T20 World Cup 2024: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ ಗೆದ್ದುಕೊಂಡಿತು. ಕಳೆದ 11 ವರ್ಷಗಳಿಂದ ಈ ಐತಿಹಾಸಿಕ ಗೆಲುವಿಗಾಗಿ ಭಾರತೀಯ ಅಭಿಮಾನಿಗಳು ಕಾಯುತ್ತಿದ್ದರು. ಅಂತಿಮವಾಗಿ ರೋಹಿತ್ ಸೇನೆ ಈ ಕನಸನ್ನು ನನಸು ಮಾಡಿ ಕೋಟ್ಯಂತರ ಭಾರತೀಯರಿಗೆ ಸಂತಸ ತಂದಿದೆ. ವೆಸ್ಟ್ ಇಂಡೀಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 176/7 ಸ್ಕೋರ್ ಮಾಡಿದರೆ, ದಕ್ಷಿಣ ಆಫ್ರಿಕಾ ಎಲ್ಲಾ ಓವರ್‌ಗಳನ್ನು ಆಡಿ 169/8 ಗಳಿಸುವಲ್ಲಿ ಯಶಸ್ವಿಯಾಯಿತು.


COMMERCIAL BREAK
SCROLL TO CONTINUE READING

ಈ ಗೆಲುವಿನ ಜೊತೆಗೆ ಭಾರತೀಯ ಅಭಿಮಾನಿಗಳಿಗೆಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ ಸುದ್ದಿ ಬೇಸರ ಮೂಡಿಸಿದೆ. ಟಿ20 ಮಾದರಿ ಆಡುವ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ತಂಡವನ್ನು ಮುನ್ನಡೆಸಲು ಕೊಹ್ಲಿ ಬಯಸಿದ್ದಾರೆ. ಕೊಹ್ಲಿ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಆಡಲಿದ್ದಾರೆ. ಟಿ20 ತೊರೆದ ನಂತರ ಭಾರತ ತಂಡದಲ್ಲಿ ಕೊಹ್ಲಿ ಸ್ಥಾನ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಇದೀಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಟಿ20 ವಿಶ್ವಕಪ್ ಚಾಂಪಿಯನ್: ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ! 


ಶುಭಮನ್ ಗಿಲ್: 24 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಈಗ ಭಾರತೀಯ ಟಿ20 ತಂಡದಲ್ಲಿ ತಮ್ಮ ಪ್ರಭಾವಶಾಲಿ ಫಾರ್ಮ್‌ನೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ ಗಿಲ್‌ಗೆ ಟಿ20 ಮಾದರಿಯಲ್ಲಿ ಇದುವರೆಗೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ. 14 ಪಂದ್ಯಗಳಲ್ಲಿ 25.76 ಸರಾಸರಿಯಲ್ಲಿ 335 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಅರ್ಧ ಶತಕ ಸೇರಿದೆ. 3ನೇ ಕ್ರಮಾಂಕದಲ್ಲಿ ಆಡುವಾಗ ಗಿಲ್ ಅವರ ದಾಖಲೆಯೂ ಉತ್ತಮವಾಗಿದೆ.  


ರುತುರಾಜ್ ಗಾಯಕ್ವಾಡ್: ಕೊಹ್ಲಿ ಸ್ಥಾನಕ್ಕೆ ರುತುರಾಜ್ ಗಾಯಕ್ವಾಡ್ ಹೆಸರು ಕೂಡ ಕೇಳಿಬರುತ್ತಿದೆ. ಗಾಯಕ್ವಾಡ್ ಭಾರತ ಪರ ಇದುವರೆಗೆ 19 ಟಿ20 ಪಂದ್ಯಗಳನ್ನು ಆಡಿದ್ದಾರೆ. 35.71 ಸರಾಸರಿ ಮತ್ತು 500 ರನ್ ಗಳಿಸಿದರು. ಗಾಯಕ್ವಾಡ್‌ಗೆ ಅವಕಾಶ ಸಿಕ್ಕಾಗಲೆಲ್ಲ ಸದುಪಯೋಗಪಡಿಸಿಕೊಂಡರು.  


ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಶ್ಲಾಘನೆ..!


ಸಂಜು ಸ್ಯಾಮ್ಸನ್: ವಿರಾಟ್ ಕೊಹ್ಲಿ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ಟೀಮ್ ಇಂಡಿಯಾದಲ್ಲಿ ಸೇರ್ಪಡೆಗೊಳ್ಳಬಹುದು. ಪಂತ್ ಕಾರಣದಿಂದ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಆದರೆ, ಈಗ ಕೊಹ್ಲಿ ನಿರ್ಗಮನದ ನಂತರ ಅವರು ಸುಲಭವಾಗಿ ತಂಡಕ್ಕೆ ಬರುತ್ತಾರೆ ಎನ್ನಲಾಗ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.