ನವದೆಹಲಿ: ಟೀಮ್ ಇಂಡಿಯಾ ಈ ದಿನಗಳಲ್ಲಿ ಪ್ರಬಲವಾಗಿದೆ. ವಿಶ್ವಕಪ್‌ನಲ್ಲಿ ನಿರಾಶಾದಾಯಕ ಸೆಮಿಫೈನಲ್ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದ (ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಮೊದಲ ಟಿ 20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ತಂಡವು ಏಕದಿನ ಸರಣಿಯನ್ನು 2–0ರಿಂದ ಗೆದ್ದುಕೊಂಡಿತು ಮತ್ತು ಈಗ ಎರಡು ಟೆಸ್ಟ್ ಸರಣಿಯಲ್ಲಿ ಆಂಟಿಗಾದಲ್ಲಿ ಆಡಿದ ಮೊದಲ ಟೆಸ್ಟ್‌ನಲ್ಲಿ ಜಯ ದಾಖಲಿಸಿದೆ. ಈ ಗೆಲುವಿನ ಬಳಿಕ ತಂಡದ ಆಟಗಾರರು ವೆಸ್ಟ್ ಇಂಡೀಸ್‌ನಲ್ಲಿ ವಿಜಯವನ್ನು ಆಚರಿಸುತ್ತಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾಜೊತೆಗೆ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ವೆಸ್ಟ್ ಇಂಡೀಸ್ ಸಮುದ್ರದಲ್ಲಿ ಬೋಟಿಂಗ್ ಆನಂದಿಸಿದರು. ಅಂತಹ ಒಂದು ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಟ್ ಅಲ್ಲದೆ, ಅನುಷ್ಕಾ, ರಾಹುಲ್, ಮಾಯಾಂಕ್ ಅಗರ್ವಾಲ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪ್ರಸ್ತುತ ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿದೆ. ಸೋಮವಾರವೇ ತಂಡವು ವೆಸ್ಟ್ ಇಂಡೀಸ್ ತಂಡವನ್ನು 318 ರನ್ಗಳಿಂದ ಸೋಲಿಸಿದೆ. ತಂಡದ ಗೆಲುವಿನ ನಂತರದ ಸಂಭ್ರಮಾಚರಣೆಯನ್ನು ಕೆ.ಎಲ್. ರಾಹುಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಫೋಟೋ ಹಂಚಿಕೊಂಡಿದ್ದು, ಫೋಟೋಗೆ "ಎಂಡ್ಲೆಸ್ ಬ್ಲೂಸ್" ಎಂಬ ಶೀರ್ಷಿಕೆ ನೀಡಿದ್ದಾರೆ.



ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 38 ರನ್ ಗಳಿಸಿದರು, ಪಂದ್ಯದಲ್ಲಿ 82 ರನ್ ಗಳಿಸಿದರು. ಪಂದ್ಯದ ನಂತರ ಕೆ.ಎಲ್. ರಾಹುಲ್ ಅವರು ತುಂಬಾ ನಿರಾಶೆಗೊಂಡಿದ್ದಾರೆ ಮತ್ತು ಅವರ ಆಟವನ್ನು ಸುಧಾರಿಸಲು ಹೆಚ್ಚಿನ ತಾಳ್ಮೆ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ. 


ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್ ಗಳಿಸಿದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 51 ರನ್‌ಗಳಿಗೆ ಔಟಾದರು, ಆದರೆ ನಾಯಕನಾಗಿ ಅವರು ತಮ್ಮ ಹೆಸರಿನಲ್ಲಿ ಹೊಸ ಸಾಧನೆ ಮಾಡಿದರು. ಈಗ ವಿದೇಶದಲ್ಲಿ 27 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ನಾಯಕ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.  ಈಗ ಅವರು ಧೋನಿಗೆ ಸಮಾನರಾಗಿದ್ದಾರೆ. ಈ ಗೆಲುವು ಟೀಮ್ ಇಂಡಿಯಾದ ವಿದೇಶದಲ್ಲಿ ದೊಡ್ಡ ಜಯವಾಗಿದೆ. ಅದೇ ಸಮಯದಲ್ಲಿ, ಇದು ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಅತಿದೊಡ್ಡ ಗೆಲುವು.