Virat Kohli, IND vs SA Test: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಸೆಂಚೂರಿಯನ್‌’ನಲ್ಲಿ ಪ್ರಾರಂಭವಾಗಿದೆ. ಈ ಪಂದ್ಯದೊಂದಿಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಪುನರಾಗಮನ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಜನ್ಮದಿನದಿಂದ ʻಯುವನಿಧಿʼ ಯೋಜನೆ ಆರಂಭ!


ಇನ್ನು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಒಂದು ವೇಳೆ ಮೊದಲ ಟೆಸ್ಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದರೆ ಭಾರತದ ಇಬ್ಬರು ದಿಗ್ಗಜರ ದಾಖಲೆಯನ್ನು ವಿರಾಟ್ ಬ್ರೇಕ್ ಮಾಡಲಿದ್ದಾರೆ.  


ವಿರಾಟ್ ಕೊಹ್ಲಿ ಇದುವರೆಗೆ 14 ಪಂದ್ಯಗಳಲ್ಲಿ 56.18 ಸರಾಸರಿಯಲ್ಲಿ 1236 ರನ್ ಗಳಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಆಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಹೀಗಿರುವಾಗ ಕೊಹ್ಲಿಗೆ ಉತ್ತಮ ಅವಕಾಶವೊಂದಿದೆ. ಸೆಂಚುರಿಯನ್ ಟೆಸ್ಟ್‌’ನಲ್ಲಿ ಕೊಹ್ಲಿ 17 ರನ್ ಗಳಿಸಿದರೆ ರಾಹುಲ್ ದ್ರಾವಿಡ್ (1252 ರನ್) ಮತ್ತು 71 ರನ್ ಗಳಿಸಿದರೆ ವೀರೇಂದ್ರ ಸೆಹ್ವಾಗ್ (1306 ರನ್) ಅವರ ದಾಖಲೆಯನ್ನು ಮುರಿಯುವುದು ಖಚಿತ.


ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ 1741 ರನ್ ಗಳಿಸುವ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ. ಆದರೆ, ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ ಹಲವು ಇನ್ನಿಂಗ್ಸ್’ಗಳ ಅಗತ್ಯವಿದೆ. ಅಂದರೆ, 502 ರನ್ ಗಳಿಸಿದರೆ ಮಾತ್ರ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂದೆನಿಸಿಕೊಳ್ಳುತ್ತಾರೆ.


ಆಫ್ರಿಕಾ ವಿರುದ್ಧದ ಟೆಸ್ಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್


  • ಸಚಿನ್ ತೆಂಡೂಲ್ಕರ್ - 25 ಟೆಸ್ಟ್‌’ಗಳಲ್ಲಿ 1741 ರನ್

  • ವೀರೇಂದ್ರ ಸೆಹ್ವಾಗ್ - 15 ಟೆಸ್ಟ್‌’ಗಳಲ್ಲಿ 1306 ರನ್

  • ರಾಹುಲ್ ದ್ರಾವಿಡ್ - 21 ಟೆಸ್ಟ್‌’ಗಳಲ್ಲಿ 1252 ರನ್

  • ವಿರಾಟ್ ಕೊಹ್ಲಿ - 14 ಟೆಸ್ಟ್‌’ಗಳಲ್ಲಿ 1236 ರನ್*

  • ವಿವಿಎಸ್ ಲಕ್ಷ್ಮಣ್ - 19 ಟೆಸ್ಟ್‌’ಗಳಲ್ಲಿ 976 ರನ್


ಇದನ್ನೂ ಓದಿ: 31 ವರ್ಷದಲ್ಲಿ ಯಾವೊಬ್ಬ ನಾಯಕನೂ ಮಾಡದ ಆ ದಾಖಲೆ ಸೃಷ್ಟಿಸ್ತಾರಾ ರೋಹಿತ್?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ