Women’s Premier League 2023: ಮಹಿಳೆಯರ ಪ್ರೀಮಿಯರ್ ಲೀಗ್ (WPL) ನ 17 ನೇ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದಿದೆ. ಕೊನೆಯ ಓವರ್‌’ನಲ್ಲಿ ಈ ಪಂದ್ಯದ ಫಲಿತಾಂಶ ಹೊರಬಿದ್ದಿದೆ. ಆದ್ರೆ ಈ ಪಂದ್ಯದಲ್ಲಿ ಯುಪಿ ತಂಡ ಗೆಲ್ಲುತ್ತಿದ್ದಂತೆ ಎರಡು ತಂಡಗಳು ಮಹಿಳಾ ಪ್ರೀಮಿಯರ್ ಲೀಗ್‌’ನಿಂದ ಹೊರಬಿದ್ದಿವೆ. ಈ ಲೀಗ್‌’ನಲ್ಲಿ ಒಟ್ಟು 5 ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Good luck: ಮನೆಯಿಂದ ಹೊರಡುವಾಗ ಈ ಕಾಲನ್ನು ಮೊದಲಿಟ್ಟರೆ ಶುಭ! ಕೈಗೊಂಡ ಪ್ರತೀ ಕಾರ್ಯದಲ್ಲಿ ಯಶಸ್ಸು


ಸೋಮವಾರ ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌’ನ ಕೊನೆಯ ಓವರ್‌’ನವರೆಗೂ ನಡೆದ ರೋಚಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಂಡಿದೆ.


ಆದರೆ ಯುಪಿ ವಾರಿಯರ್ಸ್ ಗೆಲುವು ಸಾಧಿಸುತ್ತಿದ್ದಂತೆ ಗುಜರಾತ್ ಜೈಂಟ್ಸ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪಂದ್ಯಾವಳಿಯಿಂದ ಹೊರಬಿದ್ದಿದೆ.


ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್ ಆರು ವಿಕೆಟ್‌ ನಷ್ಟಕ್ಕೆ 178 ರನ್ ಗಳಿಸಿತು. ಯುಪಿ ವಾರಿಯರ್ಸ್ ಒಂದು ಎಸೆತ ಬಾಕಿ ಇರುವಂತೆಯೇ ಏಳು ವಿಕೆಟ್‌ಗೆ 181 ರನ್ ಗಳಿಸಿ ಜಯ ಸಾಧಿಸಿತು. ಯುಪಿ ವಾರಿಯರ್ಸ್ ಪರ ಗ್ರೇಸ್ ಹ್ಯಾರಿಸ್ ಗರಿಷ್ಠ 72 ರನ್ ಗಳಿಸಿದರು. ತಮ್ಮ 41 ಎಸೆತಗಳ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.


ಪ್ಲೇ ಆಫ್‌ನಲ್ಲಿ ಈಗ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಇವೆ.


ಇದನ್ನೂ ಓದಿ: ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ; ಸಿಎಂ ಬೊಮ್ಮಾಯಿಯವರಿಗೆ ಸನ್ಮಾನ


ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡವು ಎರಡನೇ ಸ್ಥಾನದಲ್ಲಿದ್ದರೆ, ಯುಪಿ ವಾರಿಯರ್ಸ್ ತಂಡವು ಮೂರನೇ ಸ್ಥಾನದಲ್ಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.