Muttiah Muralitharan Unbreakable World Records: ಮುತ್ತಯ್ಯ ಮುರಳೀಧರನ್... ಈ ಮಾಂತ್ರಿಕ ಬೌಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವವರೆಗೂ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದವರು. ಜೊತೆಗೆ ಕೆಲವು ದಾಖಲೆಗಳನ್ನು ನಿರ್ಮಿಸಿ ಅಚ್ಚರಿಗೀಡು ಮಾಡಿದವರು. ನಾವಿಂದು ಈ ವರದಿಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ 5 ದಾಖಲೆಗಳ ಬಗ್ಗೆ ಮಾತನಾಡಲಿದ್ದೇವೆ. ಈ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂದನಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಿವೀಲ್ ಆಯ್ತು ಟಾಕ್ಸಿಕ್ ಚಿತ್ರದ ಯಶ್ ಕ್ಯಾರೆಕ್ಟರ್?; ʼವಕೀಲ್ ಸಾಬ್ʼ ಅವತಾರದಲ್ಲಿ ರಾಕಿಭಾಯ್!


ಟೆಸ್ಟ್‌ನಲ್ಲಿ ವಿಶ್ವದಾಖಲೆ:
ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, ಈ ಸ್ವರೂಪದಲ್ಲಿ 800 ವಿಕೆಟ್‌ಗಳನ್ನು ಮುಟ್ಟಿದ ವಿಶ್ವದ ಏಕೈಕ ಬೌಲರ್ ಮುರಳೀಧರನ್. ಅವರ ನಂತರ ಇರುವ ಎರಡನೇ ನಂಬರ್ ಬೌಲರ್ ನಡುವೆ 92 ವಿಕೆಟ್‌ಗಳ ಅಂತರವಿದೆ.


60,000 ಕ್ಕೂ ಹೆಚ್ಚು ಎಸೆತ:
ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ಗಳು ಮಾತ್ರವಲ್ಲದೆ ಎಸೆತಗಳಿಂದಲೂ ವಿಶ್ವ ದಾಖಲೆಗಳನ್ನು ಕಾಯ್ದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್. ಈ ಸ್ಪಿನ್ ರಾಜ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 63132 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಇದು ಎರಡನೇ ನಂಬರ್ ಬೌಲರ್‌ಗಿಂತ ಸುಮಾರು 8000 ಎಸೆತಗಳು ಹೆಚ್ಚು.


324 ಪಂದ್ಯ-500 ಏಕದಿನ ವಿಕೆಟ್‌:
ಏಕದಿನ ಮಾದರಿಯಲ್ಲಿ ಕೇವಲ ಇಬ್ಬರು ಬೌಲರ್‌ಗಳು 500 ವಿಕೆಟ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಮೊದಲ ಹೆಸರು ವಾಸಿಂ ಅಕ್ರಮ್ ಮತ್ತು ಎರಡನೇ ಹೆಸರು ಮುತ್ತಯ್ಯ ಮುರಳೀಧರನ್. ಈ ಇಬ್ಬರು ಶ್ರೇಷ್ಠರ ಪೈಕಿ ಮುರಳೀಧರನ್ ಅತ್ಯಂತ ವೇಗವಾಗಿ 500 ವಿಕೆಟ್‌ಗಳನ್ನು ಪೂರೈಸಿದ ಬೌಲರ್. ಏಕದಿನದಲ್ಲಿ ಅತಿ ಹೆಚ್ಚು 534 ವಿಕೆಟ್ ಪಡೆದ ಬೌಲರ್ ಮುರಳೀಧರನ್. ಅಲ್ಲದೆ, 324 ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಪೂರೈಸುವ ಮೂಲಕ, ಈ ಸ್ವರೂಪದಲ್ಲಿ ವೇಗವಾಗಿ 500 ವಿಕೆಟ್‌ಗಳನ್ನು ಪೂರೈಸಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ


ಅತಿ ಹೆಚ್ಚು 5 ವಿಕೆಟ್:
ಮುರಳೀಧರನ್ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 5 ವಿಕೆಟ್ ಪಡೆದವರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಈ ಸ್ಪಿನ್ ರಾಜ ಅಂತರಾಷ್ಟ್ರೀಯ ಪಂದ್ಯ ಅಥವಾ ಇನ್ನಿಂಗ್ಸ್‌ನಲ್ಲಿ 77 ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಲೆಜೆಂಡರಿ ಬೌಲರ್ ಸರ್ ರಿಚರ್ಡ್ ಹ್ಯಾಡ್ಲಿ ಅವರು 41 ಬಾರಿ ಈ ಅದ್ಭುತವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ:  ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕ


ದಾಖಲೆಯ 1347 ವಿಕೆಟ್:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು 1000 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರಳೀಧರನ್ ಮತ್ತು ಶೇನ್ ವಾರ್ನ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದರಲ್ಲೂ ಮುರಳೀಧರನ್ ಗರಿಷ್ಠ 1347 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದು, 495 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಇಷ್ಟು ವಿಕೆಟ್ ಪಡೆದಿದ್ದಾರೆ. ವಾರ್ನ್ ಅವರ ಹೆಸರಿನಲ್ಲಿ 1001 ಅಂತಾರಾಷ್ಟ್ರೀಯ ವಿಕೆಟ್‌ಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews