ನವದೆಹಲಿ: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಪುತ್ರಿ ಝೀವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗ್ತಿದ್ದಾಳೆ. ಈಗ ಯುವ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಜೊತೆ ಇರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈ ವೀಡಿಯೋ ನೋಡಿದ ಧೋನಿ ಅಭಿಮಾನಿಗಳು 'ಝೀವಾ ಈಸ್ ಸೋ ಕ್ಯೂಟ್' ಅಂತಿದ್ದಾರೆ.


COMMERCIAL BREAK
SCROLL TO CONTINUE READING

ಧೋನಿ ಪುತ್ರಿ ಝೀವಾ ಧೋನಿ, ಕ್ರಿಕೆಟ್ ಆಟಗಾರ ರಿಷಬ್ ಪಂತ್‍ಗೆ ಹಿಂದಿ ಭಾಷೆಯ ವರ್ಣಮಾಲೆ ಹೇಳಿಕೊಟ್ಟಿದ್ದಾರೆ. ಅ, ಆ, ಇ, ಈ ಅಂತಾ ಆಕ್ಷನ್ ಮಾಡಿಕೊಂಡು ಝೀವಾ ಹೇಳಿಕೊಳ್ಳುತ್ತಿರುವ ವರ್ಣಮಾಲೆ ಸಿಕ್ಕಾಪಟ್ಟೆ ಕ್ಯೂಟ್ ಆಗಿದ್ದು, ಝೀವಾಳ ಕ್ಯೂಟ್ನೆಸ್ ಗೆ ಪಂತ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪಾಠ ಕಲಿತ ಬಳಿಕ ರಿಷಬ್ ಪಂತ್ ಅವರು ಝೀವಾಗೆ ಥ್ಯಾಂಕ್ಸ್ ಮೇಡಂ ಅಂದಿದ್ದಾರೆ. ಈ ವಿಡಿಯೋವನ್ನು ಝೀವಾ ಸಿಂಗ್ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಆ ವೀಡಿಯೋವನ್ನು ನೀವೂ ಸಹ ನೋಡಿ...