Virat Kohli : ʼಧನ್ಯವಾದಗಳು ಬೆಂಗಳೂರುʼ.. ಫ್ಯಾನ್ಸ್ಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ..!
Virat Kohli Emotional Post : ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಪ್ಲೇಆಫ್ಗೆ ಪ್ರವೇಶಿಸದೆ ಹಿನ್ನೆಡೆ ಅನುಭವಿಸಿತು. ಕೊನೆಯವರೆಗೂ ರೋಚಕವಾಗಿ ಹೋರಾಡಿದರೂ ದುರದೃಷ್ಟವಶಾತ್ ಟಾಪ್-4ರಲ್ಲಿ ಆರ್ಸಿಬಿಗೆ ನಿಲ್ಲಲಾಗಲಿಲ್ಲ. ಇದೀಗ ವಿರಾಟ್ ಕೊಹ್ಲಿ ಎಲ್ಲರಿಗೂ ಧನ್ಯವಾದ ಹೇಳಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
Virat Kohli : ʼಈ ಸಲದ ಕಪ್ ನಮ್ದೆʼ ಅಂತ ಪ್ರತಿ ಬಾರಿ ಕಣಕ್ಕಿರುವ ಆರ್‌ಸಿಬಿ.. ಕೊನೆಯವರೆಗೂ ಹೋರಾಡಿ ಸೋಲುವುದು ವಾಡಿಕೆಯಾಗಿಬಿಟ್ಟಿದೆ. ಕಪ್ ಗೆಲ್ಲುವ ಹೋರಾಟ ಕಳೆದ 16 ಸೀಸನ್‌ಗಳಿಂದ ನಡೆಯುತ್ತಲೇ ಇದೆ. ಕರ್ಣನ ಸಾವಿಗೆ ಹಲವು ಕಾರಣಗಳಿದ್ದಂತೆ ಬೆಂಗಳೂರಿನ ಸೋಲಿಗೂ ಹಲವು ಕಾರಣಗಳಿದ್ದವು. ಈ ಸೀಸನ್ ನಲ್ಲಿ ನಾಯಕ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಮ್ಯಾಕ್ಸ್ ವೆಲ್ ಬಿಟ್ಟರೆ ಉಳಿದ ಬ್ಯಾಟ್ಸ್ ಮನ್‌ಗಳು ಕೈಕೊಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಸಿರಾಜ್ ಏಕಾಂಗಿ ಹೋರಾಟ ನಡೆಸಬೇಕಾಯಿತು.
ಈ ಸೀಸನ್‌ನಲ್ಲಿಯೂ ವಿರಾಟ್ ಕೊಹ್ಲಿ ಅಬ್ಬರಿಸಿದರು. ಸತತ ಶತಕಗಳೊಂದಿಗೆ ಆರ್‌ಸಿಬಿ ತಂಡವನ್ನು ಪ್ಲೇ-ಆಫ್‌ಗೆ ತರಲು ಶತ ಪ್ರಯತ್ನ ಮಾಡಿದರು. ಆದ್ರೂ, ಪಾಯಿಂಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೆಂಗಳೂರು ಪಡೆಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಮುಂದಿನ ಸಲ ಕಪ್ ನಮ್ದೆ ಎನ್ನುವ ವಿಶ್ವಾಸವನ್ನು ಆರ್‌ಸಿಬಿ ಅಭಿಮಾನಿಗಳು ಮುಂದುವರೆಸಿದ್ದಾರೆ. ಹೆಚ್ಚಾಗಿ ಸೋಲು, ನೋವು ಹೊಸತಲ್ಲ ಬಿಡಿ.. ಎಂದೆಂದಿಗೂ ಅಭಿಮಾನಿಗಳ ಪಾಲಿಗೆ ಆರ್‌ಸಿಬಿ ಗ್ರೇಟ್ ಟೀಂ... ಮುಂದಿನ ಸಲ ಕಪ್ ನಮ್ದೆ...
ಇದನ್ನೂ ಓದಿ: WTC ಫೈನಲ್’ಗೆ ಪ್ಲೇಯಿಂಗ್ 11 ಆಯ್ಕೆ ಮಾಡಿದ ರವಿಶಾಸ್ತ್ರಿ: Team Indiaದ ಈ ಸ್ಟಾರ್ ಬ್ಯಾಟ್ಸ್’ಮನ್’ಗಿಲ್ಲ ಸ್ಥಾನ!
ಇದೀಗ ವಿರಾಟ್ ಕೊಹ್ಲಿ ಬೆಂಗಳೂರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ. ಈ ಸೀಸನ್‌ನಲ್ಲಿ ಕೆಲವು ಅದ್ಭುತ ಕ್ಷಣಗಳಿವೆ. ಆದರೆ ದುರದೃಷ್ಟವಶಾತ್ ನಾವು ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ನಿರಾಶೆಯಾದರೂ.. ನಾವು ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪ್ರತಿ ಹಂತದಲ್ಲೂ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು..."ಎಂದು ಬಾವುಕ ನುಡಿಗಳನ್ನಾಡಿದ್ದಾರೆ. IPL 2023ನಲ್ಲಿ ಕೊಹ್ಲಿ 14 ಪಂದ್ಯಗಳಲ್ಲಿ 639 ರನ್ ಗಳಿಸಿದ್ದಾರೆ. ಎರಡು ಶತಕ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ (7) ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
ಕ್ರಿಕೆಟ್ ದಿಗ್ಗಜ ಬ್ರೆಟ್ ಲೀ ಪ್ರಕಾರ ಭಾರತದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ ಕೊಹ್ಲಿ ಅಲ್ಲ… ಈ ಬ್ಯಾಟ್ಸ್’ಮನ್ ಬೆಸ್ಟ್ ಅಂತೆ!
ಬೌಲಿಂಗ್ ನಲ್ಲಿ ಗುಣಮಟ್ಟದ ಸ್ಪಿನ್ನರ್ ಗಳ ಕೊರತೆ ಬೆಂಗಳೂರಿನ ಯಶಸ್ಸಿನ ಮೇಲೆ ಪರಿಣಾಮ ಬೀರಿತು. ಯುಜ್ವೇಂದ್ರ ಚಹಾಲ್ ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ವನಿಂದು ಹಸರಂಗದ ಮೇಲೆ ತಂಡ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು, ಆದ್ರೆ ಅದು ವಿಫಲವಾಯಿತು. ನ್ಯೂಜಿಲೆಂಡ್‌ನ ಸ್ಪಿನ್ ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಉತ್ತಮ ಪ್ರದರ್ಶನ ನೀಡಲಿಲ್ಲ. ಕರ್ಣ್ ಶರ್ಮಾ ಅವರ ಮಿಂಚು ಒಂದು ಅಥವಾ ಎರಡು ಪಂದ್ಯಗಳಿಗೆ ಸೀಮಿತವಾಗಿತ್ತು. ಪೇಸ್ ಬೌಲಿಂಗ್ ನಲ್ಲೂ ಸಿರಾಜ್ ಬಿಟ್ಟರೆ ಯಾರೂ ಅಷ್ಟಾಗಿ ಆಡಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ