ಯುವಿ ನಿವೃತ್ತಿ ಬಳಿಕ ಖಾಲಿಯಿದ್ದ ನಂ.4 ಸ್ಥಾನಕ್ಕೆ 20ರ ಹರೆಯದ ಈ ಸ್ಟಾರ್ ಬ್ಯಾಟ್ಸ್’ಮನ್ ಫಿಕ್ಸ್!
Number-4 Spot in Team India: 20 ವರ್ಷದ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ತಮ್ಮ ಬ್ಯಾಟಿಂಗ್ ಮೂಲಕ ವಿಧ್ವಂಸಕತೆಯನ್ನೇ ಸೃಷ್ಟಿಸುತ್ತಿದ್ದಾರೆ.
Number-4 Spot in Team India : ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡವು ನಂಬರ್-4 ರಲ್ಲಿ ತಂಡಕ್ಕೆ ಭದ್ರತೆ ಒದಗಿಸಬಲ್ಲ ಸ್ಪೋಟಕ ಬ್ಯಾಟ್ಸ್’ಮನ್ ಒಬ್ಬರನ್ನು ಹುಡುಕುತ್ತಿದೆ, ಆದರೆ ಈ ಸ್ಥಾನಕ್ಕೆ ಯಾರೂ ಕೂಡ ಹೊಂದಿಕೊಂಡಿರಲಿಲ್ಲ. ಆಲ್’ರೌಂಡರ್ ಯುವರಾಜ್ ಸಿಂಗ್ ನಿವೃತ್ತಿಯ ನಂತರ, ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ನಿಭಾಯಿಸಬಲ್ಲ ಯಾವೊಬ್ಬ ಕ್ರಿಕೆಟಿಗ ಕೂಡ ಭಾರತಕ್ಕೆ ಸಿಕ್ಕಿರಲಿಲ್ಲ. ಶ್ರೇಯಸ್ ಅಯ್ಯರ್ ಭರವಸೆ ಮೂಡಿಸಿದರೂ ಸಹ ಗಾಯದ ಕಾರಣದಿಂದ ಅವರು ದೀರ್ಘಕಾಲದವರೆಗೆ ಮೈದಾನದಿಂದ ದೂರ ಉಳಿಯುವ ಸ್ಥಿತಿ ಬಂದಿದೆ. ಆದರೆ ಈತ ಆ ಸಮಸ್ಯೆಗೆ ಪರಿಹಾರ ಸಿಕ್ಕೇಬಿಟ್ಟಿದೆ.
ಇದನ್ನೂ ಓದಿ: IND vs WI: ಈ ಆಟಗಾರನೇ ಭಾರತದ ಸೋಲಿಗೆ ಕಾರಣ: ಸಾರ್ವಜನಿಕ ಸ್ಥಳದಲ್ಲೇ ನಿಂದಿಸಿದ ಹಾರ್ದಿಕ್ ಪಾಂಡ್ಯ
20 ವರ್ಷದ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ತಮ್ಮ ಬ್ಯಾಟಿಂಗ್ ಮೂಲಕ ವಿಧ್ವಂಸಕತೆಯನ್ನೇ ಸೃಷ್ಟಿಸುತ್ತಿದ್ದಾರೆ. ಟ್ರಿನಿಡಾಡ್’ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲೂ ಅವರು ಟಾಪ್ ಸ್ಕೋರರ್ ಆಗಿದ್ದರು. ಇದೀಗ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದಾರೆ. 51 ರನ್ ಗಳಿಸಿ ಈ ಬಾರಿಯೂ ತಂಡದ ಅಗ್ರ ಸ್ಕೋರರ್ ಎನಿಸಿಕೊಂಡರು. ತಿಲಕ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಸೇರಿಸಿದರು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯುವರಾಜ್ ಸಿಂಗ್ ಗೆ ಪರ್ಯಾಯವಾಗಿ ತಿಲಕ್ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಯುವರಾಜ್ ಕೂಡ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ತಕ್ಷಣ ಶಾಟ್ ಹೊಡೆಯಲು ಯತ್ನಿಸುತ್ತಿದ್ದರು. ಕ್ರಿಕೆಟ್ ಅಭಿಮಾನಿಗಳನ್ನು ಅವರ ಆಟವನ್ನು ಸಖತ್ ಆಗಿ ರಂಜಿಸುತ್ತಿದ್ದರು. ಯುವಿ ಏಕಾಂಗಿಯಾಗಿ ಭಾರತ ಹಲವು ಪಂದ್ಯಗಳನ್ನು ಗೆಲ್ಲುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರೂ ಆಗಿದ್ದರು ಯುವರಾಜ್. ತಿಲಕ್’ಗೆ ಬಹಳ ದೂರ ಸಾಗಬೇಕಿದೆ. ಆದರೆ ಇದೇ ರೀತಿ ಪ್ರದರ್ಶನ ನೀಡಿದರೆ ಮುಂದಿನ ವರ್ಷ ಟಿ20 ವಿಶ್ವಕಪ್’ನಲ್ಲಿ ಆಡುವುದನ್ನು ಕಾಣಬಹುದು.
ಇದನ್ನೂ ಓದಿ: IND vs WI: ಭಾರತದ ಕಳಪೆ ಪ್ರದರ್ಶನಕ್ಕೆ ಕಳಪೆ ದಾಖಲೆ ಸೃಷ್ಟಿ: ಪೂರನ್ ದಾಳಿಗೆ ಟೀಂ ಇಂಡಿಯಾ ತತ್ತರ-Highlights ಇಲ್ಲಿದೆ
ಇಲ್ಲಿಯವರೆಗೆ ಪ್ರದರ್ಶನ…
ತಿಲಕ್ ವರ್ಮಾ ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಇದಕ್ಕೂ ಮುನ್ನ 9 ಪ್ರಥಮ ದರ್ಜೆ ಪಂದ್ಯಗಳಲ್ಲಿ ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 523 ರನ್ ಗಳಿಸಿದ್ದಾರೆ. ಲಿಸ್ಟ್ ಎ ನಲ್ಲಿ, ಅವರು 25 ಪಂದ್ಯಗಳಲ್ಲಿ 5 ಶತಕಗಳು ಮತ್ತು ಅರ್ಧ ಶತಕಗಳೊಂದಿಗೆ 1236 ರನ್ ಗಳಿಸಿದ್ದಾರೆ. ಇದಲ್ಲದೆ, ಈ ಪಂದ್ಯಕ್ಕೂ ಮುನ್ನ ಅವರು ಒಟ್ಟಾರೆ 48 T20 ಪಂದ್ಯಗಳಲ್ಲಿ 1457 ರನ್ ಗಳಿಸಿದ್ದಾರೆ. ಅದರಲ್ಲಿ ಅವರ ಸ್ಟ್ರೈಕ್ ರೇಟ್ 143.26 ಆಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ