೊಹ್ಲಿ ಸೇರಿದಂತೆ ಕಳಪೆ ಫಾರ್ಮ್ ಹೊಂದಿರುವ ಎಲ್ಲಾ ಸ್ಟಾರ್ ಆಟಗಾರರನ್ನು ಮುಲಾಜಿಲ್ಲದೆ ತಂಡದಿಂದ ಕೈಬಿಡಬೇಕೆಂದು ಅವರು ಬಿಸಿಸಿಐಗೆ ಸಲಹೆ ನೀಡಿದ್ದಾರೆ.   


COMMERCIAL BREAK
SCROLL TO CONTINUE READING

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ವೆಂಕಟೇಶ್ ಪ್ರಸಾದ್, ‘ಟೀಂ ಇಂಡಿಯಾದಲ್ಲಿ ಕೆಲವು ಆಟಗಾರರು ಕಳಪೆ ಆಟ ಆಡುತ್ತಿದ್ದಾರೆ. ಇದರಿಂದ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕಳಪೆ ಫಾರ್ಮ್ ಹೊಂದಿರುವ ಎಲ್ಲಾ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡಬೇಕು’ ಎಂದು ಹೇಳಿದ್ದಾರೆ.  ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಆಡಲಿದ್ದಾರೆ. ಈ ಸರಣಿಯ ಮೊದಲ ಪಂದ್ಯ ಮಂಗಳವಾರ ಓವಲ್‌ನಲ್ಲಿ ನಡೆಯಲಿದೆ. ಕೊಹ್ಲಿ ಆಟದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.


ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಈ ಸ್ಟಾರ್‌ ಆಟಗಾರನೇ ಕಾರಣ! ಅಭಿಮಾನಿಗಳ ಆಕ್ರೋಶ


ದೇಶಿ ಕ್ರಿಕೆಟ್‌ ಮೂಲಕ ಕಮ್‌ಬ್ಯಾಕ್‌ ಮಾಡಬೇಕು


ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ T20I ಸರಣಿಯಿಂದಲೂ ಕೊಹ್ಲಿ ವಿಶ್ರಾಂತಿ ಪಡೆಯುತ್ತಾರೆಂಬ ಊಹಾಪೋಹಗಳಿವೆ. ‘ಈ ಹಿಂದೆ ಕಳಪೆ ಫಾರ್ಮ ಕಾರಣ ನೀಡಿ ದಿಗ್ಗಜ ಆಟಗಾರರಿಗೆ ಗೇಟ್‍ಪಾಸ್ ನೀಡಲಾಗಿತ್ತು. ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರನ್ನು ಫಾರ್ಮ್ ಇಲ್ಲದ ಕಾರಣ ಕೈಬಿಡಲಾಗಿತ್ತು. ದೇಶೀಯ ಕ್ರಿಕೆಟ್‌ಗೆ ಮರಳಿ ಬಂದ ಅವರು ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡದಲ್ಲಿ ಸ್ಥಾನ ಪಡೆದರು. ಅದೇ ರೀತಿ ಕಳಪೆ ಲಯ ಹೊಂದಿರುವ ಸ್ಟಾರ್‌ ಆಟಗಾರು ದೇಶಿ ಕ್ರಿಕೆಟ್‌ ಮೂಲಕ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಬೇಕೆಂದು’ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.


ಸೆಹ್ವಾಗ್-ಯುವರಾಜ್‍ರಂತೆ ಕೊಹ್ಲಿಯನ್ನೂ ಕೈಬಿಡಬೇಕು


ಭಾರತ ಪರ 33 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಾದ್, ‘ಈ ಹಿಂದೆ ಫಾರ್ಮ್‌ನಿಂದ ಹೊರಗಿರುವಾಗ ವಿಶ್ರಾಂತಿ ನೀಡುತ್ತಿದ್ದ ರೂಢಿಗಳು ಈಗ ಸಾಕಷ್ಟು ಬದಲಾಗಿವೆ. ಈಗ ಹಾಗಲ್ಲ. ಇದು ಪ್ರಗತಿಗೆ ಸರಿಯಾದ ಮಾರ್ಗವಲ್ಲ. ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರು ತಮ್ಮ ವೃತ್ತಿಯೊಂದಿಗೆ ಆಟವಾಡಲು ಸಾಧ್ಯವಿಲ್ಲ. ಎಡ್ಜ್‌ಬಾಸ್ಟನ್ ಮತ್ತು ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡು T20 ಪಂದ್ಯಗಳಲ್ಲಿ ವಿರುದ್ಧ ಭಾರತ 2-1ರಿಂದ ಸರಣಿ ಗೆದ್ದಿತು. ಆದರೆ, ಈ ಸರಣಿಯಲ್ಲಿ ಕೊಹ್ಲಿ ಕೇವಲ 11 ರನ್ ಗಳಿಸಿದರು. ಕಳಪೆ ಫಾರ್ಮ್‍ನಲ್ಲಿರುವ ಕೊಹ್ಲಿಯನ್ನು ಸೆಹ್ವಾಗ್-ಯುವರಾಜ್‍ರಂತೆ ಕೈಬಿಡಬೇಕೆಂದು’ ಹೇಳಿದ್ದಾರೆ.


ಇದನ್ನೂ ಓದಿ: Suryakumar Yadav : ಕೇವಲ 1 ರನ್‌ನಿಂದ 'ವಿಶ್ವ ದಾಖಲೆ' ಮಿಸ್ ಮಾಡಿಕೊಂಡ ಸೂರ್ಯಕುಮಾರ್ ಯಾದವ್! 


ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಕೊಹ್ಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳಪೆ ಫಾರ್ಮ್ ಹೊಂದಿರುವ ಕೊಹ್ಲಿಗೆ XIನಲ್ಲಿ ಅವಕಾಶ ನೀಡಿರುವ ತಂಡದ ಮ್ಯಾನೇಜ್‌ಮೆಂಟ್‌ ವಿರುದ್ಧವೂ ಅವರು  ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಯಾವ ರೀತಿಯ ಪ್ರದರ್ಶನ ತೋರುತ್ತಾರೋ ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ