ಮಣಿಪುರ್: Tokyo Olympics Update - ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics 2020) ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಮೀರಾಬಾಯಿ ಚಾನು (Mirabai Chanu) ಅವರನ್ನು ಮಣಿಪುರ ಸರ್ಕಾರ (Manipur Government) ಹೆಚ್ಚುವರಿ ಎಸ್‌ಪಿ (Additional SP) ಆಗಿ ನೇಮಕ ಮಾಡಿದೆ. ಮೀರಾಬಾಯಿ ಚಾನು ಅವರನ್ನು ಹೆಚ್ಚುವರಿ ಎಸ್‌ಪಿ (Sports) ಆಗಿ ಮಣಿಪುರ ಪೊಲೀಸರಲ್ಲಿ ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೀರಾಬಾಯಿಗೆ ರಾಜ್ಯ ಸರ್ಕಾರ ಈಗಾಗಲೇ 1 ಕೋಟಿ ರೂ.ಗಳ ನಗದು ಪ್ರಶಸ್ತಿಯನ್ನು ಘೋಷಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಚೀನಾದ ವೇಟ್‌ಲಿಫ್ಟರ್ ಗೆ ಡೋಪಿಂಗ್ ಕಂಟಕ: ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಾಧ್ಯತೆ..?


COMMERCIAL BREAK
SCROLL TO CONTINUE READING

ಮೀರಾಬಾಯಿ ಚಾನು ಭಾರತದ 21 ವರ್ಷಗಳ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಪದಕದ ಬರವನ್ನು ಅಂತ್ಯಗೊಳಿಸಿದ್ದಾರೆ  ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಟೋಕಿಯೋ ಒಲಿಂಪಿಕ್ಸ್ (Tokyo Olympics 2020) ನಲ್ಲಿ ಭಾರತದ ಖಾತೆಯನ್ನು ತೆರೆದಿದ್ದಾರೆ. 49 ಕೆಜಿ ವಿಭಾಗದಲ್ಲಿ ಈ ಪದಕವನ್ನು ಪಡೆದುಕೊಂಡಿದ್ದಾರೆ.  ಈ ಸ್ಪರ್ಧೆಯಲ್ಲಿ ಚೀನಾ ವೇಟ್ ಲಿಫ್ಟರ್ ಹೌ ಜಿಹುಯಿ ಒಟ್ಟು 210 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದಲ್ಲದೆ. ಆದರೆ, ಪ್ರಸ್ತುತ ಚೀನಾ ಆಟಗಾರ್ತಿಗೆ ಡೋಪಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂಬ ಸುದ್ದಿಗಳು ಪ್ರಕಟಗೊಂಡಿದ್ದು. ನಿಯಮಗಳ ಪ್ರಕಾರ ಒಂದು ವೇಳೆ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ, ಭಾರತದ ಬೆಳ್ಳಿ ಬೆಡಗಿಗೆ ಮೀರಾಬಾಯಿ ಚಾನುಗೆ  ಚಿನ್ನದ ಬೆಡಗಿಯಾಗುವ ಅವಕಾಶ ಸಿಗಲಿದೆ. 


Tokyo Olympics 2020: ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಘೋಷಿಸಿದ ಡೊಮಿನೊಸ್


ಮಿರಾಬಾಯಿ ಚಾನೂಗೂ ಮೊದಲು, ಅನುಭವಿ ಕರ್ಣಂ ಮಲ್ಲೇಶ್ವರಿ 2000 ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅದರ ನಂತರ, 21 ವರ್ಷಗಳ ಕಾಲ ಭಾರತವು ಈ ಸ್ಪರ್ಧೆಯಲ್ಲಿ ಪದಕಕ್ಕಾಗಿ ಹಂಬಲಿಸಿತ್ತು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡ ಮೀರಾಬಾಯಿ ಚಾನುಗೆ ಮಣಿಪುರದ ಮುಖ್ಯಮಂತ್ರಿ N.ಬಿರೆನ್ ಸಿಂಗ್ (Manipur CM N. Biren Singh), ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಒಂದು ಕೋಟಿ ರೂ. ನಗದು ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದರು.


ಇದನ್ನೂ ಓದಿ-Tokyo Olympics 2020: ಖಾತೆ ತೆರೆದ ಭಾರತ, ಮೀರಾಬಾಯಿ ಚಾನುಗೆ ಒಲಿದ ಬೆಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ