Virat Kohli: ಅಹಮದಾಬಾದ್ ಟೆಸ್ಟ್’ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ವಿರಾಟ್ ಕೊಹ್ಲಿ ಮೂರು ವರ್ಷಗಳ ನಂತರ 100 ರನ್ ಗಡಿ ದಾಟಿದ್ದು, ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಇದು ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 28ನೇ ಟೆಸ್ಟ್ ಶತಕವಾಗಿದೆ. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ವಿರಾಟ್ ಪಾಲಿಗೆ ಈ ಪಂದ್ಯ ವಿಶೇಷವಾಗಿತ್ತು. ಶತಕದ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 40 ತಿಂಗಳ ನಂತರ ಒಂದು ಮಹತ್ವದ ಸುದ್ದಿಯನ್ನು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 364 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ 186 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್‌’ಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ 40 ತಿಂಗಳ ನಂತರ ವಿರಾಟ್ ಕೊಹ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದ್ದಾರೆ.


ಇದನ್ನೂ ಓದಿ: Mangal Gochar 2023: ಕೆಲವೇ ಗಂಟೆಗಳಲ್ಲಿ ಮಂಗಳ ಪಥ ಬದಲಾಯಿಸುತ್ತಿದ್ದಂತೆ ಈ ಜನರ ಜೀವನದಲ್ಲಿ ನಡೆಯುತ್ತೆ ಆಘಾತಕಾರಿ ಘಟನೆಗಳು!


ಕೊಹ್ಲಿ ಟೆಸ್ಟ್ ಕ್ರಿಕೆಟ್‌’ನಲ್ಲಿ ಮೂರು ವರ್ಷಗಳಿಂದ ಶತಕ ಬಾರಿಸಿರಲಿಲ್ಲ. ಇದೀಗ ಆ ಬರವನ್ನು ಅಂತ್ಯಗೊಳಿಸಿದ್ದಾರೆ.  ಕೊನೆಯದಾಗಿ ನವೆಂಬರ್ 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದರು.


ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅವರು, “ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 10 ವರ್ಷಗಳಿಂದ ನನ್ನ ಮೂಲ ವೇಗದೊಂದಿಗೆ ಆಡಲು ಸಾಧ್ಯವಾಗುತ್ತಿಲ್ಲ. ನಾನು ಮಾಡಲು ಪ್ರಯತ್ನಿಸುತ್ತಿರುವುದು ಇದೊಂದೇ. ನಾಗ್ಪುರದಲ್ಲಿ ಮೊದಲ ಇನ್ನಿಂಗ್ಸ್‌’ನಿಂದ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ತಂಡಕ್ಕಾಗಿ ಸಾಧ್ಯವಾದಷ್ಟು ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ. ಇಂದು ಮಾಡಿದ ಸಾಧನೆ, ಹಿಂದೆ ಮಾಡಿದ ಸಾಮರ್ಥ್ಯದ ಅನುಸಾರವಾಗಿಲ್ಲ. ಆದರೂ ಸಹ ನಿರಾಸೆಯಾದರೂ ಚೆನ್ನಾಗಿ ಆಡುತ್ತಿದ್ದೇನೆ ಎಂಬ ನಂಬಿಕೆ ಇತ್ತು” ಎಂದು ಹೇಳಿದರು.


ಇದನ್ನೂ ಓದಿ: Vaathi Film: ಅಭಿಮಾನಿಗಳಿಗೆ  ಸಿಹಿ ಸುದ್ದಿ ನೀಡಿದ ತೆಲುಗು ನಟ  ಧನುಷ್..


ಆಸ್ಟ್ರೇಲಿಯಾ ವಿರುದ್ಧ ಇದುವರೆಗಿನ ಅತಿದೊಡ್ಡ ಇನ್ನಿಂಗ್ಸ್:


186 ಟೆಸ್ಟ್ ಕ್ರಿಕೆಟ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಭಾರತವು ಅಹಮದಾಬಾದ್‌ನಲ್ಲಿ ಡ್ರಾ ಸಾಧಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಮಾರ್ಚ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಸಹ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಭಯ ತಂಡಗಳ ನಡುವಿನ ಈ ಸರಣಿಯಲ್ಲಿ ಒಟ್ಟು 3 ಏಕದಿನ ಪಂದ್ಯಗಳು ನಡೆಯಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.