ಸದ್ಯ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿದ್ದು,  ಈ ಪ್ರವಾಸದಲ್ಲಿರುವ ಆಟಗಾರನೋರ್ವನಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಆಟಗಾರನಿಗೆ ಶೀಘ್ರದಲ್ಲೇ ನಾಯಕತ್ವದ ಜವಾಬ್ದಾರಿ ಸಿಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಈ ಆಟಗಾರನ ಇತ್ತೀಚಿನ ಆಟದ ವೈಖರಿಯು ತುಂಬಾ ಉತ್ತಮವಾಗಿದೆ. ಈ ದೃಷ್ಟಿಯಿಂದ ಆಯ್ಕೆದಾರರು ಶೀಘ್ರದಲ್ಲೇ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸೂಚನೆಯಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Beetroot Benefits: ಬೀಟ್‌ರೂಟ್‌ನಿಂದ ಸಿಗುವ ಆರೋಗ್ಯದ ಪ್ರಯೋಜನಗಳು ಏನು?


ನ್ಯೂಜಿಲೆಂಡ್‌ನ ಎ ತಂಡವು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕತ್ವ ಆಟಗಾರನ ಹೆಗಲೇರುವಚ ಸಾಧ್ಯತೆ ಕಂಡುಬರುತ್ತಿದೆ.  


ಸೆಪ್ಟೆಂಬರ್‌ನಲ್ಲಿ, ನ್ಯೂಜಿಲೆಂಡ್‌ A ತಂಡ ಭಾರತ ಪ್ರವಾಸದಲ್ಲಿ ಮೂರು ನಾಲ್ಕು ದಿನಗಳ ಪಂದ್ಯಗಳು ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ. ಈ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ಎ ವಿರುದ್ಧದ ಈ ಪಂದ್ಯಗಳಿಗೆ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಭಾರತ ಎ ತಂಡದ ನಾಯಕನಾಗುವ ಸಾಧ್ಯತೆಯಿದೆ. ಶುಭಮನ್ ಗಿಲ್ ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ ಮತ್ತು ತಂಡಕ್ಕೆ ದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸುತ್ತಿದ್ದಾರೆ.


ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವಿನ ಪ್ರವಾಸ ಸೆಪ್ಟೆಂಬರ್ 1 ರಿಂದ ಆರಂಭವಾಗಲಿದೆ. ಮೊದಲ ನಾಲ್ಕು ದಿನಗಳ ಪಂದ್ಯ ಉಭಯ ತಂಡಗಳ ನಡುವೆ ನಡೆಯಲಿದೆ. ಮೊದಲ ನಾಲ್ಕು ದಿನಗಳ ಪಂದ್ಯ ಸೆಪ್ಟೆಂಬರ್ 1 ರಿಂದ 4 ರವರೆಗೆ ನಡೆಯಲಿದ್ದು, ಎರಡನೇ ನಾಲ್ಕು ದಿನಗಳ ಪಂದ್ಯ ಸೆಪ್ಟೆಂಬರ್ 8-11 ರವರೆಗೆ ನಡೆಯಲಿದೆ. ಈ ಎರಡೂ ನಾಲ್ಕು ದಿನಗಳ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಾದ ಬಳಿಕ ಏಕದಿನ ಪಂದ್ಯಗಳು ಆರಂಭವಾಗಲಿವೆ. ಈ ಏಕದಿನ ಪಂದ್ಯಗಳು ಸೆಪ್ಟೆಂಬರ್ 22, ಸೆಪ್ಟೆಂಬರ್ 25 ಮತ್ತು ಸೆಪ್ಟೆಂಬರ್ 27 ರಂದು ಚೆನ್ನೈನಲ್ಲಿ ನಡೆಯಲಿವೆ.


ಇದನ್ನೂ ಓದಿ: ATM Cash Withdrawal New Charges: ATM ನಿಂದ ಹಣ ಹಿಂಪಡೆಯುಲು ಎಷ್ಟು ಶುಲ್ಕ ಮತ್ತು ತೆರಿಗೆ ಪಾವತಿಸಬೇಕು?


ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ಯಶ್ ದುಬೆ, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಅಕ್ಷಯ್ ವಾಡ್ಕರ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಮೊಹಮ್ಮದ್ ಸಿರಾಜ್, 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ