Virat Kohli : ಟೀಂ ಇಂಡಿಯಾ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚಿಗೆ ಕಳಪೆ ಫಾರ್ಮ್‌ನಿಂದ ಹೋರಾಡುತ್ತಿದ್ದಾರೆ. ಅವರ ಬ್ಯಾಟ್‌ನಿಂದ ರನ್‌ಗಳೆ ಬರುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2021ರ ಟಿ20 ವಿಶ್ವಕಪ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಾದ ನಂತರ ಏಕದಿನ ಪಂದ್ಯದ ನಾಯಕತ್ವವನ್ನು ಕೊಹ್ಲಿಯಿಂದ ಹಿಂತೆಗೆದುಕೊಳ್ಳಲಾಯಿತು, ಇದರಿಂದಾಗಿ ಬಿಸಿಸಿಐ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಕೊಹ್ಲಿ ಅಭಿಮಾನಿಗಳು ಭಾವಿಸಿದ್ದರು. ಇದೀಗ ಬಿಸಿಸಿಐ ಖಜಾಂಚಿ ಅರುಣ್ ಕುಮಾರ್ ಧುಮಾಲ್ ಅವರು ಕೊಹ್ಲಿ ನಾಯಕತ್ವದ ಬಗ್ಗೆ ಬಿಗ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅರುಣ್ ಕುಮಾರ್ ಹೇಳಿದ್ದೇನು?


ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅರುಣ್ ಕುಮಾರ್, 'ವಿರಾಟ್ ಮಟ್ಟಿಗೆ ಅವರು ಸಾಮಾನ್ಯ ಆಟಗಾರನಲ್ಲ. ಅವರು ಶ್ರೇಷ್ಠರು ಮತ್ತು ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಅಪ್ರತಿಮವಾಗಿದೆ. ಆದ್ರೆ, ಬಿಸಿಸಿಐ ಅವರ ನಾಯಕತ್ವವನ್ನು ಒತ್ತಾಯ ಪೂರ್ವಕವಾಗಿ ಕಿತ್ತುಕೊಂಡಿದೆ. ಈ ರೀತಿಯ ಸಂಭಾಷಣೆ (ಬೋರ್ಡ್ ಕೊಹ್ಲಿಯನ್ನು ಬದಿಗಿಡಲು ಪ್ರಯತ್ನಿಸುತ್ತಿದೆ) ಮಾಧ್ಯಮಗಳಲ್ಲಿ ನಡೆಯುತ್ತಲೇ ಇರುತ್ತದೆ ಮತ್ತು ಅದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ಶೀಘ್ರದಲ್ಲೇ ಫಾರ್ಮ್‌ಗೆ ಮರಳಬೇಕೆಂದು ನಾವು ಬಯಸುತ್ತೇವೆ ಮತ್ತು ತಂಡದ ಆಯ್ಕೆಗೆ ಸಂಬಂಧಿಸಿದಂತೆ, ನಾವು ಅದನ್ನು ಆಯ್ಕೆದಾರರಿಗೆ ಬಿಡುತ್ತೇವೆ ಎಂದರು.


ಇದನ್ನೂ ಓದಿ : IND vs WI : ನಾಲ್ಕನೇ ಟಿ20 ಮ್ಯಾಚ್​​ಗೆ ಟೀಂ ಇಂಡಿಯಾ Playing 11 ನಲ್ಲಿ ಭಾರಿ ಬದಲಾವಣೆ 


ವಿರಾಟ್ ಅವರೇ ನಾಯಕತ್ವ ತೊರೆದರು


ಇನ್ನು ಮುಂದುವರೆದು ಮಾತನಾಡಿದ ಅರುಣ್ ಕುಮಾರ್ ಧುಮಾಲ್, 'ನಾಯಕತ್ವಕ್ಕೆ ಸಂಬಂಧಿಸಿದಂತೆ, ನಾನು ಈಗ ಅದನ್ನು ಮಾಡಬೇಕಾಗಿಲ್ಲ ಎಂದು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಆದರೆ ಇದು ಅವರ ದೃಷ್ಟಿಕೋನ. ಅವರು ನಾಯಕತ್ವವನ್ನು ಬಿಟ್ಟುಕೊಡಲು ಬಯಸಿದ್ದರು, ಮತ್ತು ಇದು ಸಂಪೂರ್ಣವಾಗಿ ಅವರ ನಿರ್ಧಾರ ಮತ್ತು ನಾವು ಅದನ್ನು ಗೌರವಿಸುತ್ತೇವೆ. ನೋಡಿ, ಅವರು ಭಾರತೀಯ ಕ್ರಿಕೆಟ್‌ಗೆ ತುಂಬಾ ಕೊಡುಗೆ ನೀಡಿದ್ದಾರೆ, ಕ್ರಿಕೆಟ್ ಮಂಡಳಿಯಲ್ಲಿ ಎಲ್ಲರೂ ಅವರನ್ನು ಗೌರವಿಸುತ್ತಾರೆ ಎಂದರು.


ಟಿ20 ವಿಶ್ವಕಪ್ ಬಳಿಕ ಬದಲಾದ ನಾಯಕರು


ಟಿ20 ವಿಶ್ವಕಪ್ ಬಳಿಕ ಸ್ವತಃ ವಿರಾಟ್ ಕೊಹ್ಲಿಯೇ ಟಿ20 ತಂಡದ ನಾಯಕತ್ವ ತೊರೆದಿದ್ದರು. ಇದರ ನಂತರ ಬಿಸಿಸಿಐ ಸೀಮಿತ ಓವರ್‌ಗಳ ಸ್ವರೂಪ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಇಬ್ಬರು ಪ್ರತ್ಯೇಕ ನಾಯಕರನ್ನು ಬಯಸಿಲ್ಲ. ರೋಹಿತ್ ಶರ್ಮಾ ಮತ್ತೆ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕರಾದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಒಂದೇ ಒಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.


ಇದನ್ನೂ ಓದಿ : Team India : ಏಷ್ಯಾಕಪ್ 2022 ರ ಮುನ್ನವೆ ಕ್ಯಾಪ್ಟನ್ ರೋಹಿತ್​ಗೆ ಹೆಚ್ಚಿದ ಟೆನ್ಷನ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.