ನವದೆಹಲಿ: ಮೈದಾನ್ ದಲ್ಲಿ ಕೊಹ್ಲಿ ಸಂಭ್ರಮ ವ್ಯಕ್ತಪಡಿಸುವ ಪರಿ ಎದುರಾಳಿಗೆ ಎದುರೇಟು ನೀಡಿದ ಹಾಗೆ ಇರುತ್ತೆ.ಈಗ ನಿನ್ನೆ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಆರ್ಸಿಬಿ ವಿರುದ್ಧ ನಡೆದ ಪಂದ್ಯವು ಇಂತಹ ಕ್ಷಣಕ್ಕೆ ಸಾಕ್ಷಿಯಾಯಿತು. 



COMMERCIAL BREAK
SCROLL TO CONTINUE READING

ಆರ್ಸಿಬಿ ಗಳಿಸಿದ 203 ರನ್ ಗಳನ್ನು ತಲುಪಲು ಪಂಜಾಬ್ ಗೆ ಕೊನೆಯ ಓವರ್ ನಲ್ಲಿ 27 ರನ್ ಗಳ ಅವಶ್ಯಕತೆ ಇತ್ತು.ಈ  ವೇಳೆ ಉಮೇಶ್ ಯಾದವ್ ಅವರ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿದರು. ಇದೇ ರೀತಿ ಎರಡನೇ ಎಸೆತವನ್ನು ಕೂಡ ಅವರು ಸಿಕ್ಸರ್ ಬಾರಿಸಲು ಮುಂದಾದರು.ಆದರೆ ಅದು ನೇರವಾಗಿ ಕೊಹ್ಲಿ ಅವರಿಗೆ ಕ್ಯಾಚ್ ಸಿಕ್ಕಿತು. ಇದಾದ ನಂತರ ಕೊಹ್ಲಿ ರೋಷ ಭರಿತ ಪ್ರತಿಕ್ರಿಯೆಯನ್ನು ನೀಡಿದರು. 



ಪಂದ್ಯ ಮುಗಿದ ಬಳಿಕ ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅಶ್ವಿನ್ " ನಾನು ಉತ್ಸಾಹದಿಂದ ಆಡಿದೆ,ಅದೇ ರೀತಿ ಕೊಹ್ಲಿ ಆಡಿದ್ದಾನೆ" ಎಂದು ಹೇಳಿದರು.ಇನ್ನೊಂದೆಡೆ ಕೊಹ್ಲಿ ಮಾತನಾಡಿ " ನಾವು ಆಡಿದ ಕಳೆದ ಐದು ಪಂದ್ಯಗಳಲ್ಲಿ ಒಟ್ಟು ನಾಲ್ಕು ಪಂದ್ಯಗಳಲ್ಲಿ ನಾವು ಜಯ ಸಾಧಿಸಿದ್ದೇವೆ. ಈಗ ನಾವು ನಮ್ಮ ಕ್ರಿಕೆಟ್ ಆಟದ ಸಂತಸವನ್ನು ಅನುಭವಿಸುತ್ತಿದ್ದೇವೆ. ಇಂದಿನ ರಾತ್ರಿ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿ .ಸ್ಟೋನಿಸ್ ಮತ್ತು ಎಬಿಡಿ ಅವರ ಜೊತೆಯಾಟ ಪಂದ್ಯದ ಚಿತ್ರವನ್ನೇ ಬದಲಿಸಿತು. ನಾವು 175 ಉತ್ತಮ ಮೊತ್ತವೆಂದು ತಿಳಿದಿದ್ದೆವು.ಆದರೆ ಎಬಿ ಮತ್ತು ಮಾರ್ಕಸ್  ಮೊತ್ತವನ್ನು 200 ಕ್ಕೆ ಹೆಚ್ಚಿಸಿದರು.ಅವರು ಆಡಿದ ರೀತಿ ನಿಜಕ್ಕೂ ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು  ಹೇಳಿದರು.