Tokyo Olympics 2020: ಪದಕ ಗೆದ್ದ ಕ್ರೀಡಾಪಟುಗಳಿಗೆ ಕೋಟಿ ಕೋಟಿ, ಯಾರಿಗೆ ಎಷ್ಟು ಬಹುಮಾನ ಗೊತ್ತಾ..?
ಪದಕ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೋಟಿ ಕೋಟಿ ರೂ. ಬಹುಮಾನ ಹರಿದುಬಂದಿದೆ.
ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Tokyo Olympics 2020)ದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪದಕ ಗೆದ್ದಿರುವ ಭಾರತೀಯ ಕ್ರೀಡಾಪಟುಗಳಿಗೆ ಬಹುಮಾನಗಳ ಸುರಿಮಳೆಯೇ ಆಗಿದೆ.
ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ, ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ.ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಹಾಗೂ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಒಟ್ಟು 7 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 47ನೇ ಸ್ಥಾನ ಪಡೆದುಕೊಂಡಿತ್ತು. ಪದಕ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೋಟಿ ಕೋಟಿ ರೂ. ಬಹುಮಾನ ಹರಿದುಬಂದಿದೆ.
1) ನೀರಜ್ ಚೋಪ್ರಾ (ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ)
ಟೋಕಿಯೊ ಒಲಂಪಿಕ್ಸ್ ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನಕ್ಕೆ ಮುತ್ತಿಕ್ಕಿದ್ದರು. ಇವರ ಸಾಧನೆಗೆ ಕೋಟಿ ಕೋಟಿ ರೂ. ಬಹುಮಾನ ಹರಿದುಬಂದಿದೆ.
ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್: 6 ಕೋಟಿ ರೂ. ಮತ್ತು ನೀರಜ್ ಅವರನ್ನು ಮುಂಬರುವ ಅಥ್ಲೆಟಿಕ್ಸ್ ಸೆಂಟರ್ ಫಾರ್ ಎಕ್ಸಲೆನ್ಸ್ ಪಂಚಕುಲದ ಮುಖ್ಯಸ್ಥರನ್ನಾಗಿ ಮಾಡಲಾಗುವುದು.
ಪಂಜಾಬ್ ಸಿಎಂ ಅಮರಿಂದರ್ ಸಿಂಗ್: 2 ಕೋಟಿ ರೂ.
ಬೈಜು’ಸ್: 2 ಕೋಟಿ ರೂ.
ಬಿಸಿಸಿಐ: 1 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್(CSK): 1 ಕೋಟಿ ರೂ. ಮತ್ತು 8758 ನಂಬರ್ ನ ವಿಶೇಷ ಜರ್ಸಿ
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 75 ಲಕ್ಷ ರೂ.
ಇಂಡಿಗೋ ಏರ್ಲೈನ್ಸ್: 1 ವರ್ಷ ಅನಿಯಮಿತ ಉಚಿತ ಪ್ರಯಾಣ
ಗುರುಗ್ರಾಮದ ಎಲಾನ್ ಗ್ರೂಪ್: 25 ಲಕ್ಷ ರೂ.
2) ಪಿ.ವಿ.ಸಿಂಧು (ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ)
ಬೈಜು’ಸ್: 1 ಕೋಟಿ ರೂ.
ಆಂಧ್ರಪ್ರದೇಶ ರಾಜ್ಯ ಸರ್ಕಾರ: 30 ಲಕ್ಷ ರೂ.
ಬಿಸಿಸಿಐ: 25 ಲಕ್ಷ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 25 ಲಕ್ಷ ರೂ.
3) ಲವ್ಲಿನಾ ಬೋರ್ಗೊಹೈನ್ (ಮಹಿಳಾ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ)
ಬೈಜು’ಸ್: 1 ಕೋಟಿ ರೂ.
ಬಿಸಿಸಿಐ: 25 ಲಕ್ಷ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 25 ಲಕ್ಷ ರೂ.
ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂ.
4) ಮೀರಾಬಾಯಿ ಚಾನು (ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ)
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್: 2 ಕೋಟಿ ರೂ.
ಮನಿಪುರ ಸಿಎಂ: 1 ಕೋಟಿ ರೂ. ಮತ್ತು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ನೇಮಿಸಲಾಗುವುದು.
ಬೈಜು’ಸ್: 1 ಕೋಟಿ ರೂ.
ಬಿಸಿಸಿಐ: 50 ಲಕ್ಷ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 40 ಲಕ್ಷ ರೂ.
5) ಭಾರತ ಪುರುಷರ ಹಾಕಿ ತಂಡ (ಕಂಚಿನ ಪದಕ)
ಹರಿಯಾಣ ಸಿಎಂ: ತಂಡದ ಆಟಗಾರರಾದ ಸುರೇಂದ್ರ ಕುಮಾರ್ ಮತ್ತು ಸುಮಿತ್ ಅವರಿಗೆ ತಲಾ 2.5 ಕೋಟಿ ರೂ. ಸರ್ಕಾರಿ ನೌಕರಿಯ ಜೊತೆಗೆ ರಿಯಾಯತಿ ದರದಲ್ಲಿ ಪ್ಲಾಟ್ ಕೊಡುಗೆ
ಬಿಸಿಸಿಐ: ಇಡೀ ತಂಡಕ್ಕೆ 1.25 ಕೋಟಿ ರೂ.
ಬೈಜು’ಸ್: 1 ಕೋಟಿ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 25 ಲಕ್ಷ ರೂ.
6) ರವಿಕುಮಾರ್ ದಹಿಯಾ (ರಸ್ಲಿಂಗ್‌ನಲ್ಲಿ ಬೆಳ್ಳಿ ಪದಕ)
ಹರಿಯಾಣ ಸಿಎಂ: 4 ಕೋಟಿ ರೂ. ಜೊತೆಗೆ ಸರ್ಕಾರಿ ನೌಕರಿ. ರಿಯಾಯತಿ ದರದಲ್ಲಿ ಪ್ಲಾಟ್ ಕೊಡುಗೆ
ಬೈಜು’ಸ್: 1 ಕೋಟಿ ರೂ.
ಬಿಸಿಸಿಐ: 50 ಲಕ್ಷ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 40 ಲಕ್ಷ ರೂ.
7) ಬಜರಂಗ್ ಪುನಿಯಾ (ಕುಸ್ತಿಯಲ್ಲಿ ಕಂಚಿನ ಪದಕ)
ಹರಿಯಾಣ ಸಿಎಂ: 2.5 ಕೋಟಿ ರೂ. ಜೊತೆಗೆ ಸರ್ಕಾರಿ ನೌಕರಿ. ರಿಯಾಯತಿ ದರದಲ್ಲಿ ಪ್ಲಾಟ್ ಕೊಡುಗೆ
ಬೈಜು’ಸ್: 1 ಕೋಟಿ ರೂ.
ಬಿಸಿಸಿಐ: 25 ಲಕ್ಷ ರೂ.
ಭಾರತೀಯ ಒಲಿಂಪಿಕ್ ಸಂಸ್ಥೆ(IOA): 25 ಲಕ್ಷ ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ