ಟೀಂ ಇಂಡಿಯಾಗೆ ಬಲವಾಗಿ ನಿಂತ ವೈಭವ್ ಸೂರ್ಯವಂಶಿ.. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ UAE ವಿರುದ್ಧ ಗೆಲುವು ತಂದು ಕೊಟ್ಟ ಯುವ ಆಟಗಾರ!
Vaibhav Suryavanshi: U-19 ಏಷ್ಯಾ ಕಪ್ 2024 ನಲ್ಲಿ ಭಾರತ ತಂಡ ಮತ್ತೊಂದು ಗೆಲುವು ಸಾಧಿಸಿದೆ. ಬುಧವಾರ UAE ವಿರುದ್ಧದ ಪಂದ್ಯ ನಡೆಯಿತು, ಇದರಲ್ಲಿ 10 ವಿಕೆಟ್ಗಳ ಭಾರೀ ಜಯ ಸಾಧಿಸಿದ್ದ ಭಾರತ ತಂಡ ಇದೀಗ ಸೆಮಿಫೈನಲ್ ಪ್ರವೇಶಿಸಿದೆ.
Vaibhav Suryavanshi: U-19 ಏಷ್ಯಾ ಕಪ್ 2024 ನಲ್ಲಿ ಭಾರತ ತಂಡ ಮತ್ತೊಂದು ಗೆಲುವು ಸಾಧಿಸಿದೆ. ಬುಧವಾರ UAE ವಿರುದ್ಧದ ಪಂದ್ಯ ನಡೆಯಿತು, ಇದರಲ್ಲಿ 10 ವಿಕೆಟ್ಗಳ ಭಾರೀ ಜಯ ಸಾಧಿಸಿದ್ದ ಭಾರತ ತಂಡ ಇದೀಗ ಸೆಮಿಫೈನಲ್ ಪ್ರವೇಶಿಸಿದೆ.
ಯುಎಇ, ಪಾಕಿಸ್ತಾನ ಹಾಗೂ ಜಪಾನ್ ತಂಡಗಳೊಂದಿಗೆ ಎ ಗುಂಪಿನಲ್ಲಿದ್ದ ಭಾರತ ತಂಡ ಮೂರರ ಪೈಕಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೇಬಲ್ ನಲ್ಲಿ ರನ್ನರ್ ಅಪ್ ಆಗುವ ಮೂಲಕ ಸೆಮಿ ಫೈನಲ್ ತಲುಪಿದೆ. ಸಧ್ಯ ಐಪಿಎಲ್ ಹರಾಜಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ವೈಭವ ಸೂರ್ಯವಂಶಿ ಅಬ್ಬರದ ಆಟವನ್ನಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. 46 ಎಸೆತಗಳನ್ನು ಆಡಿದ 13 ವರ್ಷದ ವೈಭವ್ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಪುಟಗದೇ 76 ರನ್ ಕಲೆ ಹಾಕಿ ಗೆಲುವು ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಇನ್ನೂ, ಈ ಪಂದ್ಯದಲ್ಲಿ 44 ಓವರ್ಗಳಿಗೆ ಎದುರಾಳಿ ತಂಡ 147 ರನ್ ಕಲೆಹಾಕಿ ಅಲ್ ಔಟ್ ಆಗಿತ್ತು. ಬಳಿಕೆ ಗುರಿ ಬೆನ್ನತ್ತಿದ್ದ ಭಾರತ ತಂಡ ಕೇವಲ 16.1 ಓವರ್ಗಳಲ್ಲಿ 145 ರನ್ ಗಳಿಸುವ ಮೂಲಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
IPL 2025 ಮೆಗಾ ಹರಾಜಿನಲ್ಲಿ ರೂ. 1.10 ಕೋಟಿಗೆ ಶಾಲೆ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಟೂರ್ನಿಯ ಮೊದಲೆರಡು ಪಂದ್ಯದಲ್ಲಿ ಒಳ್ಳೆ ಪ್ರದರ್ಶನ ನೀಡಲು ಸಾಧ್ಯವಾಗದೇ ಹೋದರು ಕೂಡ, ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿ ಆಟವನ್ನು ಆಡಿ, ತಂದಲ್ಲ ಯಶಸ್ವಿ ತಂದು ಕೊಟ್ಟಿದ್ದಾರೆ.
ಸಧ್ಯ, ಈ ಬಿಹಾರದ ಹುಡುಗ ತನ್ನ 13ನೇ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ, ಇನ್ನೂ ದ್ರಾವಿಡ್ ಅವರ ಕೋಚಿಂಗ್ ನಲ್ಲಿ ಮುನ್ನಡೆಯಲಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ವೈಭವ್ ಸೂರ್ಯವಂಶಿ ಆಡಳಿದ್ದು, ಇವರ ಆಟ ನೋಡಲು ಇಡೀ ದೇಶವೇ ಕಾದು ಕುಳಿತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.