Border-Gavaskar Trophy : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಮುಜುಗರದ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 107 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ 197 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 163 ರನ್‌ಗಳಿಗೆ ಆಲೌಟ್ ಆಗಿತ್ತು. ಚೇತೇಶ್ವರ ಪೂಜಾರ ಗರಿಷ್ಠ 59 ರನ್ ಗಳಿಸಿದರು. ಆಸ್ಟ್ರೇಲಿಯಾ ಗೆಲುವಿಗೆ 76 ರನ್‌ಗಳ ಗುರಿ ಇದೆ.


COMMERCIAL BREAK
SCROLL TO CONTINUE READING

ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಗಳ ಮುಂದೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಮಂಡಿ ಉರಿದ್ದಾರೆ. ಪಂದ್ಯ ಇದೀಗ ರೋಚಕ ತಿರುವಿಗೆ ಬಂದಿದೆ. ಆಸ್ಟ್ರೇಲಿಯಾದ ಫೀಲ್ಡಿಂಗ್ ಕೂಡ ಟೈಟ್ ಆಗಿ ಕಾಣುತ್ತಿದೆ. ಪಂದ್ಯದ ಎರಡನೇ ದಿನ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅವರು ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕ್ಯಾಚ್ ಹಿಡದಿದ್ದು ಎಷ್ಟು ಅದ್ಭುತವಾಗಿತ್ತು ಎಂದರೆ. ನೋಡಿದ ಪ್ರತಿಯೊಬ್ಬರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಈಗ ಉಸ್ಮಾನ್ ಖವಾಜಾ ಸೂಪರ್‌ಮ್ಯಾನ್ ಕ್ಯಾಚ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


ಇದನ್ನೂ ಓದಿ : IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್: ಕಪಿಲ್ ದೇವ್ ‘ಮಹಾ ರೆಕಾರ್ಡ್’ ಉಡೀಸ್


ಟೀಂ ಇಂಡಿಯಾ ಇನಿಂಗ್ಸ್‌ನ 38ನೇ ಓವರ್ ನಡೆಯುತ್ತಿತ್ತು. ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಓವರ್‌ನ ಎರಡನೇ ಎಸೆತದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಶ್ರೇಯಸ್‌ ಅಯ್ಯರ್‌ ಮಿಡ್‌ ವಿಕೆಟ್‌ ಕಡೆಗೆ ಅದ್ಭುತ ಶಾಟ್‌ ಬಾರಿಸಿದರು. ಆದರೆ ಗಾಳಿಯಲ್ಲಿ ಧುಮುಕಿ ಉಸ್ಮಾನ್ ಖವಾಜಾ ಅಚ್ಚರಿಯ ರೀತಿಯಲ್ಲಿ ಕ್ಯಾಚ್ ಹಿಡಿದಿದ್ದು, ಪ್ರೇಕ್ಷಕರನ್ನು ಬೆರಗಾಗಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲರೂ ಈ ಕ್ಯಾಚ್ ಹಿಡಿದ ರೀತಿಯನ್ನು ಕೊಂಡಾಡುತ್ತಿದ್ದಾರೆ.


ಶ್ರೇಯಸ್ ಅಯ್ಯರ್ ಅಮೋಘ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದ್ದರೂ ವಿಶೇಷ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಅವರು 27 ಎಸೆತಗಳಲ್ಲಿ 26 ರನ್ ಗಳಿಸಲಷ್ಟೇ ಶಕ್ತರಾದರು. ಅವರ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸೇರಿದ್ದವು. ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ 64 ರನ್ ನೀಡಿ 8 ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ ಮತ್ತು ಕುಹೆನ್ಮನ್ ತಲಾ ಒಂದು ವಿಕೆಟ್ ಪಡೆದರು.


ಇದನ್ನೂ ಓದಿ : WPL 2023 LIVE: ಈ ಚಾನೆಲ್’ಗಳಲ್ಲಿ ಲೈವ್ ಆಗಿ ವೀಕ್ಷಿಸಿ ಮಹಿಳಾ ಪ್ರೀಮಿಯರ್ ಲೀಗ್ 2023: ಉಚಿತವಾಗಿಯೂ ನೋಡಬಹುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.