6,6,6,6,6,6,6... 18 ಸಿಕ್ಸರ್, 38 ಬೌಂಡರಿ! ಟಿ20 ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್ ನೆಚ್ಚಿನ ಕ್ರಿಕೆಟಿಗ! ಯಾರವರು?
Major League Cricket 2024: ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್ʼಗಳ ಜಯ ಸಾಧಿಸಿತು.
Major League Cricket 2024: ಮೇಜರ್ ಲೀಗ್ ಕ್ರಿಕೆಟ್ 2024 ರ ಫೈನಲ್ ಹಂತಕ್ಕೆ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಎಂಟ್ರಿ ಪಡೆದಿವೆ. ಇನ್ನು ಸೋಮವಾರ ಡಲ್ಲಾಸ್ʼನಲ್ಲಿ ನಡೆಯಲಿರುವ ಫೈನಲ್ ಫೈಟ್ʼನಲ್ಲಿ ಈ ತಂಡಗಳು ಸೆಣಸಾಡಲಿವೆ.
ಇದೇ ವೇಳೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್ʼಗಳ ಜಯ ಸಾಧಿಸಿತು. ಆ ತಂಡದ ಆಟಗಾರರಾದ ರಚಿನ್ ರವೀಂದ್ರ ಮತ್ತು ಟ್ರಾವಿಸ್ ಹೆಡ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಹೆಚ್ಚು ಗಮನ ಸೆಳೆದಿದ್ದರು.
ಇದನ್ನೂ ಓದಿ: ಚೊಚ್ಚಲ ತಾಯ್ತನದ ಮಧ್ಯೆ ಮಹತ್ವದ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ..!
ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ 19 ಓವರ್ ಗಳಲ್ಲಿ 145 ರನ್ ಗಳಿಗೆ ಸೀಮಿತವಾಯಿತು. ಈ ಗುರಿಯನ್ನು ವಾಷಿಂಗ್ಟನ್ ಫ್ರೀಡಂ 15.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ವೇಳೆ ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ 10 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದು, ಸ್ಟ್ರೈಕ್ ರೇಟ್ 175 ಆಗಿದೆ.
ಮೇಜರ್ ಲೀಗ್ ಕ್ರಿಕೆಟ್ʼನ ಈ ಋತುವಿನಲ್ಲಿ ಟ್ರಾವಿಸ್ ಹೆಡ್ ಇಲ್ಲಿಯವರೆಗೆ ಅದ್ಭುತವಾಗಿ ಆಡಿದ್ದಾರೆ. ಸತತ 5 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಟಿ20 ಕ್ರಿಕೆಟ್ʼನಲ್ಲಿ ಸತತ 5 ಅರ್ಧಶತಕ ಬಾರಿಸಿದ 9ನೇ ಆಟಗಾರ ಎನಿಸಿಕೊಂಡಿದ್ದಾರೆ. ಟ್ರಾವಿಸ್ ಹೆಡ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಆಟಗಾರ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ʼನಲ್ಲಿ ಸತತ 5 ಅರ್ಧಶತಕ ಗಳಿಸಿದ್ದರು. ಈ ಮಧ್ಯೆ, ರಿಯಾನ್ ಪರಾಗ್ ಸತತ 7 ಅರ್ಧಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟ್ರಾವಿಸ್ ಹೆಡ್ ಐಪಿಎಲ್ʼನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. 2024 ರ ಸೀಸನ್ʼನಲ್ಲಿ ಪ್ರಬಲ ಪ್ರದರ್ಶನ ನೀಡಿದ್ದ ಅವರು, ತಂಡವನ್ನು ಫೈನಲ್ʼಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ ಈ ಬಾರಿಯ ಐಪಿಎಲ್ ಋತುವಿನಲ್ಲಿ 64 ಬೌಂಡರಿ ಹಾಗೂ 32 ಸಿಕ್ಸರ್ ಬಾರಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ