T20 World Cup 2024: 2024ರ ಟಿ20 ವಿಶ್ವಕಪ್‌’ನಲ್ಲಿ ಸೂಪರ್ 8 ಪಂದ್ಯಗಳಿಗೆ ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಗ್ರೂಪ್ ಪಂದ್ಯಗಳು ಅಮೆರಿಕದಲ್ಲಿ ನಡೆದಿದ್ದರೆ, ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್ ನಿಧಾನಗತಿಯ ಪಿಚ್‌’ಗಳಲ್ಲಿ ನಡೆಯಲಿವೆ. ಆದರೆ ಟೂರ್ನಿಯಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್’ನಲ್ಲಿ ಆಡುವುದರ ಜೊತೆಗೆ ಇನ್ನು ಕೆಲವು ಅಂಶಗಳು ಟೀಂ ಇಂಡಿಯಾವನ್ನು ಕಾಡುತ್ತಿವೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಫಾರ್ಮ್ ಆತಂಕಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಗುಂಪು ಹಂತದಲ್ಲಿ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದ್ದರು. ಪಾಕಿಸ್ತಾನದ ಪಂದ್ಯದಲ್ಲಿ, ನಸೀಮ್ ಶಾ ಕವರ್ ಪಾಯಿಂಟ್‌’ನಲ್ಲಿ ಬೌಲ್ಡ್ ಆಗಿ ನಾಲ್ಕು ರನ್‌’ಗಳಿಗೆ ಪೆವಿಲಿಯನ್ ತಲುಪಿದ್ದರು. ಯುಎಸ್ಎ ವಿರುದ್ಧದ ಪಂದ್ಯದಲ್ಲಿ, ಸೌರಭ್ ನೇತ್ರವಾಲ್ಕರ್ ಔಟ್ ಆಫ್ ಸ್ಟಂಪ್ ಎಸೆತಕ್ಕೆ ಡಕ್ ಆಗಿದ್ದರು.


ಇದನ್ನೂ ಓದಿ: ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯ


ಮೂರು ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿರುವ ಕೊಹ್ಲಿ ಸರಾಸರಿ 1.66 ಆಗಿದೆ. ಈ ರೀತಿಯ ಪ್ರದರ್ಶನ ಯಾವುದೇ ತಂಡಕ್ಕಾದರೂ ಕಳವಳಕಾರಿ. ಆದರೆ ಇದೀಗ ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಸೂಪರ್ 8 ಹಂತದಲ್ಲಿ ವಿರಾಟ್ ತಮ್ಮ ಫಾರ್ಮ್ ಪಡೆಯುವ ನಿರೀಕ್ಷೆಯಿದೆ.


ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಕೊಹ್ಲಿಯ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ. “ಕೊಹ್ಲಿಯ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು” ಎಂದಿದ್ದಾರೆ. "ಕಡಿಮೆ ಸ್ಕೋರ್, ಅವರು ಫಾರ್ಮ್‌ನಿಂದ ಹೊರಗಿದ್ದಾರೆ ಎಂದು ಅರ್ಥವಲ್ಲ. ಕೆಲವೊಮ್ಮೆ ಉತ್ತಮ ಎಸೆತಗಳನ್ನು ಎದುರಿಸಬೇಕಾಗುತ್ತದೆ. ನೀವು ಅವರ ಮೇಲೆ ನಂಬಿಕೆ ಇಡಬೇಕು, ಸೂಪರ್ 8 ರಲ್ಲಿ ಉತ್ತಮ ಅಂಕ ಗಳಿಸುತ್ತಾರೆ” ಎಂದು ಗವಾಸ್ಕರ್ ಹೇಳಿದ್ದಾರೆ.


ಇನ್ನೊಂದೆಡೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮಾತನಾಡಿದ್ದು, “ವೆಸ್ಟ್ ಇಂಡೀಸ್‌’ನಲ್ಲಿನ ಪರಿಸ್ಥಿತಿಯು ಅವರ ಬ್ಯಾಟಿಂಗ್‌’ಗೆ ಅನುಕೂಲಕರವಾಗಿರುತ್ತದೆ. ದೊಡ್ಡ ಪಂದ್ಯಗಳಲ್ಲಿ ಹೇಗೆ ನಿಲ್ಲಬೇಕೆಂದು ಅವರಿಗೆ ತಿಳಿದಿದೆ. ಅವರೊಬ್ಬ ವಿಶೇಷ ಆಟಗಾರ. ಟೀಂ ಇಂಡಿಯಾ ಪರ ಮುಂಚೂಣಿಯಿಂದಲೇ ಹೋರಾಡಲಿದ್ದಾರೆ” ಎಂದು ಪಠಾಣ್ ಹೇಳಿದ್ದಾರೆ.


ಭಾರತದ ಮಾಜಿ ಟೆಸ್ಟ್ ಓಪನರ್ ಆಕಾಶ್ ಚೋಪ್ರಾ ಕೂಡ, “ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು ಕೊಹ್ಲಿ ಕ್ರೀಸ್‌’ನಲ್ಲಿ ಸ್ವಲ್ಪ ಸಮಯ ಕಳೆಯಬೇಕು” ಎಂದು ಸಲಹೆ ನೀಡಿದ್ದಾರೆ. ಭಾರತದ ಮತ್ತೋರ್ವ ಆರಂಭಿಕ ಓಪನರ್ ವಾಸಿಂ ಜಾಫರ್ ಕೂಡ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. “ವಿರಾಟ್ ಕೊಹ್ಲಿಯನ್ನು ಕಡಿಮೆ ಅಂದಾಜು ಮಾಡಬೇಡಿ. ಟೂರ್ನಿ ಮುಂದುವರೆದಂತೆ ಅವರು ತಮ್ಮ ಸಾಮರ್ಥ್ಯ ತೋರಲಿದ್ದಾರೆ” ಎಂದಿದ್ದಾರೆ


ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಕೂಡ ಮಾತನಾಡಿದ್ದು, “ಈ ಹಂತವನ್ನು ದಾಟಲು ಸ್ವಲ್ಪ ಸಮಯ ನೀಡಬೇಕು. ವಿರಾಟ್ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಯಾರೂ ಅದನ್ನು ಇಷ್ಟಪಡುವುದಿಲ್ಲ. ಈ ಶ್ರೇಷ್ಠ ಚಾಂಪಿಯನ್‌ಗಳು ಮುಕ್ತವಾಗಿ ಆಡುವುದನ್ನು ಪ್ರತಿಯೊಬ್ಬರೂ ನೋಡಲು ಬಯಸುತ್ತಾರೆ” ಎಂದು ಹೇಳಿದರು.


ಇದನ್ನೂ ಓದಿ:  ದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರು


ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯ : ಟೀಂ ಇಂಡಿಯಾ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಗುರುವಾರ, ಜೂನ್ 20 ರಂದು ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್‌ನಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಹೇಗೆ ಆಡಲಿದ್ದಾರೆ ಎಂದು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಕಾತರದಿಂದ ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ