Virat Kohli News: ಅಕ್ಟೋಬರ್ 18 ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ಈ ಸರಣಿಗಾಗಿ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಈ ಬೆನ್ನಲ್ಲೇ ಲಂಡನ್‌ನಲ್ಲಿ ನೆಲೆಸಿರುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಭಾರತಕ್ಕೆ ಆಗಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದಸರಾದಂದು ತುಳಸಿ ಗಿಡದ ಜೊತೆ ಈ ಗಿಡವನ್ನಿಟ್ಟು ಪೂಜಿಸಿ: ಶುಕ್ರದೆಸೆ ಬೆನ್ನೇರಿ ಸಂಪತ್ತಿನ ನಿಧಿಯೇ ಹರಿಯುವುದು! ಅಪಾರ ಹಣ, ಕಾರು, ಬಂಗಲೆಗೆ ಒಡೆಯರಾಗುವಿರಿ


ವಿರಾಟ್ ಕೊಹ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಕೆಲ ಪಾಪರಾಜಿಗಳು ಅವರ ಫೋಟೋ ಕ್ಲಿಕ್ಕಿಸಿದರೆ, ಇನ್ನೂ ಕೆಲವರು ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಬ್ಬರಿಸಬೇಕೆಂದು ಪಾಪರಾಜಿಗಳು ಕೊಹ್ಲಿಗೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ʼಒಕೆʼ ಎನ್ನುತ್ತಾ ತಲೆಯಾಡಿಸಿ ಕಾರಿನೊಳಗೆ ಕುಳಿತಿದ್ದಾರೆ.


ಗಮನಾರ್ಹವೆಂದರೆ, ಈ ವರ್ಷದ ಜನವರಿಯಿಂದ ಮಾರ್ಚ್‌ʼವರೆಗೆ ಇಂಗ್ಲೆಂಡ್ ವಿರುದ್ಧದ ಭಾರತದ ತವರಿನ ಸರಣಿಯ ಸಮಯದಲ್ಲಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್‌ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅನುಷ್ಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆ ಕಾರಣದಿಂದ ವಿರಾಟ್‌ ಅಲಭ್ಯವಾಗಿದ್ದರು.


ಇನ್ನೊಂದೆಡೆ ವಿರಾಟ್‌ ಕೊಹ್ಲಿ ಸ್ಟೈಲಿಶ್‌ ಲುಕ್‌ ಕಂಡು ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ. Brown ಬಣ್ಣದಲ್ಲಿ ಗಡ್ಡ ಮೀಸೆಗೆ ಕಲರಿಂಗ್‌ ಮಾಡಿಸಿಕೊಂಡಿರುವ ವಿರಾಟ್‌, ವಿದೇಶದಲ್ಲಿ ನೆಲೆಸಿದ ಮೇಲೆ ವಿದೇಶಿಗನಾಗಿಯೇ ಪರಿವರ್ತನೆಯಾಗುತ್ತಿದ್ದಾರಾ? ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ.


ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ 'ಟಾಯ್ಲೆಟ್' ಇದ್ದರೆ ಜೀವನವೇ ಸರ್ವನಾಶ..! ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೇ ಇಲ್ಲ..!


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯು ನವೆಂಬರ್ 22 ರಂದು ಪರ್ತ್‌ನಲ್ಲಿ ಮೊದಲ ಟೆಸ್ಟ್‌ನೊಂದಿಗೆ ಪ್ರಾರಂಭವಾಗಲಿದೆ. ಅಡಿಲೇಡ್ ಓವಲ್‌ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿರುವ ಎರಡನೇ ಟೆಸ್ಟ್, ಡೇ ಆಂಡ್‌ ನೈಟ್‌ (ಹಗಲು-ರಾತ್ರಿ) ಮಾದರಿಯನ್ನು ಹೊಂದಿರುತ್ತದೆ. ಅದರ ನಂತರ, ಡಿಸೆಂಬರ್ 14 ರಿಂದ 18 ರವರೆಗೆ ನಡೆಯಲಿರುವ ಮೂರನೇ ಟೆಸ್ಟ್‌  ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್, ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬೋರ್ನ್‌ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ