Ruturaj Gaikwad impresses with wicket-keeping at MPL 2024: ಭಾರತೀಯ ಕ್ರಿಕೆಟ್ ತಂಡದಲ್ಲಿ ಓರ್ವ ಆಟಗಾರನಿಗೆ ಸ್ಥಾನ ಸಿಗುವುದು ಸುಲಭದ ಮಾತಲ್ಲ. ಬ್ಯಾಟಿಂಗ್‌’ನಿಂದ ವಿಕೆಟ್‌ ಕೀಪಿಂಗ್‌’ವರೆಗೆ ಅದ್ಭುತ ಪ್ರದರ್ಶನ ನೀಡಬೇಕು. ಹೀಗಿರುವಾಗ ಪ್ರತಿಯೊಬ್ಬ ಕ್ರಿಕೆಟಿಗ ಕೂಡ ಉತ್ತಮ ಪ್ರದರ್ಶನ ತೋರಲು ಇಚ್ಛಿಸುತ್ತಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದಿಯಾ ಪೃಥ್ವಿ ಅಂಬಾರ್ ಈಗ ಚೌಕಿದಾರ್: ಚಂದ್ರಶೇಖರ್ ಬಂಡಿಯಪ್ಪ ಹೊಸ ಹೆಜ್ಜೆಗೆ ರೋರಿಂಗ್ ಸ್ಟಾರ್ ಸಾಥ್


ನಾವಿಂದು ಇದೇ ರೀತಿ ಉತ್ತಮ ಪ್ರದರ್ಶನ ನೀಡುತ್ತಿರುವ ರುತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡಲಿದ್ದೇವೆ. ಈ ಹಿಂದೆ ಐಪಿಎಲ್’ನಲ್ಲಿ ಚೆನ್ನೈ ತಂಡದ ಓಪನರ್ ಆಗಿದ್ದರು. ಅಷ್ಟೇ ಅಲ್ಲದೇ ಏಷ್ಯನ್ ಗೇಮ್ಸ್’ನಲ್ಲೂ ನಾಯಕತ್ವ ವಹಿಸಿಕೊಂಡಿದ್ದರು. ಈಗ ತಮ್ಮ ಪ್ರೊಫೈಲ್‌’ಗೆ ಇನ್ನೊಂದು ವಿಷಯವನ್ನು ಸೇರಿಸುವಲ್ಲಿ ನಿರತರಾಗಿದ್ದಾರೆ. ಗಾಯಕ್ವಾಡ್ ದೇಶೀಯ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ರುತುರಾಜ್ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) ಸಮಯದಲ್ಲಿ ತಮ್ಮ ವಿಕೆಟ್ ಕೀಪಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಗಾಯಕ್ವಾಡ್ ಅವರ ವಿಕೆಟ್ ಕೀಪಿಂಗ್ ನೋಡಿ ಅಭಿಮಾನಿಗಳು ಮತ್ತು ಕ್ರಿಕೆಟ್ ದಿಗ್ಗಜರು ಬೆರಗಾಗಿದ್ದಾರೆ.


ಇತ್ತೀಚೆಗೆ ರುತುರಾಜ್ ಎಂಪಿಎಲ್ ಪಂದ್ಯದ ವೇಳೆ ಪುಣೇರಿ ಬಪ್ಪಾಗೆ ವಿಕೆಟ್ ಕೀಪಿಂಗ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಗಾಯಕ್ವಾಡ್ ಅವರ ಚೊಚ್ಚಲ ವಿಕೆಟ್ ಕೀಪಿಂಗ್ ಆಕರ್ಷಕವಾಗಿತ್ತು. ಇನ್ನಿಂಗ್ಸ್‌’ನ ಮೊದಲ ಎಸೆತದಲ್ಲಿ ವೈಡ್ ಬಾಲ್ ಬೌಂಡರಿಗೆ ಹೋಗದಂತೆ ತಡೆಯಲು ಬಲಕ್ಕೆ ಡೈವ್ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಇದನ್ನೂ ಓದಿ: ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್


ಪ್ರಸಕ್ತ MPL ಋತುವಿನಲ್ಲಿ, ಪುಣೇರಿ ಬಪ್ಪಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 48.33 ರ ಅತ್ಯುತ್ತಮ ಸರಾಸರಿ ಮತ್ತು 168.60 ರ ಸ್ಟ್ರೈಕ್ ರೇಟ್‌ನಲ್ಲಿ 290 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ