IPLನಲ್ಲಿ ಕಳಪೆ ಪ್ರದರ್ಶನ ನೀಡಿದರೂ ದ. ಆಫ್ರಿಕಾ ಕ್ರಿಕೆಟ್ ಟೂರ್ನಿಗೆ ಎಂಟ್ರಿ ಪಡೆದ ಆಟಗಾರ!
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ 18 ಆಟಗಾರರ ತಂಡವನ್ನು ಭಾರತ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು, ಈ ತಂಡದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರ ಹೆಸರೂ ಸೇರಿದೆ. ವೆಂಕಟೇಶ್ ಅಯ್ಯರ್ ಐಪಿಎಲ್ 2022ರಲ್ಲಿ ಸಂಪೂರ್ಣ ವಿಫಲರಾಗಿದ್ದರು.
ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಆಟಗಾರರು ನೀಡುವ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾದಲ್ಲಿ ಸ್ಥಾನಗಳನ್ನು ಗಳಿಸುತ್ತಾರೆ. ಆದರೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಈ ಬಾರಿಯ ಐಪಿಎಲ್ ಸೀಸನ್ 15ರಲ್ಲಿ ಸಂಪೂರ್ಣವಾಗಿ ಕಳಪೆ ಪ್ರದರ್ಶನ ನೀಡಿದ್ದ ಓರ್ವ ಆಟಗಾರನನ್ನು ಸೇರ್ಪಡೆಗೊಳಿಸಲಾಗಿದೆ. ಈ ಆಯ್ಕೆಯು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ 18 ಆಟಗಾರರ ತಂಡವನ್ನು ಭಾರತ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು, ಈ ತಂಡದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರ ಹೆಸರೂ ಸೇರಿದೆ. ವೆಂಕಟೇಶ್ ಅಯ್ಯರ್ ಐಪಿಎಲ್ 2022ರಲ್ಲಿ ಸಂಪೂರ್ಣ ವಿಫಲರಾಗಿದ್ದರು. ಐಪಿಎಲ್ 2022 ರಲ್ಲಿ ಕಳಪೆ ಆಟದಿಂದಾಗಿ ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಇದನ್ನು ಓದಿ: MS Dhoni: IPL ಬಳಿಕ ಎಲೆಕ್ಷನ್ ಡ್ಯೂಟಿ ಮಾಡ್ತಿದ್ದಾರಾ ಕ್ಯಾಪ್ಟನ್ ಕೂಲ್ ಧೋನಿ?
ವೆಂಕಟೇಶ್ ಅಯ್ಯರ್ ಐಪಿಎಲ್ 2022ರಲ್ಲಿ ಆಡಿದ 12 ಪಂದ್ಯಗಳಲ್ಲಿ 16.55 ಸರಾಸರಿಯಲ್ಲಿ ಕೇವಲ 182 ರನ್ ಗಳಿಸಿದ್ದಾರೆ. ಈ ಸೀಸನ್‌ನಲ್ಲಿ ಕೇವಲ ಒಂದು ಅರ್ಧಶತಕ ಸಿಡಿಸಿದ್ದಾರೆ. ಇನ್ನು ವೆಂಕಟೇಶ್ ಜೊತೆಗೆ ವರುಣ್ ಚಕ್ರವರ್ತಿ ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಆದರೂ ಸಹ ವೆಂಕಟೇಶ್ ಅಯ್ಯರ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದ್ದಾರೆ. ಈ ಆಯ್ಕೆಯು ಕೆಲವರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನು ಓದಿ: Monkeypox outbreak: ಮಕ್ಕಳಿಗೆ ಅಪಾಯ ಹೆಚ್ಚು, ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ- ICMR
ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ಕಣಕ್ಕಿಳಿಯುತ್ತಿದ್ದ ವೆಂಕಟೇಶ್ ಅಯ್ಯರ್ ಉತ್ತಮವಾಗಿ ಇಲ್ಲಿಯವರೆಗೆ ಆಡಿದ್ದಾರೆ. ಅದೇ ನಂಬಿಕೆಯಲ್ಲಿ ಈ ಬಾರಿ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ವೆಂಕಟೇಶ್ ಅಯ್ಯರ್ ಅವರು ಇಲ್ಲಿವರೆಗೆ ಎರಡು ಒಡಿಐಗಳನ್ನು ಆಡಿದ್ದು, ಅದರಲ್ಲಿ 12.00 ಸರಾಸರಿಯನ್ನು ಹೊಂದಿದ್ದು, 24 ರನ್ ಗಳಿಸಿದ್ದಾರೆ. ಒಂಬತ್ತು ಟಿ 20 ಪಂದ್ಯಗಳನ್ನಾಡಿದ್ದು, 33.25ರ ಸರಾಸರಿಯಲ್ಲಿ 133 ರನ್ ಗಳಿಸಿ 5 ವಿಕೆಟ್ ಪಡೆದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.