U19 World Cup: ಇಂದಿನಿಂದ U- 19 ವಿಶ್ವಕಪ್, ಶ್ರೀಲಂಕಾದೊಂದಿಗೆ ಭಾರತದ ಮೊದಲ ಪಂದ್ಯ
ICC U19 Cricket World Cup: 26 ದಿನಗಳ ವಿಶ್ವಕಪ್‌ನ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ.
ನವದೆಹಲಿ: ಐಸಿಸಿ ಅಂಡರ್ -19 ಕ್ರಿಕೆಟ್ ವಿಶ್ವಕಪ್ (ICC U19 Cricket World Cup) ಗಾಗಿ ಕುತೂಹಲದಿಂದ ಕಾಯುತ್ತಿದ್ದವರಿಗೆ ಬಹುನಿರೀಕ್ಷಿತ ಪಂದ್ಯಾವಳಿ ಇಂದು (ಜನವರಿ 17) ಪ್ರಾರಂಭವಾಗುತ್ತದೆ. ಈ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಲಾಗುತ್ತಿದೆ. ಇದರಲ್ಲಿ 16 ದೇಶಗಳು ಭಾಗವಹಿಸುತ್ತಿವೆ. ಪ್ರಿಯಮ್ ಗರ್ಗ್ ನಾಯಕತ್ವದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಭಾರತ ತಂಡ ಕೆಳಗಿಳಿಯುತ್ತಿದೆ.
ಇದು ಐಸಿಸಿ ಅಂಡರ್ 19 ವಿಶ್ವಕಪ್ 2020 ರ 13 ನೇ ಆವೃತ್ತಿಯಾಗಿದೆ. ಇದರ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವನ್ನು 'ಎ' ಗುಂಪಿನಲ್ಲಿ ಇರಿಸಲಾಗಿದೆ. ಈ ಗುಂಪಿನಲ್ಲಿ ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಜಪಾನ್ ತಂಡಗಳಿವೆ. ಇನ್ನು 'ಬಿ' ಗುಂಪು ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ನೈಜೀರಿಯಾದ ತಂಡಗಳನ್ನು ಒಳಗೊಂಡಿದೆ. 'ಸಿ' ಗುಂಪಿನಲ್ಲಿ ಪಾಕಿಸ್ತಾನವು ಬಾಂಗ್ಲಾದೇಶ, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆಯಿಂದ ಸವಾಲನ್ನು ಎದುರಿಸಲಿದೆ. ಗುಂಪು 'ಡಿ' ಅಫ್ಘಾನಿಸ್ತಾನ, ಕೆನಡಾ ಮತ್ತು ಯುಎಇ ತಂಡಗಳನ್ನು ಆತಿಥೇಯ ದಕ್ಷಿಣ ಆಫ್ರಿಕಾದೊಂದಿಗೆ ಒಳಗೊಂಡಿದೆ. ಪ್ರತಿ ಗುಂಪಿನ ಟಾಪ್ -2 ತಂಡಗಳು ಸೂಪರ್ ಲೀಗ್ ಹಂತಕ್ಕೆ ಪ್ರವೇಶಿಸಲಿವೆ.
ಭಾರತೀಯ ತಂಡ (ಯು 19 ಟೀಮ್ ಇಂಡಿಯಾ) ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ನಲ್ಲಿ ಸ್ಥಾನ ಪಡೆದಿದೆ. ಈ ತಂಡದ ನಾಯಕ ಪ್ರಿಯಮ್ ಗರ್ಗ್, ಇದುವರೆಗೆ ಭಾರತದ ಯುವ ತಂಡಕ್ಕೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಧೂಪ್ ಚಂದ್ ಜುರೆಲ್ ಅವರನ್ನು ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಥವಾ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಕೂಡ ಮುಂಬೈನಲ್ಲಿ ನಡೆದ ಈ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ದ್ರಾವಿಡ್ ಅಂಡರ್ 19 ತಂಡದ ಕೋಚ್ ಆಗಿದ್ದಾರೆ. ಈ ಕಾರಣದಿಂದಾಗಿ, ಯಾವ ಆಟಗಾರನ ವಿಶೇಷತೆ ಏನು ಎಂದು ಅವರಿಗೆ ತಿಳಿದಿದೆ.
16 ತಂಡಗಳ ನಡುವೆ ಒಟ್ಟು 48 ಪಂದ್ಯ:
ಪಂದ್ಯಾವಳಿಯನ್ನು ರೌಂಡ್ ರಾಬಿನ್ ಮತ್ತು ನಾಕೌಟ್ ಸ್ವರೂಪಗಳಲ್ಲಿ ಆಡಲಾಗುವುದು. 16 ತಂಡಗಳ ನಡುವೆ ಒಟ್ಟು 48 ಪಂದ್ಯಗಳು ನಡೆಯಲಿವೆ. 26 ದಿನಗಳ ವಿಶ್ವಕಪ್‌ನ ಮೊದಲ ಪಂದ್ಯವು ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಭಾರತ ತಂಡ ಭಾನುವಾರ (ಜನವರಿ 19) ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯ ಫೆಬ್ರವರಿ 9 ರಂದು ನಡೆಯಲಿದೆ.
ದಿನಾಂಕ | ವಿರುದ್ಧ | ಸ್ಥಳ |
19 ಜನವರಿ | ಶ್ರೀಲಂಕಾ | ಬ್ಲೂಮ್‌ಫಾಂಟೈನ್ |
21 ಜನವರಿ | ಜಪಾನ್ | ಬ್ಲೂಮ್‌ಫಾಂಟೈನ್ |
24 ಜನವರಿ | ನ್ಯೂಜಿಲೆಂಡ್ | ಬ್ಲೂಮ್‌ಫಾಂಟೈನ್ |
4 ಬಾರಿ ಚಾಂಪಿಯನ್ ಭಾರತ:
19 ವರ್ಷದೊಳಗಿನ ಕ್ರಿಕೆಟ್‌ನ ವಿಶ್ವಕಪ್ 13 ನೇ ಆವೃತ್ತಿ ನಡೆಯುತ್ತಿದೆ. ಕಳೆದ 12 (2000, 2008, 2012, 2018) ರಲ್ಲಿ ನಾಲ್ಕು ಬಾರಿ ಭಾರತ ತಂಡ ಈ ಪಂದ್ಯಾವಳಿಯನ್ನು ಗೆದ್ದಿದೆ. ಭಾರತದ ನಂತರ, ಆಸ್ಟ್ರೇಲಿಯಾ ಪಂದ್ಯಾವಳಿಯಲ್ಲಿ ಹೆಚ್ಚು ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡ ಅಂಡರ್ -19 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದಿದೆ. ಪಾಕಿಸ್ತಾನ ಎರಡು ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಈ ಪಂದ್ಯಾವಳಿಯನ್ನು ಒಮ್ಮೆ ಗೆದ್ದಿವೆ.
19 ವರ್ಷದೊಳಗಿನವರ ತಂಡ: ಪ್ರಿಯಮ್ ಗರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾನ್ಶ್ ಸಕ್ಸೇನಾ, ಶಶ್ವತ್ ರಾವತ್, ದಿವ್ಯಾನ್ಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಶ್ನಾಯ್, ಆಕಾಶ್ ಅನ್ಕಾಗ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾಧರ್ ಪಾಟೀಲ್.