ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಹಿರಿಯ ಸ್ಪಿನರ್ ಹರ್ಭಜನ ಸಿಂಗ್ ಈಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.ಅವರು ಅನಿಲ್ ಕುಂಬ್ಳೆ, ಕಪಿಲ್ ದೇವ್ ಮತ್ತು ಆರ್ ಅಶ್ವಿನ್ ನಂತರ ದೇಶದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ (417) ಆಟಗಾರರಾಗಿದ್ದಾರೆ.


COMMERCIAL BREAK
SCROLL TO CONTINUE READING

'ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಂಡಿವೆ ಮತ್ತು ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ, ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ : ಈ ನಗರದ ಗ್ರಾಹಕರಿಗೆ ಸಿಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ , ನಿಮ್ಮ ನಗರದ ಇದರಲ್ಲಿದೆಯೇ ನೋಡಿಕೊಳ್ಳಿ


ಹರ್ಭಜನ್ ಅವರು ಭಾರತ ತಂಡದ ಪರವಾಗಿ 103 ಟೆಸ್ಟ್, 236 ಏಕದಿನ  ಮತ್ತು 28 ಟಿ20 ಪಂದ್ಯಗಳನ್ನು ಆಡಿ ಈಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿದ್ದಾರೆ.ಅವರು 1998 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ODI ನಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದರು ಮತ್ತು 2007 ರಲ್ಲಿ ಭಾರತದ ವಿಜಯಶಾಲಿ ಟಿ20 ವಿಶ್ವಕಪ್  ತಂಡದ ಭಾಗವಾಗಿದ್ದರು ಮತ್ತು ಭಾರತದಲ್ಲಿ 2011 ರ ವಿಶ್ವಕಪ್ ಅನ್ನು ಎತ್ತಿ ಹಿಡಿದಾಗಲು ಕೂಡ ಅವರು ತಂಡದ ಸದಸ್ಯರಾಗಿದ್ದರು.


ಇದನ್ನೂ ಓದಿ : ಡಿಸೆಂಬರ್ 31 ರ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ


'ಜಲಂಧರ್‌ನ ಬೀದಿಗಳಿಂದ ಟೀಮ್ ಇಂಡಿಯಾದ ಟರ್ನಬೇಟರ್ ಆಗಲು ನನ್ನ ಪ್ರಯಾಣವು ಸುಂದರವಾಗಿದೆ. ಭಾರತ ಜರ್ಸಿಯನ್ನು ಧರಿಸಿ ಮೈದಾನದಲ್ಲಿ ಹೆಜ್ಜೆ ಹಾಕುವುದಕ್ಕಿಂತ ಜೀವನದಲ್ಲಿ ನನಗೆ ದೊಡ್ಡ ಪ್ರೇರಣೆ ಇನ್ನೊಂದಿಲ್ಲ. ಆದರೆ, ಜೀವನದಲ್ಲಿ ಒಂದು ಸಮಯ ಬರುತ್ತದೆ.ಅಲ್ಲಿ ನಾವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ನೀವು ಜೀವನದಲ್ಲಿ ಮುನ್ನಡೆಯಬೇಕು.ಈ ಘೋಷಣೆಯನ್ನು ಸಾರ್ವಜನಿಕವಾಗಿ ಮಾಡಲು ನಾನು ಕಳೆದ ಕೆಲವು ವರ್ಷಗಳಿಂದ ಕಾಯುತ್ತಿದ್ದೆ - ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದು ಹರ್ಭಜನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ : eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ


ಅನುಭವಿ ಆಫ್ ಸ್ಪಿನ್ನರ್ ಕೊನೆಯದಾಗಿ 2016 ರಲ್ಲಿ ಟಿ 20ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು, ಆದರೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿರುವ ಈ ವರ್ಷದ ಆರಂಭದವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಿದರು.ಅವರು ಐಪಿಎಲ್ ವೃತ್ತಿಜೀವನದಲ್ಲಿ, ಹರ್ಭಜನ್ ಮುಂಬೈ ಇಂಡಿಯನ್ಸ್ (2008-2017), ಚೆನ್ನೈ ಸೂಪರ್ ಕಿಂಗ್ಸ್ (2018-2019) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2021), ಸೇರಿದಂತೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ..


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.