Virat Kohli: ವಿರಾಟ್ ಕೊಹ್ಲಿ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ಉತ್ತಮ ಫಾರ್ಮ್ ಹೊಂದಿದ್ದಾರೆ. ಕಳೆದ ದಿನ ಅಂದರೆ ಮೇ 9 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 92 ರನ್ ಗಳಿಸುವ ಮೂಲಕ ಅದ್ಭುತ ಆಟವನ್ನಾಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತೇ? ಕೋಚ್ ಮಗಳನ್ನೇ ಕದ್ದುಮುಚ್ಚಿ ಪ್ರೀತಿಸಿ ಮದುವೆಯಾದ ‘ಚಿನ್ನ ಥಾಲ’


ಈ ಮೂಲಕ ಕೊಹ್ಲಿ ಐಪಿಎಲ್‌’ನಲ್ಲಿ ರನ್-ಸ್ಕೋರರ್‌’ಗಳ ಪಟ್ಟಿಯಲ್ಲಿ (12 ಪಂದ್ಯಗಳಲ್ಲಿ 634 ರನ್) ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ ಇದುವರೆಗೆ ಈ ಋತುವಿನಲ್ಲಿ 600 ರನ್‌’ಗಳನ್ನು ದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಇನ್ನಿಂಗ್ಸ್‌’ನ ಪ್ರಮುಖ ಅಂಶವೆಂದರೆ ಸ್ಪಿನ್ನರ್‌’ಗಳ ವಿರುದ್ಧ ಸ್ಲಾಗ್ ಸ್ವೀಪ್ ಬಳಸಿ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರುವುದು. ಈ ಟ್ರಿಕ್ಸ್ ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೊಹ್ಲಿ ಪ್ರಯೋಗ ಮಾಡಿದ್ದು, ಮುಂಬರುವ ಹಣಾಹಣಿಗೆ ಈಗಲೇ ಹೊಸ ತಂತ್ರ ರೂಪಿಸಿದಂತಿದೆ.


ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡಿದ ಕೊಹ್ಲಿ, “ನಾನು ಸ್ಪಿನ್ನರ್‌’ಗಳಿಗೆ ಸ್ಲಾಗ್-ಸ್ವೀಪ್ ಟ್ರಿಕ್ಸ್ ರೂಪಿಸಿಕೊಂಡಿದ್ದೇನೆ. ಅದನ್ನು ಅಭ್ಯಾಸ ಮಾಡಲಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗ ಬಳಕೆ ಮಾಡಿದೆ” ಎಂದು ಹೇಳಿದ್ದಾರೆ.


"ಸ್ಲಾಗ್-ಸ್ವೀಪ್ ಟ್ರಿಕ್ಸ್ ಬಳಕೆ ಬಗ್ಗೆ ನನಗೆ ತಿಳಿದಿದೆ. ಇದನ್ನು ಅನೇಕ ಬಾರಿ ನಾನು ಟ್ರೈ ಮಾಡಿದ್ದೇನೆ. ನನಗೆ, ಈ ಐಪಿಎಲ್‌ನಲ್ಲಿ ಇದು ಒಂದು ದೊಡ್ಡ ಅಂಶವಾಗಿದೆ” ಎಂದಿದ್ದಾರೆ.


 “ಈ ಐಪಿಎಲ್‌ನಲ್ಲಿ ಮಧ್ಯಮ ಓವರ್‌’ಗಳಲ್ಲಿ ಇದು ನಿಜವಾಗಿಯೂ ನನಗೆ ಸಹಾಯ ಮಾಡಿದೆ, ನನ್ನ ಸ್ಟ್ರೈಕ್ ರೇಟ್ ಅನ್ನು ಇರಿಸಿಕೊಂಡು ತಂಡಕ್ಕೆ ಸ್ಕೋರಿಂಗ್ ದರವನ್ನು ಮುಂದುವರಿಸಿದೆ" ಎಂದರು.


ಇದನ್ನೂ ಓದಿ: RCB ಪ್ಲೇಆಫ್ ಪ್ರವೇಶಿಸಬೇಕೆಂದ್ರೆ ಈ ತಂಡಗಳು ಸೋಲಲೇಬೇಕು! ಈ ಲೆಕ್ಕಾಚಾರದಂತೆ ನಡೆದ್ರೆ ಎಂಟ್ರಿ ಪಕ್ಕಾ!


ಕಳೆದ ತಿಂಗಳು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದಾದ ಬಳಿಕ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಎದುರಾಗಿದ್ದವು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ