T20 World Cup 2024 : ಈ ಇಬ್ಬರು ಸ್ಟಾರ್ ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್!?
Virat Kohli-Rohit Sharma: ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು `ಎ` ಗುಂಪಿನಲ್ಲಿವೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಅಮೆರಿಕ ಪ್ರವೇಶಿಸಿದೆ.
T20 World Cup 2024: T20 ವಿಶ್ವಕಪ್ 2024 (T20 ವಿಶ್ವಕಪ್ 2024) ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ವಿಶ್ವಕಪ್ ನಲ್ಲಿ 20 ತಂಡಗಳು ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿವೆ.
ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನಲ್ಲಿವೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಅಮೆರಿಕ ಪ್ರವೇಶಿಸಿದೆ.
ಇದನ್ನೂ ಓದಿ-ಒಲಿಂಪಿಕ್ಸ್ : ಬಾಕ್ಸಿಂಗ್ ಚಿನ್ನ ವಿಜೇತರಿಗೆ ನಗದು ಬಹುಮಾನ ಘೋಷಿಸಿದ ಐಬಿಎ
ಸದ್ಯ ರೋಹಿತ್ ಶರ್ಮಾಗೆ 37 ವರ್ಷ ಮತ್ತು ವಿರಾಟ್ ಕೊಹ್ಲಿಗೆ 35 ವರ್ಷ.. ಹೀಗಾಗಿ ಈ ಇಬ್ಬರು ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್ ಆಗಲಿದೆ ಎನ್ನುವ ವರದಿಗಳು ಬಂದಿವೆ.. ಅಲ್ಲದೇ ಎರಡು ವರ್ಷಗಳ ನಂತರ ಕೊಹ್ಲಿ ಟಿ20 ವಿಶ್ವಕಪ್ ಗೆ ಆಯ್ಕೆಯಾಗುವುದು ಅನುಮಾನವೆನ್ನಲಾಗಿತ್ತಿದೆ. ಏಕೆಂದರೆ ಆ ಹೊತ್ತಿಗೆ ಯುವ ಆಟಗಾರರು ತಂಡ ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ-ಟೀಮ್ ಇಂಡಿಯಾಗೆ ಮುಖ್ಯ ಕೋಚ್ ಆಗಲಿದ್ದಾರೆಯೇ ಗೌತಮ್ ಗಂಭೀರ್? ಎನ್ ಹೇಳ್ತಾರೆ ಈ ಐಪಿಎಲ್ ತಂಡದ ಓನರ್?
ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್ ಮತ್ತು ರುತುರಾಜ್ ಗಾಯಕ್ವಾಡ್ ಈಗಾಗಲೇ ಟೀಮ್ ಇಂಡಿಯಾದ ಕರೆಗಾಗಿ ಕಾಯುತ್ತಿದ್ದಾರೆ. ಈ ಟಿ20 ವಿಶ್ವಕಪ್ ಬಳಿಕ ತಂಡದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ.
ಈ ಲೆಕ್ಕಾಚಾರದ ಪ್ರಕಾರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿರಬಹುದು. ಹೀಗಾಗಿ ಈ ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ನಿರ್ಧರಿಸಿದ್ದಾರೆ. 2007 ರ T20 ವಿಶ್ವಕಪ್ ಗೆದ್ದ ನಂತರ, ಭಾರತ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಲಿಲ್ಲ. ಅಲ್ಲದೇ 2013 ರ ಚಾಂಪಿಯನ್ಸ್ ಟ್ರೋಫಿ ನಂತರ, ಭಾರತ ಮತ್ತೊಮ್ಮೆ ICC ಟ್ರೋಫಿಯನ್ನೂ ಸಹ ಗೆದ್ದಿರಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.