ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಕೊಹ್ಲಿ ವರ್ತನೆಗೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ವಿರಾಟ್ ಕೊಹ್ಲಿ  ಹಾಗೂ ಆಸೀಸ್ ಆಟಗಾರ ಸ್ಯಾಮ್ ಕಾನ್ಸ್ತಾಸ್ ನಡುವಿನ ಮಾತಿನ ಚಕಮಕಿ ಈಗ ಚರ್ಚೆಯ ವಿಷಯವಾಗಿದೆ.


COMMERCIAL BREAK
SCROLL TO CONTINUE READING

ಈಗ ಈ ವಿಷಯ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಕಾನ್ಸ್ತಾಸ್ 'ಇದು ಆಕಸ್ಮಿಕವಾಗಿ ಆಗಿರುವ ಘಟನೆ, ನಾನು ನನ್ನ ಗ್ಲೋಸ್ ಸರಿಪಡಿಸಿಕೊಳ್ಳುತ್ತಿದ್ದೆ ಆಗ ಕೊಹ್ಲಿ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾರೆ.ಇದೆಲ್ಲಾ ಕ್ರಿಕೆಟ್ ನಲ್ಲಿ ಒಮ್ಮೊಮ್ಮೆ ಸಾಮಾನ್ಯವಾಗಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.ಈಗ ಸ್ಯಾಮ್ ಕಾನ್ಸ್ತಾಸ್ ನೀಡಿರುವ ಈ ಹೇಳಿಕೆಗೆ ಬಹುತೇಕರು ಮೆಚ್ಚುಗೆ ಮೆರೆದಿದ್ದಾರೆ.ಕೆಲವರು 19 ರ ಯುವಕ ಕ್ರೀಡಾ ಮನೋಭಾವ ಮೆಚ್ಚುವಂತದ್ದು ಎಂದೆಲ್ಲಾ ಶ್ಲಾಘಿಸುತ್ತಿದ್ದಾರೆ.


ಇದನ್ನೂ ಓದಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ..! ಈಕೆಗಾಗಿ ಸಾಲುಗಟ್ಟಿ ನಿಲ್ತಾರೆ ಡೈರೆಕ್ಟರ್ಸ್‌..


ಅಷ್ಟಕ್ಕೂ ಅಲ್ಲಿ ನಡೆದದ್ದೇನು?


ಕ್ಷೇತ್ರ ರಕ್ಷಣೆಯಲ್ಲಿದ್ದ ಕೊಹ್ಲಿ ಬೌಲ್ ತೆಗೆದುಕೊಂಡು ಬೌಲರ್ ನತ್ತ ರಬಸವಾಗಿ ಧಾವಿಸುತ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಯಾಮ್ ಕಾನ್ಸ್ತಾಸ್ ಎದೆಗೆ ಡಿಕ್ಕಿ ಹೊಡೆದಿದ್ದಾರೆ.ಈಗ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಕೊಹ್ಲಿಯಂತಹ ಹಿರಿಯ ಆಟಗಾರ ಕಿರಿಯ ಆಟಗಾರನ ಜೊತೆಗೆ ನಡೆದುಕೊಂಡಿರುವ ನಡೆ ಸರಿಯಾದದ್ದಲ್ಲ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.