ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಎಂ.ಎಸ್.ಧೋನಿ ಕೇವಲ ಮೈದಾನದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಲ್ಲದೆ, ಇದೀಗ ಪತ್ನಿಗೆ ಒಳ್ಳೆಯ ಪತಿ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಸದಾ ಸರಳ, ಸಜ್ಜನಿಕೆಗೆ ಹೆಸರಾದ ಕ್ರಿಕೆಟ್ ಆಟಗಾರ ಧೋನಿ ತಮ್ಮ ಪತ್ನಿ ಸಾಕ್ಷಿಗೆ ಸಹಾಯ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದು, ಪತ್ನಿಗೆ ಅಡುಗೆಯಲ್ಲೋ, ಮನೆ ಕೆಲಸದಲ್ಲಿಯೋ ಸಹಾಯ ಮಾಡುತ್ತಿರುವ ಸಾಮಾನ್ಯ ಫೋಟೋ ಅಲ್ಲ, ಪತ್ನಿ ಸಾಕ್ಷಿಗೆ ಹೊಸ ಚಪ್ಪಲಿ ತೊಡಿಸುತ್ತಿರುವ ಫೋಟೋ ವೈರಲ್ ಆಗಿದೆ!


ಪತ್ನಿ ಸಾಕ್ಷಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು, 'ಚಪ್ಪಲಿಗಳಿಗೆ ನೀವು ಹಣ ಕೊಟ್ಟಿದ್ದೀರಿ, ಹಾಗಾಗಿ ನೀವೇ ತೊಡಿಸಿ' ಎಂದು ಬರೆದುಕೊಂಡಿದ್ದಾರೆ. 



ಸದ್ಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿರುವ ಧೋನಿ, ತಮ್ಮ ಪತ್ನಿ ಮಾಗು ಮಗಳೊಂದಿಗೆ ಮೌಲ್ಯಯುತ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಕ್ರಿಕೆಟ್ ಆಡದ ಸಮಯದಲ್ಲಿಯೂ ತಮ್ಮ ಜೀವನದ ಕೆಲವೊಂದು ವಿಷಯಗಳ ಬಗ್ಗೆ ತಿಳಿಸುತ್ತಾ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.