ನವದೆಹಲಿ : ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನವೇ ಸಮಸ್ಯೆಗಳು ಸುಳಿಯಲ್ಲಿ ಸಿಕ್ಕು ಹೊದ್ದಾಡುತ್ತಿದೆ.  ಟೀಂ ಇಂಡಿಯಾ ಮಾಜಿ ಕ್ಯಾಪಟನ್ ವಿರಾಟ್ ಕೊಹ್ಲಿ, ಇತರ ಕೆಲವು ಆಟಗಾರರಿಗೆ ಕೋವಿಡ್ -19 ಟೆಸ್ಟ್ ಮಾಡಿಸಿದ್ದು ಪಾಸಿಟಿವ್ ಬಂದಿವೆ ಎಂದು ಹೇಳಲಾಗುತ್ತದೆ. ಕೊಹ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

"ಹೌದು, ಮಾಲ್ಡೀವ್ಸ್‌ನಲ್ಲಿ ಹಾಲಿ ಡೇ ಮುಗಿಸಿ ಹಿಂದಿರುಗಿದ ನಂತರ ವಿರಾಟ್ ಕೋವಿಡ್‌ನಿಂದ ಬಳಲುತ್ತಿದ್ದರು, ಆದರೆ ಅವರು ಈಗ ಚೇತರಿಸಿಕೊಂಡಿದ್ದಾರೆ" ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ : IND vs SA T20I: ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಮೇಲ್ಛಾವಣಿ.. ಟ್ರೋಲ್‌ಗೆ ತುತ್ತಾದ BCCI


“ಇದರರ್ಥ ಜೂನ್ 24 ರಿಂದ ಲೀಸೆಸ್ಟರ್‌ಶೈರ್ ವಿರುದ್ಧದ ಟೀಂ ಇಂಡಿಯಾ ಟಾರ್ ಪಂದ್ಯವು ಕೋಚ್ ರಾಹುಲ್ ದ್ರಾವಿಡ್ ಬಯಸಿದಷ್ಟು ಚೆನ್ನಾಗಿರಲಿಲ್ಲ, ಏಕೆಂದರೆ ಟೀಂ ಇಂಡಿಯಾ ಕೆಲ  ಆಟಗಾರರಳ್ಳಿ ಕೋವಿಡ್ ಕಾಣಿಸಿಕೊಂಡ ಕಾರಣ ಓವರ್‌ಲೋಡ್ ಆಗಿರಬಹುದು ಎಂದು ಎಂಬುದು ವೈದ್ಯಕೀಯ ಸಲಹೆಗಾರರ ಹೇಳಿಕೆಯಾಗಿದೆ.


 ವಿಸಿಟರ್ಸ್ ಕ್ಯಾಂಪ್ ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಕಾರಣ ಕಳೆದ ವರ್ಷ ಭಾರತದ ಇಂಗ್ಲೆಂಡ್ ಪ್ರವಾಸವನ್ನು ಅಕಾಲಿಕವಾಗಿ ಮುಕ್ತಾಯಗೊಳಿಸಲಾಯಿತು, ಹೆಡ್ ಕೋಚ್ ರವಿಶಾಸ್ತ್ರಿ ಕೂಡ ಕೊರೋನಾ ಟೆಸ್ಟ್ ಮಾಡಿಸಿದರು. ಭಾರತ ತಂಡ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದಂತೆ, ಮತ್ತೆ ಈ ಪರಿಸ್ಥಿತಿ ಪುನರಾವರ್ತನೆಯಾಗುವ ಆತಂಕವಿದೆಈ ಎಂದು ಹೇಳಲಾಗುತ್ತಿದೆ.


ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿಯಲ್ಲಿರುವ ಬಿಸಿಸಿಐ 5ನೇ ಟೆಸ್ಟ್ ಪೂರ್ಣಗೊಳ್ಳದೆ ಸರಣಿಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿದೆ. ಅಮಾನತುಗೊಂಡಿರುವ 5 ನೇ ಟೆಸ್ಟ್ ಈಗ ಜುಲೈ 01 ರಿಂದ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ, ನಂತರ ಟಿ20ಐ ಮತ್ತು ODI ಸರಣಿ ನಡೆಯಲಿದೆ.


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಅವರು ಆಟಗಾರರಿಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಏಕೆಂದರೆ ಮಂಡಳಿಯು ಕಳೆದ ಬಾರಿ ನಡೆದಂತಹ ಸಂಕಷ್ಟ ಎದುರಿಸಲು ತಯಾರಿಲ್ಲ ಎಂದು ತಿಳಿಸಿದ್ದಾರೆ. 


“ಯುಕೆಯಲ್ಲಿ ಕೋವಿಡ್ ಕಡಿಮೆಯಾಗಿದೆ. ಆದರೆ ಟೀಂ ಇಂಡಿಯಾ ಆಟಗಾರರು ಹೆಚ್ಚು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ  ನೀಡಿದೆ. 


ಇದನ್ನೂ ಓದಿ : IND vs SA 5th T20: ಮಳೆಯಿಂದಾಗಿ ಬೆಂಗಳೂರು ಪಂದ್ಯ ರದ್ದು, ಸರಣಿ ಸಮ


ಟೀಂ ಇಂಡಿಯಾ ಕ್ಯಾಂಪ್ ನಲ್ಲಿ ಕೋವಿಡ್ -19 ಪ್ರಕರಣಗಳ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಖಚಿತ ಮಾಹಿತಿ ನೀಡಿಲ್ಲ, ಕೊರೋನಾ ನಿಜವಾಗಿಯೂ 
ಟೀಂ ಇಂಡಿಯಾ ಕ್ಯಾಂಪ್ ಗೆ ಎಂಟ್ರಿ ನೀಡಿದರೆ ಸರಣಿಯ ವೇಳಾಪಟ್ಟಿಯು ಉಲ್ಟಾ ಆಗುವ ಸಾಧ್ಯತೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.