ನವದೆಹಲಿ: 19 ವರ್ಷ ವಯಸ್ಸಿನೊಳಗಿನ ಕಿರಿಯರ ವಿಶ್ವಕಪ್ ನಲ್ಲಿ  ಭಾರತ ತಂಡವು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 203 ರನ್ ಅಂತರದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸುವುದರ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.


COMMERCIAL BREAK
SCROLL TO CONTINUE READING

ಭಾರತ ತಂಡವು ಮೊದಲು ಬ್ಯಾಟಿಂಗ್ ಗೆ ಇಳಿದು ಶುಬಮನ್ ಗಿಲ್ ರವರ ಅಜೇಯ (102) ಶತಕ, ಹಾಗೂ ಕಾರ್ಲಾ 47, ಶಾ 41 ರನ್ ಗಳ ನೆರವಿನೊಂದಿಗೆ 272ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ್ ತಂಡವು ಭಾರತದ ಇಶಾನ್ ಪೋರೆಲ್ ರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ತತ್ತರಿಸಿ 29.2 ಓವರ್ ಗಳಲ್ಲಿ 69 ರನ್ ಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಕಿರಿಯರ್ ವಿಶ್ವಕಪ್  ಫೈನಲ್ ಗೆ ಸುಲಭವಾಗಿ ಲಗ್ಗೆ ಇಟ್ಟಿದೆ. ಅಲ್ಲದೆ ಅಂಡರ್ -19 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡವು ಆರು ಬಾರಿಗೆ ತಲುಪಿದ ತಂಡ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಐದು ಬಾರಿ ತಲುಪಿದ್ದವು. 


ಸದ್ಯ ಪಾಕಿಸ್ತಾನದ ವಿರುದ್ದ ಈ ಸಾಧಿಸಿರುವ ಈ ಗೆಲುವು ಎರಡನೇಯ ಅತಿ ದೊಡ್ಡ ಅಂತರದ ಗೆಲುವು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು 2006 ರಲ್ಲಿ ಭಾರತ ತಂಡವು ಇಂಗ್ಲೆಂಡ್ ನ್ನು  234 ರನ್ ಗಳ  ಅಂತರದಿಂದ ಸೋಲಿಸಿತ್ತು.