ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾವ ಬಾಲಿವುಡ್ ಸ್ಟಾರ್'ಗಳಿಗೂ ಕಡಿಮೆ ಇಲ್ಲ ಅನ್ನೋದನ್ನು ಕೊಹ್ಲಿ ಮತ್ತೆ ಸಾಬೀತು ಮಾಡಿದ್ದಾರೆ. ಇದೀಗ ಬಾಲಿವುಡ್, ಹಾಲಿವುಡ್ ತಾರೆಯರ ಹಿಂದೆ ಬಿದ್ದಿದ್ದ ಯುವಜನತೆ ಇದೀಗ ಕ್ರಿಕೆಟರ್ ವಿರಾಟ್ ಕೊಹ್ಲಿ ಸ್ಟೈಲ್'ಗೆ ಫುಲ್ ಫಿದಾ ಆಗ್ತಿದ್ದಾರೆ. ತನ್ನ ನಾಯಕತ್ವ ಮತ್ತು ಬ್ಯಾಟಿಂಗ್'ನೊಂದಿಗೆ ಇಡೀ ಪ್ರಪಂಚದಾದ್ಯಂತ ಹೆಸರು ಮಾಡಿರುವ ವಿರಾಟ್'ನ ಪ್ರತಿಯೊಂದು ವಿಚಾರವನ್ನೂ ಜನ ನೋಡಲು, ಕೇಳಲು ಇಷ್ಟಪಡುತ್ತಿದ್ದಾರೆ. ಹಾಗಾಗೇ ವಿರಾಟ್ ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಆಕ್ಟೀವ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ, ಇನ್ಸ್ಟಾಗ್ರಾಂ'ನಲ್ಲಿ ಅತಿ ಹೆಚ್ಚು ಎಂಗೇಜ್ಮೆಂಟ್ ಹೊಂದಿರುವ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯವಾಗಿದ್ದಾರೆ. ಇದೇ ಮೊದಲ ಅಬಾರಿಗೆ ಭಾರತದಲ್ಲಿ 'ಇನ್ಸ್ಟಾಗ್ರ್ಯಾಮ್ ಪ್ರಶಸ್ತಿ'ಯನ್ನು ಇನ್ಸ್ಟಾಗ್ರಾಮ್ ಪ್ರಕಟಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿಯವರ ಖಾತೆಯು 'Most Engaged Account' ಪ್ರಶಸ್ತಿಯನ್ನು ಗೆದ್ದಿದೆ. ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಮ್ ಅಕೌಂಟ್ 19.8 ದಶಲಕ್ಷ ಜನ ಫಾಲೋವರ್ಸ್ ಹೊಂದಿದೆ. ಅಷ್ಟೇ ಅಲ್ಲ, 2017 ರಲ್ಲಿ ಕೊಹ್ಲಿ ಅವರ ಅಕೌಂಟ್ ಅತ್ಯಧಿಕ ಎಂಗೇಜ್ಮೆಂಟ್'ಗಳಿದ್ದವು ಎಂದು ಇನ್ಸ್ಟಾಗ್ರಾಮ್ ಹೇಳಿದೆ. 


ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆಗಿನ ರೋಮ್ಯಾಂಟಿಕ್ ಪೋಟೋಗಳನ್ನು ಹೆಚ್ಚಾಗಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮದುವೆಯ ನಂತರ ತಮ್ಮ ಪತ್ನಿ ಅನುಷ್ಕಾ ಶರ್ಮಾರೊಂದಿಗಿನ ಅನೇಕ ರೊಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಅಭಿಮಾನಿಗಳೂ ಸಖತ್ ಇಷ್ಟಪಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ 11 ರಂದು ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇಟಲಿಯಲ್ಲಿ ವಿವಾಹವಾಗಿದ್ದರು. 


ಅಷ್ಟೇ ಅಲ್ಲ, ಇಂದು(ಏಪ್ರಿಲ್ 1), ವಿರಾಟ್ ಮತ್ತೊಮ್ಮೆ ಇನ್ಸ್ಟಾಗ್ರ್ಯಾಮ್ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಬಹಳ ವಿಶೇಷವಾಗಿದೆ. ಈ ವೀಡಿಯೋ ಹಂಚಿಕೊಳ್ಳುವಾಗ "ಮತ್ತೊಮ್ಮೆ ವಿಶೇಷ ಸಂದೇಶವಿದೆ. ಬಹಳ ಗಮನವಿಟ್ಟು ಕೇಳಿ" ಎಂದು ವಿರಾಟ್ ಬರೆದಿದ್ದಾರೆ.



ಬಹುಷಃ ವಿರಾಟ್ ಕೊಹ್ಲಿ ನೀಡಿರೋ ಸ್ಪೆಷಲ್ ಮೆಸೇಜ್ ಏನಿರಬಹುದು ಅಂತ ನೀವೆಲ್ಲರೂ ಬಹಳ ಗಮನವಿತ್ತು ಕೇಳಿರಬಹುದು. ಆದರೆ ಈ ವೀಡಿಯೋದಲ್ಲಿ ಯಾವುದೇ ಆಡಿಯೋ ಕೇಳಿಸುವುದಿಲ್ಲ. ಯಾಕೆ ಗೊತ್ತಾ? ಇದು ವಿರಾಟ್ ಕೊಹ್ಲಿ ಮಾಡಿರೋ 'ಏಪ್ರಿಲ್ ಫೂಲ್'!