ಎಂ.ಎಸ್.ಧೋನಿ ದಂತಕತೆ, ರಿಷಬ್ ಪಂತ್ ರನ್ನು ಅವರಿಗೆ ಹೋಲಿಸುವುದು ತರವಲ್ಲ - ಬೌಲಿಂಗ್ ಕೋಚ್
ಎಂ.ಎಸ್ ಧೋನಿ ನಾಯಕತ್ವವನ್ನು ಕಳಚಿರಬಹುದು ಆದರೆ ಇಂದಿಗೂ ಕೂಡ ಕೊಹ್ಲಿಯಂತ ಆಟಗಾರರಿಗೆ ಹಿಡಿದು ಎಲ್ಲರಿಗೂ ಅವರು ಮಾದರಿ. ಕೇವಲ ವಿಕೆಟ್ ಕೀಪರ್ ಆಗಿ ಅಲ್ಲದೆ ನಾಯಕನಾಗಿ ಕೂಡ ಅವರ ಪ್ರಭಾವ ತಂಡದ ಮೇಲೆ ಸಾಕಷ್ಟು ಇದೆ.
ನವದೆಹಲಿ: ಎಂ.ಎಸ್ ಧೋನಿ ನಾಯಕತ್ವವನ್ನು ಕಳಚಿರಬಹುದು ಆದರೆ ಇಂದಿಗೂ ಕೂಡ ಕೊಹ್ಲಿಯಂತ ಆಟಗಾರರಿಗೆ ಹಿಡಿದು ಎಲ್ಲರಿಗೂ ಅವರು ಮಾದರಿ. ಕೇವಲ ವಿಕೆಟ್ ಕೀಪರ್ ಆಗಿ ಅಲ್ಲದೆ ನಾಯಕನಾಗಿ ಕೂಡ ಅವರ ಪ್ರಭಾವ ತಂಡದ ಮೇಲೆ ಸಾಕಷ್ಟು ಇದೆ.
ಈಗ ಇದೇ ಅಭಿಪ್ರಾಯವನ್ನು ಬೌಲಿಂಗ್ ಕೋಚ್ ಭರತ್ ಅರುಣ್ ವ್ಯಕ್ತಪಡಿಸುತ್ತಾ ಎಂ.ಎಸ್ ಧೋನಿ ದಂತಕತೆ,ಅವರನ್ನು ರಿಷಬ್ ಪಂತ್ ಅವರಿಗೆ ಹೋಲಿಸುವುದು ತರವಲ್ಲ ಎಂದು ಹೇಳಿದ್ದಾರೆ. "ಪಂತ್ ರನ್ನು ಧೋನಿಯವರೊಂದಿಗೆ ಹೋಲಿಕೆ ಮಾಡುವುದು ತರವಲ್ಲ, ಧೋನಿಯವರದ್ದು ಉತ್ತುಂಗದ ಸ್ಥಾನ,ಅವರೊಬ್ಬ ದಂತಕತೆ,ಸ್ಟಂಪ್ ನ ಹಿಂದುಗಡೆ ಅವರ ಕಾರ್ಯ ನಿಜಕ್ಕೂ ಅದ್ಬುತ ಎಂದು ಭರತ್ ಅರುಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಧೋನಿಯವರ ಪ್ರಭಾವ ತಂಡದ ಮೇಲೆ ಹೆಚ್ಚಿದೆ,ನಾವು ಭಿನ್ನವಾದ ಹೊಂದಾಣಿಕೆಗಳನ್ನು ಪ್ರಯತ್ನಿಸುತ್ತಿದ್ದೇವೆ ಆದರೆ ಇವುಗಳೇ ವಿಶ್ವಕಪ್ ತಂಡದಲ್ಲಿ ಇರುತ್ತವೆ ಎಂದು ಹೇಳಲಿಕ್ಕೆ ಆಗುವುದಿಲ್ಲ.ಈ ವಿಚಾರವಾಗಿ ನಾವು ತುಂಬಾ ಎಚ್ಚರದಿಂದಿದ್ದೇವೆ ಎಂದು ಹೇಳಿದರು.