ಆಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ದಿನದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಮೂರನೇ ದಿನದ ಪಂದ್ಯ ಆರಂಭಗೊಂಡ ಬಳಿಕ ಕ್ಷೇತ್ರರಕ್ಷಣೆ ವೇಳೆ ಸ್ಲಿಪ್ ನಲ್ಲಿ ನಿಂತಿದ್ದ ಕೊಹ್ಲಿ ಒಬ್ಬರೇ ಹಾಡು ಹಾಡುತ್ತಾ ಡ್ಯಾನ್ಸ್ ಮಾಡಿದರು. ಕೂಡಲೇ ಅಲ್ಲಿದ ಕ್ರೀಡಾಭಿಮಾನಿಗಳು ವಿರಾಟ್ ಕೊಹ್ಲಿ ಅವರ ಡ್ಯಾನ್ಸ್ ಕಂಡು ಶಿಳ್ಳೆ ಹಾಕಿ ಹೋ ಎಂದು ಕೂಗಿದರು. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.