ಟೀಂ ಇಂಡಿಯಾದ ಶ್ರೇಷ್ಠತೆಗಾಗಿ ಮೈದಾನದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಭಾರತದ ದಿಗ್ಗಜ ಕ್ರಿಕೆಟಿಗ! ಆ ತ್ಯಾಗಮಯಿ ಆಟಕ್ಕೆ ತಲೆಬಾಗಿತ್ತು ಕ್ರಿಕೆಟ್ ಲೋಕ
selfless cricketers: ಚತುರರ ಮಧ್ಯೆ ನಿಸ್ವಾರ್ಥದಿಂದ ಕ್ರಿಕೆಟ್ ಲೋಕದಲ್ಲಿ ಆಟವಾಡಿದ ಮೂವರು ದಿಗ್ಗಜ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
Selfless Cricketers: ಟೀಂ ಇಂಡಿಯಾದಲ್ಲಿ ಅನೇಕ ದಿಗ್ಗಜ ಕ್ರಿಕೆಟಿಗರಿದ್ದಾರೆ. ಒಬ್ಬರಿಂದ ಒಬ್ಬರು ಚತುರರೇ... ಅಂತಹ ಚತುರರ ಮಧ್ಯೆ ನಿಸ್ವಾರ್ಥದಿಂದ ಕ್ರಿಕೆಟ್ ಲೋಕದಲ್ಲಿ ಆಟವಾಡಿದ ಮೂವರು ದಿಗ್ಗಜ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: Daily GK Quiz: ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸುವರ್ಣ ವಿಧಾನ ಸೌಧವಿದೆ..?
ಯುವರಾಜ್ ಸಿಂಗ್
ಈ ಪಟ್ಟಿಯಲ್ಲಿ ಮೊದಲ ಹೆಸರು ಯುವರಾಜ್ ಸಿಂಗ್ ಅವರದ್ದು. ಕ್ರಿಕೆಟ್ ಮೈದಾನದಲ್ಲಿ ತನ್ನ ಪ್ರಾಣದ ಬಗ್ಗೆ ತಲೆಕೆಡಿಸಿಕೊಳ್ಳದ ಆಟಗಾರ ಈತ. ಅನೇಕ ಆಟಗಾರರು ಸಣ್ಣಪುಟ್ಟ ಗಾಯಗಳಾದರೂ ಮೈದಾನವನ್ನು ತೊರೆಯುತ್ತಾರೆ. ಆದರೆ 2011ರ ವಿಶ್ವಕಪ್ ಸಂದರ್ಭದಲ್ಲಿ ಯುವರಾಜ್ ದೇಶಕ್ಕಾಗಿ ಪ್ರಾಣ ಕೊಡಲು ಸಹ ಸಿದ್ಧರಾಗಿದ್ದರು. ಮೈದಾನದಲ್ಲಿ ರಕ್ತದ ವಾಂತಿಯಾಗುತ್ತಿತ್ತು ಆದರೆ ಯುವರಾಜ್ ಟ್ರೋಫಿ ಗೆಲ್ಲುವವರೆಗೆ ಕದಲಿರಲಿಲ್ಲ. ಆ ನಂತರ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಅನ್ನು ಸಹ ಸೋಲಿಸಿ ಕ್ರಿಕೆಟ್ ಆಡಲು ಮರಳಿದ್ದರು.
ಎಂಎಸ್ ಧೋನಿ
ಧೋನಿ... ಈ ಹೆಸರಿಗೆ ಹೊಸದಾಗಿ ಪರಿಚಯವೇ ಬೇಡ. ದಾಖಲೆಯ ಪುಸ್ತಕ ತೆರೆದರೆ ಧೋನಿ ಎಂಬ ದಿಗ್ಗಜನ ಹೆಸರು ನಾಯಕತ್ವದ ವಿಚಾರದಲ್ಲಿ ಮುಂದಿರುತ್ತದೆ. 3 ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಕ್ರಿಕೆಟಿಗನೆಂದರೆ ಅದು ಧೋನಿ. ಆದರೆ ಅವರು ಎಂದಿಗೂ ತಮ್ಮ ಬ್ಯಾಟಿಂಗ್ ಅನ್ನು ಪ್ರೋತ್ಸಾಹಿಸಿಕೊಳ್ಳಲಿಲ್ಲ. ರೋಹಿತ್-ಕೊಹ್ಲಿಯಂತಹ ಆಟಗಾರರನ್ನು ಸೊನ್ನೆಯಿಂದ ಹೀರೋ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದನ್ನೂ ಓದಿ: ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸುದೀಪ್
ಸುರೇಶ್ ರೈನಾ
ಒಂದು ಕಾಲದಲ್ಲಿ, ಮಧ್ಯಮ ಕ್ರಮಾಂಕದಲ್ಲಿ ಇಡೀ ತಂಡದ ಭಾರ ಹೊತ್ತಿದ್ದ ಹೆಸರೆಂದರೆ ಸುರೇಶ್ ರೈನಾ. ಕೆಲವೊಮ್ಮೆ ಬ್ಯಾಟಿಂಗ್, ಕೆಲವೊಮ್ಮೆ ಬೌಲಿಂಗ್ ಮತ್ತೂ ಕೆಲವೊಮ್ಮೆ ಫೀಲ್ಡಿಂಗ್... ಆಲ್‌ರಂಡರ್ ಪ್ರದರ್ಶನ ತೋರುತ್ತಿದ್ದ ರೈನಾ ಎದುರಾಳಿಗೆ ನಡುಕ ಹುಟ್ಟಿಸುತ್ತಿದ್ದರು. ದೊಡ್ಡ ದೊಡ್ಡ ಟೂರ್ನಿಗಳಲ್ಲಿಯೂ ಸಹ ಟೀಂ ಇಂಡಿಯಾ ಗೆಲುವಿನಲ್ಲಿ ರೈನಾ ಅಮೂಲ್ಯ ಕೊಡುಗೆ ನೀಡಿದ್ದಾರೆ. ನಿಸ್ವಾರ್ಥ ಕ್ರಿಕೆಟಿಗರ ಪಟ್ಟಿಯಲ್ಲಿ ರೈನಾ ಕೂಡ ಸೇರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ