ನಿದಹಾಸ್ ಟ್ವೆಂಟಿ ಟ್ರೋಪಿ: ಸಿಂಹಳಿಯರನ್ನೇ ಅವಕ್ಕಾಗಿಸಿದ ಬಾಂಗ್ಲಾ ಹುಲಿಗಳು
ಕೊಲಂಬೊ: ಬಾಂಗ್ಲಾದೇಶವು ಶ್ರೀಲಂಕಾ ನೀಡಿದ 215 ರನ್ ಗಳ ಗುರಿಯನ್ನು ಸುಲಭವಾಗಿ ತಲುಪುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.ಆ ಮೂಲಕ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಈ ಮೊತ್ತವನ್ನು ತಲುಪಿ ಗೆದ್ದ ನಾಲ್ಕನೇ ತಂಡವೆನ್ನುವ ಕೀರ್ತಿಗೆ ಬಾಂಗ್ಲಾದೇಶವು ಪಾತ್ರವಾಯಿತು.
ಶ್ರೀಲಂಕಾ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು.ಲಂಕಾ ಪರ ಕುಸಾಲ್ ಪೆರೇರಾ(74) ಕುಸಾಲ್ ಮೆಂಡಿಸ್ (57) ಉತ್ತಮ ಪ್ರದರ್ಶನ ನೀಡಿದರು.
215 ರನ್ ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ತಂಡವು ತಮಿಮ್ ಇಕ್ಬಾಲ್(47) ಲಿತೊನ್ ದಾಸ್ (41) ಮುಶ್ಫಿಕರ್ ರಹಿಮ್ (ಅಜೇಯ 72) ಉತ್ತಮ ಪ್ರದರ್ಶನದಿಂದ 19.4 ಓವರ್ ಗಳಲ್ಲಿ ಗುರಿಯನ್ನು ತಲುಪಿತು.