ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಧ್ಯದಲ್ಲೇ ಪಾಕಿಸ್ತಾನದ ಆಟಗಾರ ಇಂಜಮಾಮ್ ಉಲ್ ಹಕ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ತಮ್ಮ ಭರ್ಜರಿ ಫಾರ್ಮ್ ಮೂಲಕ ಈಗ 24 ಶತಕಗಳನ್ನು ಗಳಿಸಿದ್ದಾರೆ.ಕೇವಲ ಇನ್ನೊಂದು ಶತಕವನ್ನು ಗಳಿಸಿದರೆ ಸಾಕು, ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರ 25 ಶತಕಗಳ ದಾಖಲೆಯನ್ನು ಅವರು ಸರಿಗಟ್ಟಲಿದ್ದಾರೆ. 29 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು 72 ಟೆಸ್ಟ್ ಪಂದ್ಯಗಳಲ್ಲಿ  54.66 ಸರಾಸರಿಯಂತೆ 6286 ರನ್ ಗಳಿಸಿದ್ದಾರೆ.  


ಇನ್ನೊಂಡೆಗೆ ಇನ್ಝಮಾಮ್ ಉಲ್ ಹಕ್ ಅವರು 120 ಟೆಸ್ಟ್ಗಳಲ್ಲಿ 49.60 ಸರಾಸರಿಯಲ್ಲಿ 8830 ರನ್ ಗಳಿಸಿದ್ದಾರೆ.ಇದರಲ್ಲಿ ಒಟ್ಟು 24 ಶತಕಗಳು ಸೇರಿವೆ, ಟೆಸ್ಟ್ನಲ್ಲಿ ಹೆಚ್ಚಿನ ಶತಕಗಳ ಪಟ್ಟಿಯಲ್ಲಿ ಕೋಹ್ಲಿ 21 ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ ಅವರು 51 ಶತಕಗಳನ್ನು ದಾಖಲಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ತೆಂಡೂಲ್ಕರ್ 200 ಟೆಸ್ಟ್ಗಳಲ್ಲಿ 15921 ರನ್ ಗಳನ್ನೂ 53.78 ಸರಾಸರಿಯಲ್ಲಿ ಗಳಿಸಿದ್ದಾರೆ.ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವವರಲ್ಲಿ ಕೊಹ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.