Vinesh Phogat: ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಪದಕ ವಂಚಿತವಾದ ನಂತರ ಕುಸ್ತಿಯನ್ನು ತ್ಯಜಿಸಲು ಬಹುತೇಕ ಮನಸ್ಸು ಮಾಡಿದ್ದೆ ಎಂದು ವಿನೇಶ್ ಫೋಗಟ್ ಶನಿವಾರ ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯು ತನಗೆ ಮುಂದುವರಿಯಲು ಸ್ಫೂರ್ತಿ ನೀಡಿತು. ಹೀಗಾಗಿ ಮತ್ತೆ ಕಣಕ್ಕೆ ಇಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Weather Update: ಈ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಿಸಿದ IMD


2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್-ಫೈನಲ್‌ನಲ್ಲಿ ಮೊಣಕಾಲಿನ ಗಾಯವು ಅವರ ಪದಕದ ಭರವಸೆಯನ್ನು ಛಿದ್ರಗೊಳಿಸಿತ್ತು ಎಂಬುದು ನಮಗೆಲ್ಲ ತಿಳಿದ ಸಂಗತಿ. ಈ ಘಟನೆಯಿಂದ ನಿರಾಸೆಗೊಂಡ ಪೋಗಟ್ ಕುಸ್ತಿ ತ್ಯಜಿಸಲು ನಿರ್ಧರಿಸಿದ್ದರಂತೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು ತಮ್ಮ ಛಲದ ಹಾದಿಗೆ ಮರಳಿದ್ದಾರೆ.


ಸ್ಟಾರ್ ಕುಸ್ತಿಪಟು ಈ ಬಗ್ಗೆ ಮಾತನಾಡಿದ್ದು, “ಮಾನಸಿಕವಾಗಿ ಒಂದು ದೊಡ್ಡ ತಡೆಯನ್ನು ದಾಟಲು ಸಾಧ್ಯವಾಗಿದೆ. ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲಲು ಸಾಧ್ಯವಾಗದ ಕಾರಣ ನಾನು ಕುಸ್ತಿಯನ್ನು ಬಹುತೇಕ ತ್ಯಜಿಸಿದೆ. ಯಾವುದೇ ಕ್ರೀಡಾಪಟುವಿಗೆ ಒಲಿಂಪಿಕ್ಸ್ ಎಂಬುದು ದೊಡ್ಡ ವೇದಿಕೆ. ಆದರೆ ನನ್ನ ಕುಟುಂಬ ಯಾವಾಗಲೂ ನನ್ನನ್ನು ಬೆಂಬಲಿಸುತ್ತದೆ, ಅವರು ಯಾವಾಗಲೂ ನನ್ನ ಸಾಮರ್ಥ್ಯವನ್ನು ನಂಬಿದ್ದರು” ಎಂದು ಹೇಳಿದ್ದಾರೆ.


ಇದನ್ನೂ ಓದಿ: Vegetable Price Today: ಹೀಗಿದೆ ನೋಡಿ ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಇತರ ತರಕಾರಿಗಳ ಬೆಲೆ


ಪ್ರಧಾನಿ ಮೋದಿ ಮಾತುಗಳೇ ಸ್ಪೂರ್ತಿ: "ನಾನು ನಿರಾಶೆಗೊಂಡಾಗ, ಮೋದಿ ಜಿ (ನರೇಂದ್ರ ಮೋದಿ) ಅವರನ್ನು ಭೇಟಿ ಮಾಡಿದ್ದೇನೆ. ಅವರು ನನಗೆ ಸ್ಫೂರ್ತಿ ನೀಡಿದರು. ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನೀವು ಸಾಧನೆ ಮಾಡಬಹುದು” ಎಂದು ಹೇಳಿದರು. ಇದು ನನ್ನಲ್ಲಿ ಚೈತನ್ಯವನ್ನು ಮತ್ತೆ ಹುಟ್ಟುಹಾಕಿತು ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.